ಹುಬ್ಬಳ್ಳಿಯಲ್ಲಿ ಅಂರ‍್ರಾಜ್ಯ ಕಳ್ಳನ ಬಂಧನ ಮುಂಬೈ ಮೂಲದ ಆರೋಪಿ ಕಾಲಿಗೆ ಗುಂಡು
ಹುಬ್ಬಳ್ಳಿ, ಜು೨೬: ಹಲವಾರು ನಗರಗಳಲ್ಲಿ ದರೋಡೆ, ಕೊಲೆಯತ್ನ ಇತ್ಯಾದಿ ಪ್ರಕರಣಗಳಿದ್ದ ಕುಖ್ಯಾತ ಅಂರ‍್ರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಂಬೈ ಮೂಲದ ಫರ್ಹಾನ್ ಶೇಖ್ ಎಂಬಾತನೇ ಬಂಧಿತನಾಗಿದ್ದು ಈತನ ಮೇಲೆ ಹೈದ್ರಾಬಾದ್, ಗುಲ್ಬರ್ಗ, ಅಹ್ಮದ್ ನಗರ, ಸೂರತ್, ಮುಂಬೈಗಳಲ್ಲಿ ದರೋಡೆ ಹಾಗೂ ಕೊಲೆ ಯತ್ನದ ಪ್ರಕರಣಗಳಿವೆ.
ನಗರದ ಕೇಶ್ವಾಪೂರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಿನ್ನದ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ದಿನಗಳಿಂದ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.
ನಿನ್ನೆ ರಾತ್ರಿ ಈತನನ್ನು ಬಂಧಿಸಿದ ಪೊಲೀಸರು ಇಂದು ಈತನ ಸಹಚರರ ಬಂಧನಕ್ಕಾಗಿ ತೆರಳಿದ್ದರು.
ಈ ಸಂದರ್ಭದಲ್ಲಿ ನಗರದ ಹೊರವಲಯದ ಗಾಮನಗಟ್ಟಿ ರಸ್ತೆಬಳಿಯ ತಾರಿಹಾಳ ಕ್ರಾಸ್ ಸಮೀಪ ಆರೋಪಿ ಫರ್ಹಾನ್, ಪೊಲೀಸರ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನ ನಡೆಸಿದನು.
ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು ನಂತರ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆಂದು ತಿಳಿದು ಬಂದಿದೆ.
ಸದ್ಯ ಗಾಯಾಳು ಆರೋಪಿಯನ್ನು ಹಾಗೂ ಆತನ ಹಲ್ಲೆಯಿಂದ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.