ವೀರಶೈವ ಮಹಾಸಭಾದ ನೂತನ ಅಧ್ಯಕ್ಷರು, ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ:ಜು.೨೬:- ಪಿರಿಯಾಪಟ್ಟಣದ ಕಂಠಿ ಮಲ್ಲಣ್ಣ ಸುಬ್ಬಮ್ಮ ಬಸವ ಮಂದಿರದಲ್ಲಿ ಇತ್ತೀಚೆಗೆ ಚುನಾವಣೆಯಲ್ಲಿ ಆಯ್ಕೆಯಾದ ವೀರಶೈವ ಮಹಾಸಭಾ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಪರಮಶಿವಯ್ಯ ಮಾತನಾಡಿ ಚುನಾವಣೆಯಲ್ಲಿ ಅನೇಕರು ಅರ್ಜಿ ಸಲ್ಲಿಸಿದ್ದು ಅಧ್ಯಕ್ಷರ ಸ್ಥಾನಕ್ಕೆ ಹೆಸರು ಎಚ್.ಜಿ.ಪರಮೇಶ್ವರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು. ಉಳಿದಂತೆ ೧೪ ಮಂದಿ ಪುರುಷ ಅಭ್ಯರ್ಥಿಗಳು ಏಳು ಮಂದಿ ಮಹಿಳಾ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಪಿರಿಯಾಪಟ್ಟಣ ವೀರಶೈವ ಮಹಾಸಭಾ ನೂತನ ಅಧ್ಯಕ್ಷ ಹೆಚ್ ಜಿ ಪರಮೇಶ್ ಮಾತನಾಡಿ ಚುನಾವಣೆಯ ಇಲ್ಲದೆ ಎಲ್ಲ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು. ತಾಲೂಕಿನಲ್ಲಿ ಬಸವ ಭವನ ನಿರ್ಮಾಣ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಹಿತರಕ್ಷಣೆಗೆ ವೀರಶೈವ ಮಹಾಸಭಾ ಸದಾ ಬದ್ಧವಾಗಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೀರಶೈವ ಮಹಾಸವಾದ ನಿಕಟ ಪೂರ್ವ ಅಧ್ಯಕ್ಷ ಕಂದೇಗಾಲ ಚಂದ್ರಶೇಖರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಹೊಲದಪ್ಪ, ಎಂ ಡಿ ಸಿ ಸಿ ಮಾಜಿ ನಿರ್ದೇಶಕ ವಿರೂಪಾಕ್ಷ, ಪುರಸಭಾ ಸದಸ್ಯರಾದ ನಿರಂಜನ್ , ಮಲ್ಲಿಕಾರ್ಜುನ್ , ಕಸಾಪ ಅಧ್ಯಕ್ಷ ನವೀನ್ ಕುಮಾರ್, ಸಹಾಯಕ ಚುನಾವಣೆ ಅಧಿಕಾರಿ ಪುಟ್ಟರಾಜು, ಮುಖಂಡರಾದ ನಾಗರಾಜು, ಜಗದೀಶ್, ಸಿದ್ದೇಶ್, ಸೇರಿದಂತೆ ಮತ್ತಿತರರು ಹಾಜರಿದ್ದರು.