ಕಾರ್ಗಿಲ್ ವಿಜಯೋತ್ಸವ ಆಚರಣೆ
ನವಲಗುಂದ,ಜು.೨೫: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ತಾಲೂಕ ಘಟಕ ಹಾಗೂ ಮಾಜಿ ಸೈನಿಕರ ಕಲ್ಯಾಣ ಸಂಘ ಇವರ ಸಹಯೋಗದೊಂದಿಗೆ ೨೫ ನೇ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಪಟ್ಟಣ ಗಣಪತಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಾಜಿ ಸೈನಿಕರು ಭಾರತದ ಸೈನಿಕರ ಪರ ಜಯಕಾರ ದೇಶಾಭಿಮಾನದ ಪರ ಘೋಷಣೆಗಳನ್ನು ಮೊಳಗಿಸುತ್ತಾ ರೈತ ಹುತಾತ್ಮ ವೀರಗಲ್ಲಿನವರಿಗೆ ಪಥಸಂಚಲನ ನಡೆಸಿ ರೈತ ಹುತಾತ್ಮ ವೀರಗಲ್ಲಿಗೆ ಪುಷ್ಪ ನಮನದೊಂದಿಗೆ ಶ್ರದ್ದಾಂಜಲಿ ಅರ್ಪಿಸಿದರು.
ತಹಶೀಲ್ದಾರ ಸುಧೀರ್ ಸಾಹುಕಾರ್, ಅಧ್ಯಕ್ಷರಾದ ಸಂಜೀವ ದೊಡ್ಡಮನಿ, ಅಡಿವೆಪ್ಪಗೌಡ ನಾಗಗೌಡ,ನಿಂಗಪ್ಪ ಸಿಂಗೋಟಿ, ಚನ್ನಬಸನಗೌಡ ಗಂಗನಗೌಡ್ರ, ಮಲ್ಲಿಕಾರ್ಜುನ ಮ. ಮುತ್ತಲಗೇರಿ, ಶರಣಪ್ಪ ಕೆಂಚಪ್ಪನವರ, ಬಸವರಾಜ. ಗಾಣಿಗೇರ, ಸುರೇಶ ಗಾಣಿಗೇರ, ಸಂತೋಷಕುಮಾರ ಹಿರೇಮಠ, ಬೂದಪ್ಪ ಕರಿ, ಶಂಕರಪ್ಪ ದೋಟಿಕಲ್ಲ, ನಾಗರಾಜ ಕದಂ, ಮುರ್ತುಜಾ ದಾವಲಖಾನ್ನವರ, ನಾಗಪ್ಪ ಮೂಳಕನವರ ರಾಮಲಿಂಗಪ್ಪ ದೊಡಮನಿ, ಸಿದ್ದಪ್ಪ ತಿರ್ಲಾಪೂರ, ಚನಬಸಯ್ಯ ಪೂಜಾರ, ಮಹಾಂತಪ್ಪ ಹರ್ತಿ, ಕುಶಲಕುಮಾರ ಬ್ಯಾಳಿ, ರಾಮಚಂದ್ರ ತಹಶೀಲ್ದಾರ್, ಬಸವರಡ್ಡಿ ಕರಡ್ಡಿ, ಮಹಾಂತೇಶ್ ಗಲಗಲಿ, ಶರಣಪ್ಪ ಬೆಟಸುರ, ಯಲ್ಲಪ್ಪ ಕೌಜಗೇರಿ, ನಾಗಪ್ಪ ಮೂಳಕನವರ, ಈರಪ್ಪ ಬಾಂತಗೇರಿ, ಸಂಜೀವಕುಮಾರ ದೊಡಮನಿ, ಮಲ್ಲಪ್ಪ ನರಗುಂದ, ಸೇರಿದಂತೆ ನೂರಾರು ಮಾಜಿ ಸೈನಿಕರು, ವಿವಿಧ ಸಂಘ ಸಂಸ್ಥೆಗಳು ಎನ್ ಸಿ ಸಿ ವಿದ್ಯಾರ್ಥಿಗಳು ರೈತ ಹೋರಾಟಗಾರರು ಉಪಸ್ಥಿತರಿದ್ದರು.