ಸಂಚಾರಕ್ಕೆ ರಸ್ತೆ ಮುಕ್ತಗೊಳಿಸಲು ಆಗ್ರಹ
ಲಕ್ಷೆ÷್ಮÃಶ್ವರ,ಜು೨೬: ತಾಲೂಕಿನ ಬಡ್ನಿ ಆದ್ರಳ್ಳಿ ಮಧ್ಯದ ಸೇತುವೆ ಕುಸಿದು ಎರಡು ತಿಂಗಳಾಗಿತ್ತು ಲೋಕೋಪಯೋಗಿ ಇಲಾಖೆಯವರು ತಾತ್ಕಾಲಿಕವಾಗಿ ಕುಸಿದ ಸೇತುವೆಗೆ ಎರಡು ಪಕ್ಕದಲ್ಲಿ ಮಣ್ಣು ಹೇರಿ ಸಂಚಾರಕ್ಕೆ ಅನುಕೂಲ ಮಾಡಿದ್ದರು.
ಆದರೆ ಕಳೆದ ಎಂಟತ್ತು ದಿನಗಳಿಂದ ಜಿಟಿ ಜಿಟಿ ಮಳೆಯಿಂದಾಗಿ ಮಣ್ಣು ಕೆಸರು ಕೊಚ್ಚೆಯಾಗಿ ಪಕ್ಕಕ್ಕೆ ಸರಿದಿರುವುದರಿಂದ ಭಾರಿ ವಾಹನಗಳು ಅಡ್ಡಾಡದಂತ ಸ್ಥಿತಿ ನಿರ್ಮಾಣವಾಗಿದೆ ಇದರಿಂದಾಗಿ ಲಕ್ಷೆ÷್ಮÃಶ್ವರ ಆದ್ರ ಳ್ಳಿ ಮಧ್ಯ ಬಸ್ ಸಂಚಾರ ನಿಲುಗಡೆ ಆಗಿರುವುದರಿಂದ ಬಡ್ನಿಗೆ ಬರುವ ಮತ್ತು ಲಕ್ಷೆ÷್ಮÃಶ್ವರಕ್ಕೆ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬಟ್ಟೂರು ಮುಖಾಂತರ ಲಕ್ಷೆ÷್ಮÃಶ್ವರ ತಲುಪಬೇಕಾದ ಸ್ಥಿತಿ ಇದೆ.
ಆದ್ದರಿಂದ ಲೋಕೋಪಯೋಗಿ ಇಲಾಖೆಯವರು ಕೂಡಲೇ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಬಡ್ನಿ ಗ್ರಾಮದ ಮುತ್ತಣ್ಣ ಚೋಟಗಲ್ಲ ಮತ್ತು ಶಿವಾನಂದ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.