ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಪರ ಸಮಾಜಮುಖಿ ಕಾರ್ಯಕ್ರಮ
ಕೋಲಾರ, ೨೬- ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಲವಾರು ಜನಪರ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು, ಕೆರೆಗಳ ಹೂಳೆತ್ತುವುದು, ದುರ್ಬಲರಿಗೆ, ಅಶಕ್ತರಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಅವರ ಜೀವನ ಮಟ್ಟ ಸುಧಾರಣೆಗೆ ಪ್ರಯತ್ನಿಸುತ್ತಿರುವುದು ಗಮನಾರ್ಹ ವಿಚಾರವಾಗಿದ್ದು, ಹಾಗೆಯೇ ಆರ್ಥಿಕ ಸಬಲೀಕರಣ ಮಾಡುವ ಮುಖೇನ ಕಡಿಮೆ ಬಡ್ಡಿಯಲ್ಲಿ ಆರ್ಥಿಕ ಸೌಲಭ್ಯವನ್ನು ಒದಗಿಸಿ ಸಂಘದ ಸದಸ್ಯರಿಗೆ ನೇರವಾಗುತ್ತಿದ್ದೇವೆ ಎಂದು ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಶೀನಪ್ಪ ಎಂ ತಿಳಿಸಿದರು,
ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ೭೮ ಮಂದಿ ಫಲಾನುಭವಿಗಳಿಗೆ ಸುಮಾರು ೯ ಲಕ್ಷ ಮೊತ್ತದ ಆರೋಗ್ಯ ರಕ್ಷಾ ವಿಮೆಯ ಕ್ಲೈಮ್ ಗಳು ಮಂಜೂರಾಗಿದ್ದು, ಚೆಕ್ ವಿತರಣಾ ಕಾರ್ಯಕ್ರಮವನ್ನು ಜ್ಯೋತಿ ಪ್ರಜ್ವಲನೆ ಮಾಡುವುದರೊಂದಿಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು,
ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಿನಾಥ್ ಬಿ.ವಿ ಮಾತನಾಡುತ್ತಾ ಬರದ ನಾಡು ಕೋಲಾರ ಜಿಲ್ಲೆಗೆ ಧರ್ಮಸ್ಥಳ ಸಂಸ್ಥೆ ಒಂದು ವರವಾಗಿ ಬಂದು ಕಳೆದ ೯ ವರ್ಷದಿಂದ ಯಾವುದೇ ಜಾತಿ ಭೇದ ಧರ್ಮವಿಲ್ಲದೆ ಎಲ್ಲರಿಗೂ ಕೂಡ ತಮ್ಮದೇ ಆದಂತಹ ಹಲವಾರು ಜನಹಿತ ಯೋಜನೆಗಳನ್ನು ಹಾಕಿಕೊಂಡು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ ಎ.ವಿ.ನಾರಾಯಣಸ್ವಾಮಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಇಂದು ಹಲವಾರು ಸಂಘ ಸಂಸ್ಥೆಗಳು ಕೇವಲ ಲೆಕ್ಕಕ್ಕಷ್ಟೇ ಸೇವೆಗಳನ್ನ ಮಾಡುತ್ತಿದ್ದು, ಆದರೆ ಧರ್ಮಸ್ಥಳ ಸಂಸ್ಥೆಯು ತಳಮಟ್ಟದ ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಇತರೆ ತರಬೇತಿ ಕಾರ್ಯಕ್ರಮಗಳನ್ನ ಮಾಡಿ ಅವರಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸಿ ಸುಧಾರಣೆ ಮಾಡುತ್ತಿರುವುದು ತುಂಬಾ ಶ್ಲಾಘನೀಯ,ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬೇಕು “ಆರೋಗ್ಯವೇ ಭಾಗ್ಯ ಆರೋಗ್ಯ ಇದ್ದರೆ ರಾಜನಿಗಿಂತಲೂ ಅತಿ ವೈಭವದ ಜೀವನ ನಡೆಸಬಹುದೆಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ಪದ್ಮಯ್ಯ, ಯೋಜನಾಧಿಕಾರಿ ಸಿದ್ದಗಂಗಯ್ಯ, ರೋಟರಿ ನಂದಿನಿ ಕೋಲಾರ ಅಧ್ಯಕ್ಷ ಬಾಬು, ಸಂಸ್ಥೆಯ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು,