ಎಂಬಿಎ: ಶ್ರೀಗೋಕುಲ ಪ್ರಥಮ ರ್‍ಯಾಂಕ್
ಕೋಲಾರ,ಜು.೨೬- ಕೋಲಾರ ನಗರದ ಶ್ರೀ ಗೋಕುಲ್ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಅಂಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಪಿ.ಜಿ.ವಿಭಾಗ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜು ಆಗಿರುವಂತಹ ಶ್ರೀ ಗೋಕುಲ ಕಾಲೇಜಿಗೆ ಪ್ರತಿ ವರ್ಷದಂತೆ ಈ ವರ್ಷವು (೨೦೨೧-೨೦೨೩) ನೇ ಸಾಲಿನಲ್ಲಿ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ಎಂ.ಬಿ.ಎ ಸ್ನಾತಕೋತ್ತರ ಪದವಿಯಲ್ಲಿ ವಿಶ್ವವಿದ್ಯಾಲಯಕ್ಕೆ ಅನಿತಾ ಎಸ್ (೮೫.೪೮) ಪ್ರಥಮ ರ್‍ಯಾಂಕ್ ಹಾಗೂ ಪೂರ್ಣಿಮ ಆರ್ (೮೧.೮೫) ನಾಲ್ಕನೇ ರ್‍ಯಾಂಕ್ ಶೇಖಡವಾರು ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಗೋಕುಲ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ.ವಿ.ನಾರಾಯಣಸ್ವಾಮಿ, ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ತೇಜಸ್ವಿನಿ ಎನ್, ಸ್ನಾತಕೋತ್ತರ ಸಂಸ್ಥೆಯ ಪ್ರಭಾರಿ ನಿರ್ದೇಶಕ ಷಣ್ಮುಗಪ್ರಿಯ ಆರ್, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ರ್‍ಯಾಂಕ್ ಪಡೆದ ಪ್ರಶಿಕ್ಷಣಾರ್ಥಿಗಳನ್ನು ಅಭಿನಂದಿಸಿದರು.