ಶರಣರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು
ಮುನವಳ್ಳಿ,ಜು೨೬: ಪಟ್ಟಣದ ಶ್ರೀ ಬಸವಪ್ರಿಯ ಶರಣ ಶ್ರೀ ಹಡಪದ ಅಪ್ಪಣ್ಣನವರ ೮೯೦ ನೇ ಜಯಂತ್ಯೋತ್ಸವ ಅಂಗವಾಗಿ ಹಡಪದ ಅಪ್ಪಣ್ಣ ಸಮಾಜದವರಿಂದ ಆರತಿ, ಪೂರ್ಣಕುಂಭಗಳೊಂದಿಗೆ ಸುಮಂಗಲೆಯರು, ಶಿವಶರಣ ಶ್ರೀ ಹಡಪದ ಅಪ್ಪಣ್ಣ ರವರ ಭಾವಚಿತ್ರದೊಂದಿಗೆ ವಿವಿಧ ವಾಧ್ಯ ಮೇಳಗಳ ಜೊತೆಗೆ ಶ್ರೀ ಕುಮಾರೇಶ್ವರ ಆಲೂರಮಠದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು.
ನಂತರ ಸಂಜೆ ವೀರು ಗಿರೆಪ್ಪ ಮುರನಾಳ ಇವರ ಪ್ರಾಯೋಜಕತ್ವದಲ್ಲಿ ಖ್ಯಾತ ಗಾಯಕರಿಂದ ಸಂಗೀತ ಸಂಭ್ರಮ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಜರಗಿತು.
ಕಾಂಗ್ರೆಸ ಮುಖಂಡ ಅಸ್ವತ ವೈಧ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿಶ್ವಗುರು ಬಸವಣ್ಣನ ವಡನಾಡಿಯಾಗಿದ್ದ ಹಡಪದ ಅಪ್ಪಣ್ಣನವರು ಕಾಯಕ ಯೋಗಿಗಳಾಗಿದ್ದರು. ಆ ಸಮುದಾಯದ ಜನರು ಸಹ ನಿತ್ಯ ಕಾಯಕ ಜೀವಿಗಳಾಗಿದ್ದಾರೆ. ಪ್ರತಿಯೊಬ್ಬರು ಉತ್ತಮ ಆರೋಗ್ಯ ಇಟ್ಟುಕೊಂಡು ಶರಣರ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನವನ್ನು ಸನ್ಮಾರ್ಗದಲ್ಲಿ ನಡೆಸಬೇಕು ಎಂದರು.
ಬಿ.ಜೆ.ಪಿ ಮುಖಂಡ ವಿರೂಪಾಕ್ಷಪ್ಪ ಮಾಮನಿ ಜ್ಯೋತಿ ಬೆಳಗಿಸಿ ಮಾತನಾಡಿದರು ಪ್ರತಿ ವರ್ಷವೂ ಈ ಸಮಾಜದವರು ಸರಕಾರದ ಸಹಾಯ ವಿಲ್ಲದೆ ತಮ್ಮ ದುಡಿದ ಹಣದಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಅದ್ದೂರಿಯಾಗಿ ಮಾಡುತ್ತಾ ಬಂದಿದ್ದಾರೆ ಮುಂದಿನದಿನಮಾನಗಳಲ್ಲಿ ಈ ಸಮುದಾಯಕ್ಕೆ ಭವನವನ್ನು ನಿರ್ಮಿಸಿ ಕೊಡುವದಾಗಿ ಆಶ್ವಾಸನೆ ನೀಡಿದರು.
ೆ ಅಣ್ಣಪ್ಪ ಮಾಲದಿನ್ನಿ, ಅಂಬ್ರೀಷ ಯಲಿಗಾರ, ನಿಂಗನಗೌಡ ಮಲಗೌಡ್ರ, ಗೌತಮ ದ್ಯಾಮನಗೌಡರ, ನೀಕಿಲ ಬಾಳಿ, ಚಂದ್ರು ಮುಚ್ಚಂಡಿ, ಕಲ್ಲಪ್ಪ ನಲವಡೆ, ಅಶೋಕ ಗೋಮಾಡಿ, ಹಣಮಂತ ಸಿಂಗನ್ನವರ, ಶ್ರೀಕಾಂತ ಮಲಗೌಡ್ರ, ಬಿ.ಎಚ್.ಬೈರಕದಾರ, ಸುಭಾಸ ಗೀದಿಗೌಡ್ರ, ಸಂತೋಷ ಹಡಪದ, ಪರುಸುರಾಮ ಗಂಟಿ, ಸಿದ್ದಣ್ಣ ಹಡಪದ, ಟಿ.ಎನ್. ಮುರಂಕರ, ಸಂಘದ ಸರ್ವಸದಸ್ಯರು ಇತರರು ಉಪಸ್ಥಿತರಿದ್ದರು.
ಸ್ವಾಗತ ವೀರು ಮುರುನಾಳ, ಕಾರ್ಯಕ್ರಮ ನಿರೂಪಣೆ ಬಾಳು ಹೊಸಮನಿ, ವಂದನಾರ್ಪಣೆ ಸಿದ್ದು ಮುರುನಾಳ ನೆರವೇರಿಸಿದರು.