ಕೆರೆ ಆವರಣ ಸ್ವಚ್ಛತೆಗೆ ಆಗ್ರಹ
ಚನ್ನಮ್ಮನ ಕಿತ್ತೂರು,ಜು೨೬: ಮಳೆ ಆರಂಭವಾದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳ ಭಯ ಎದುರಾಗಿದೆ. ದಿನದಿಂದ ದಿನಕ್ಕೆ ಜಿಲ್ಲೆಯಾಧ್ಯಂತ ಡೆಂಗ್ಯೂ ಹೆಚ್ಚಾಗುತ್ತಿದ್ದು ಕಿತ್ತೂರು ಪಟ್ಟಣದ ಗುರುವಾರ ಪೇಟೆಯ ಕೊಂಡವಾಡ ಚೌಕದಲ್ಲಿಯ ಚನ್ನಮ್ಮನ ಕಾಲದ ಐತಿಹಾಸಿಕ ರಣಗಟ್ಟಿಕೆರೆ ಅಭಿವೃದ್ಧಿಗೆ ಹಿಂದೇಟು ಹಾಕಿದ ಸಂಬಂಧಪಟ್ಟ ಅಧಿಕಾರಿಗಳು ಕೆರೆಯ ಅಕ್ಕ ಪಕ್ಕದಲ್ಲಿ ಕಸದ ತೊಟ್ಟಿಗಳು ಇದ್ದು ಹಲವಾರು ವರ್ಷಗಳು ಕಳೆದರು ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಂತೆ ಕಾಣುತ್ತಿದೆಯೆಂಬುದು ಜನರ ಆರೋಪವಾಗಿದೆ.
ಪಟ್ಟಣದಲ್ಲಿ ಸಾಂಕ್ರಾಮಿಕ ರೋಗಗಳನ್ನು ಹರಡದಂತೆ ನಿಯಮಗಳನ್ನು ಪಾಲಿಸುತ್ತಿದ್ದೇವೆ ಎಂದು ಹೇಳುತ್ತಿರುವ ಅಧಿಕಾರಿಗಳು ಕೇವಲ ತೋರಿಕೆಗೆ ಕೆಲಸ ಮಾಡಿರುವುದು ಕಂಡು ಬಂದಿದೆ.
ರಣಗಟ್ಟಿಕೆರೆ ಸುತ್ತಲೂ ಗಿಡಗಂಟಿಗಳು ಎತ್ತರವಾಗಿ ಬೆಳೆದು ನಿಂತಿವೆ .ಆದರೆ ಕೆರೆಯ ಪಕ್ಕದಲ್ಲಿ ಚರಂಡಿಯಂತಾಗಿ ಕೊಳೆತು ನಾರುತ್ತಿರುವುದು ಕಣ್ಣಿಗೆ ಕಂಡರೂ ಕಾಣದಂತೆ ಇರುವುದು ವಿರ‍್ಯಾಸ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನಹರಿಸಿ ಸ್ವಚ್ಛಗೊಳಿಸಲು ಮುಂದಾಗಬೇಕಾಗಿದೆ. ಈ ಕೆಲಸವಾದಿದ್ದರೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಕಛೇರಿಗೆ ಮುತ್ತಿಗೆ ಹಾಕಲಾಗುವುದೆಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.