ಚಿತ್ರಕಲೆಗೆ ಧಾರವಾಡ ಕೊಡುಗೆ ಅಪಾರ
ಧಾರವಾಡ,ಜು.೨೬: :ಚಿತ್ರಕಲೆಯಲ್ಲಿದೇಶಕ್ಕೆಬಹುದೊಡ್ಡಕೊಡುಗೆಕೊಟ್ಟಿದ್ದುಧಾರವಾಡ ನೆಲ. ಇದು ಹಲವು ಕಾಣಿಕೆಗಳನ್ನು ನೀಡಿದ ನಗರ.ಈ ನೆಲದಲ್ಲಿ ಹೋರಾಟದ ಕಿಚ್ಚು ಇದೆ.ಇಲ್ಲೊಂದು ಶಕ್ತಿ ಇದೆ.ಆಕಾರಣಕ್ಕೆ ನಿರಂತರವಾಗಿ ಚಲನಶೀಲವಾಗಿರುತ್ತಿದೆಎಂದುಬೆಂಗಳೂರಿನ ಕರ್ನಾಟಕ ಲಲಿತ ಕಲಾ ಅಕಾಡೆಮಿಯಅಧ್ಯಕ್ಷ ಪ.ಸ. ಕುಮಾರ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘದ೧೩೫ ನೇ ಸಂಸ್ಥಾಪನಾ ದಿನಾಚರಣೆಕಾರ್ಯಕ್ರಮದಲ್ಲಿ ಸಂಘವು ನೂತನವಾಗಿ ನಿರ್ಮಿಸಿರುವ `ಚಿತ್ರಕಲಾಗ್ಯಾಲರಿ’ ಉದ್ಘಾಟಿಸಿ ಮಾತನಾಡಿದರು.
ಚಿತ್ರಕಲೆಗೆ ಪ್ರಾಮುಖ್ಯತೆಕೊಟ್ಟಕರ್ನಾಟಕ ವಿದ್ಯಾವರ್ಧಕ ಸಂಘದನಡೆ ಮಾದರೀಯ ನಡೆಯಾಗಿದೆ.ಸಾಂಪ್ರದಾಯಕಚಿತ್ರಕಲೆ ನಮ್ಮ ಕಲೆ.ಅದಕ್ಕೆ ಸಿಗಬೇಕಾದ ಸ್ಥಾನಮಾನ ಸಿಗುತ್ತಾ ಇಲ್ಲ. ಈ ಕುರಿತಂತೆಏನಾದರೂ ಮಾಡಿ ಸರಿಯಾದಸ್ಥಾನಮಾನನೀಡುವಕಾರ್ಯವನ್ನು ಮಾಡಲುಕರ್ನಾಟಕ ಲಲಿತ ಕಲಾ ಅಕಾಡೆಮಿಒಂದುಯೋಜನೆಯಾಗಿ ಕೈಗೆತ್ತಿಕೊಳ್ಳುತ್ತಿದೆ ಎಂದರು.
ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಹಿರಿಯಕಲಾವಿದಎಂ.ಆರ್.ಬಾಳಿಕಾಯಿ,ಕಲಾವಿದ ಮತ್ತು ಕಲಾ ಗ್ಯಾಲರಿಕಲಾವಿದ ಬೆಳವಣಿಗೆಯ ದಾರಿಅದು.ಗ್ಯಾಲರಿ ಸಮಾಜದ ಆಗುಹೋಗುಗಳನ್ನು ಎತ್ತಿ ಹಿಡಿಯುತ್ತದೆ.ಹಿರಿಯರನ್ನು ನೆನಸಿಕೊಂಡಾಗ ಮಾತ್ರಒಬ್ಬ ಶ್ರೇಷ್ಟಕಲಾವಿದನಾಗಿ ರೂಪಗೊಳ್ಳಲು ಸಾಧ್ಯ.ಕಲಾವಿದನಾದವನುಎಲ್ಲ ರಸಭಾವನೆಗಳನ್ನು ಹೊಂದಿರಬೇಕು.ಅಂತರಾಷ್ಟ್ರೀಯ ಭಾಷೆಚಿತ್ರಕಲೆ. ತನ್ನಿಂದತಾನೆ ಮಾತಾಡುವ ಕಲೆ ಇದಾಗಿದೆ.ಕಲಾಕೃತಿಯನ್ನು ನೋಡುವವನುಒಳಗಣ್ಣಿನಿಂದ ಕಲೆಯನ್ನು ನೋಡಬೇಕು.ಆವಾಗಲೇ ಒಂದು ಕಲೆ ಅರ್ಥವಾಗಲು ಸಾಧ್ಯ.ಕಲೆಗೆ ವಯಸ್ಸಿನ ಹಂಗಿಲ್ಲ.ಒಬ್ಬಚಿತ್ರಕಲಾವಿದ ಬರೀ ಕಲೆ ಬಿಡಿಸಿದರೆ ನಡೆಯುವುದಿಲ್ಲ. ಅವನು ಸಾಹಿತ್ಯದಆರಾಧಕನಾಗಿರಬೇಕು, ವಿಶ್ಲೇಷಿಸುವ ಶಕ್ತಿ ಇರಬೇಕು ಎಂದರು.
