ಭಜನಾ ಮಂದಿರ ದೇಣಿಗೆ
ಚನ್ನಮ್ಮನ ಕಿತ್ತೂರು,ಜು೨೬: ಸಮೀಪದ ಖಾನಾಪೂರ ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಗ್ರಾಮ ಕಲ್ಯಾಣ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದರಲ್ಲಿ ಗ್ರಾಮದ ಅಪ್ಪ ಶಿವಯೋಗಿಶ್ವರ ಭಜನಾ ಮಂಡಳಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಭಜನಾ ಮಂದಿರ ನೂತನ ಕಟ್ಟಡಕ್ಕೆ ೧ಲಕ್ಷರೂ, ಪ್ರಸಾದ ರೂಪದಲ್ಲಿ ದೇಣಿಗೆ ನೀಡಲಾಯಿತು.
ವಚನಕಾರ ಶ್ರೀ ಮೃತ್ಯುಂಜಯ ಹಿರೇಮಠ ಸಾನಿಧ್ಯವಹಿಸಿದ್ದರು.
ಚೆಕ್ ವಿತರಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ ಡಾ. ವೀರೇಂದ್ರ ಹೆಗಡೆಯವರು ಗ್ರಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದು ಅವರಿಗೆ ನಿಮ್ಮೆಲ್ಲರ ಸಹಕಾರ ಅಗತ್ಯವಿದ್ದು. ದೇವರು ಅವರಿಗೆ ಇನ್ನೂ ಹೆಚ್ಚಿನ ಅಭಿವೃದ್ಧಿಗಳಿಗೆ ಹಣ ನೀಡುವ ಶಕ್ತಿ ದಯಪಾಲಿಸಲಿ ಎಂದರು.
ಈ ವೇಳೆ ಬಸವಣ್ಣೆ ಮೂಲಿಮನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು, ವಿಜಯ ಕುಲಕರ್ಣಿ ಸ್ವಾಗತಿಸಿ, ನಿರೂಪಿಸಿ, ವಂದಿಸಿರು. ಅಶೋಕ ಯಮಕನಮರಡಿ, ಕಾರ್ಯದರ್ಶಿ ಪದ್ಮಣ್ಣಾ ಮಡೇದ, ಶಿವಾನಂದ ಮೂಲಿಮನಿ, ಬಾಬು ಯಮಕನಮರಡಿ, ಈರಪ್ಪ ಮೂಲಿಮನಿ, ಸಾವಕ್ಕ ಗಾಣಿಗೇರ, ಯಲ್ಲಪ್ಪ ಮೇದಾರ, ಬಸವರಾಜ ಭಂಗಿ, ಎಂ.ಎಂ.ರಾಜೀಬಾಯಿ, ಬಸಪ್ಪ ನೆಪ್ಟ, ಗೋಪಾಲ್ ಕಮ್ಮಾರ, ಚನ್ನಯ್ಯಾ ಹುದ್ದಾರ, ತಿಪ್ಪಣ್ಣಾ ಹಟ್ಟಿ ಬಸಪ್ಪ ಪೂಜಾರ, ಭೀಮಪ್ಪ ಕುರೇರ, ಆನಂದ ಶೆಟ್ಟೇಣ್ಣವರ ಸೇರಿದಂತೆ ಹಲವರಿದ್ದರು.