ಸಿ ಸಿ ರಸ್ತೆ ಒಳಚರಂಡಿ ಸ್ಥಳಾಂತರ ಸರಿಯಲ್ಲ : ಶೇಖ ಸದ್ದಾಂ ಹುಸೇನ್
ಜೇವರ್ಗಿ :ಜು.26 : ಪಟ್ಟಣದ ಸೋಫಿ ಕಾಲೋನಿ ಬಡಾವಣೆಯಲ್ಲಿ ಸಿಸಿ ರಸ್ತೆ ಹಾಗೂ ಒಳಚರಂಡಿ ಮಾಡಲು ಅಧಿಕಾರಿಗಳು ಬಂದು ಜಿಪಿಎಸ್ ಮಾಡಿಕೊಂಡು ಹೋಗಿ, ಇವಾಗ ಬೇರೆ ಕಡೆ ರಸ್ತೆ ಒಳಚರಂಡಿ ಮಾಡುತ್ತಿರುವುದ ಸರಿಯಲ್ಲ ಎಂದು ಸ್ಥಳಿಯ ನಿವಾಸಿ ಶೇಖ ಸದ್ದಾಂ ಹುಸೇನ್ ಆಗ್ರಹಿಸಿದರು.
ಸೋಫಿ ಕಾಲೋನಿಯ ಅನೇಕ ಮನೆಗಳಿಗೆ ತೆರಳಲು ಸರಿಯಾದ ರಸ್ತೆ ಇಲ್ಲದ ಕಾರಣಕ್ಕೆ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿ ಮಾಡಿಕೊಂಡಾಗ ಪುರಸಭೆ ಸದಸ್ಯರು ಹಾಗೂ ಅಧೀಕಾರಿಗಳು ರಸ್ತೆ ಮತ್ತು ಒಳಚರಂಡಿ ನಿರ್ಮಾಣಕ್ಕೆ ಮುಂದಾಗಿದ್ದರು. ಆಸಿಫ್ ಜೆಇ ಮನೆ ಪಕ್ಕದಲ್ಲಿ ಈ ರಸ್ತೆ ಮಾಡಲು ಅಧೀಕಾರಿಗಳು ಜಿಪಿಎಸ್ ಮಾಡಿಕೊಂಡು ಹೋಗಿ ತಿಂಗಳಾದರು ಬರುತ್ತಿಲ್ಲ. ಸದರಿ ರಸ್ತೆಯನ್ನ ಸ್ಥಳಾಂತರಿಸಿ ಕಾಮಗಾರಿಯನ್ನ ಮಾಡುವ ಉದ್ದೆಶದಿಂದ ಅಧೀಕಾರಿಗಳು ವಿಳಂಬ ತೊರುತ್ತಿದ್ದಾರೆ.
ಕೆಲವು ರಾಜಕಿಯ ಮುಖಂಡರ ದಬ್ಬಾಳಿಕೆಯಿಂದ ರಸ್ತೆ ಒಳಚರಂಡಿ ಬೆರೆಕಡೆ ಸ್ತಳಾಂತರಿಸಲು ಒತ್ತಡ ಹೆರುತ್ತಿದ್ದಾರೆ ಎನ್ನುವ ಮಾತುಗಳು ಕೆಳಿಬರುತ್ತಿವೆ. ಆದ್ದರಿಂದ ಅಧೀಕಾರಿಗಳು ಸರಿಯಾದ ಸ್ತಳದಲ್ಲಿ ರಸ್ತೆ ನಿರ್ಮಿಸಬೇಕು ಇಲ್ಲವಾದಲ್ಲಿ ಅಧಿಕಾರಿಗಳ ವಿರುದ್ದ ಹೋರಾಟ ಮಾಡಬೇಕಾಗುತ್ತದೆ. ಸರಿಯಾದ ಸ್ಥಳದಲ್ಲಿ ರಸ್ತೆ ಮತ್ತು ಒಳಚರಂಡಿ ನಿರ್ಮಿಸಿ ಸಾರ್ವಜನಿಕರಿಗೆ ಅನುಕುಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.