ಮುಖ್ಯಅತಿಥಿಯಾಗಿಆಗಮಿಸಿದ್ದ ಗದಗ ವಿಜಯ ಕಲಾ ಕಾಲೇಜಿನ ಸಂಸ್ಥಾಪಕ ಅಶೋಕ ಅಕ್ಕಿ ಮಾತನಾಡಿ, ಲಲಿತ ಕಲೆಗಳಿಗೆ ಸಂಸ್ಕೃತಿಗೆ ಪ್ರೋತ್ಸಾಹದಕೊರತೆಇದೆ.ಅದು ನೀಗಬೇಕಿದೆ.ಪಿಯುಸಿ ಕಲಿಕೆಯಲ್ಲಿ ಕಲೆಗೆ ಸಂಬಂಧಿಸಿದಂತೆ ಪಠ್ಯವನ್ನು ಅಳವಡಿಸಬೇಕು. ಸಂಗೀತಕಲೆಯಲು ಅವಕಾಶ ಇರುವಂತೆ ಚಿತ್ರಕಲೆಯಕಲಿಕೆಗೂ ಅವಕಾಶ ಇರಬೇಕು.ಕಲಾ ಕ್ಷೇತ್ರ ಬೆಳೆಯಬೇಕೆಂದರೆ ಎಲ್ಲರೂ ಹಿರಿಯಕಲಾವಿದರು ಸೇರಿಆಲೋಚಿಸಬೇಕು. ಬರೀ ಸಮಸ್ಯೆಗಳನ್ನು ಹೇಳಿಕೊಳ್ಳದೇ ಕ್ರಿಯಾತ್ಮಕವಾಗಿ ಕೆಲಸ ಮಾಡಿ ಕಲಾ ಲೋಕ ಶ್ರೀಮಂತಗೊಳಿಸಬೇಕು ಎಂದರು
ಇನ್ನೋರ್ವ ಮುಖ್ಯಅತಿಥಿರೇಣುಕಾ ಮಾರ್ಕೆಂಡೆ ಮಾತನಾಡಿದರು
ಸಂಘದಅಧ್ಯಕ್ಷತೆಯನ್ನು ಕ.ವಿ.ವ.ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ವಹಿಸಿದ್ದರು.
ಎಫ್. ವಿ. ಚಿಕ್ಕಮಠ ಹಾಗೂ ಪ್ರೊ.ಬಸವರಾಜಕುರಿ ಅತಿಥಿಗಳನ್ನು ಪರಿಚಯಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿಕಾರ್ಯಕ್ರಮ ನಿರೂಪಿಸಿದರು.ಪ್ರಾರಂಭದಲ್ಲಿ ಸಂಗೀತ ವಿದ್ಯಾರ್ಥಿನಿ ಕು.ಖುಷಿ ಢವಳಿ ಸಂಗೀತ ನಡೆಸಿಕೊಟ್ಟರು.ಅವರಿಗೆ ಅನೀಲ ಮೇತ್ರಿತಬಲಾ ಹಾಗೂ ಬಸವರಾಜ ಹೂಗಾರ ಹಾರ್ಮೋನಿಯಂ ಸಾಥ್ ನೀಡಿದರು.