ಕ್ರಿಸ್ತರಾಜ ವಿದ್ಯಾರ್ಥಿಗಳು:ಹೋಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ಸಾಧನೆ
ಸಂಜೆವಾಣಿ ವಾರ್ತೆ
ಹನೂರು ಜು ೨೬ :- ಇತ್ತೀಚೆಗೆ ಹನೂರಿನ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹನೂರಿನ ಕ್ರಿಸ್ತರಾಜ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಪಾಲು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.
ಬಾಲಕಿಯರ ವಿಭಾಗದ ಮೇಲಾಟಗಳಲ್ಲಿ, ೧೦೦ ಮೀಟರ್ ಓಟ ಚೈತ್ರ ಪ್ರಥಮ, ಹಾಗೂ ಅನ್ಸಿಕ ದ್ವಿತೀಯ ಸ್ಥಾನವನ್ನು
೨೦೦ ಮೀಟರ್ ಓಟ ಉಮ್ಮೇಜಾ ಪ್ರಥಮ, ೪೦೦ ಮೀಟರ್ ಓಟ ಪ್ರಥಮ ಹರ್ಷಿಣಿ. ಉದ್ದ ಜಿಗಿತ ಅನ್ಸಿಕ ತೃತೀಯ.
ಬಾಲಕಿಯರ ೪ಘಿ೧೦೦ಮೀಟರ್ ರಿಲೇ ಆಂಗ್ಲ ಮಾಧ್ಯಮ ಅನ್ಸಿಕ ತಂಡ ಪ್ರಥಮ. ೪ಘಿ೧೦೦ ಮೀಟರ್ ರಿಲೇ ಕನ್ನಡ ಮಾಧ್ಯಮ ದ್ವಿತೀಯ.
ಬಾಲಕಿಯರ ವಾಲಿಬಾಲ್ ದ್ವಿತೀಯ. ಬಾಲಕರ ಮೇಲಾಟಗಳಲ್ಲಿ, ೨೦೦ ಮೀಟರ್ ಓಟ ವಿಹಾನ್ ದ್ವಿತೀಯ, ೪೦೦ ಮೀಟರ್ ಓಟ ಜಸ್ವಂತ್ ಪ್ರಥಮ. ಪಂದ್ಯಾಟಗಳು ಥ್ರೋಬಾಲ್ ಪ್ರಥಮ, ವಾಲಿಬಾಲ್ ಪ್ರಥಮ, ಖೋ ಖೊ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ವ್ಯವಸ್ಥಾಪಕರಾದ ರೆವರೆಂಡ್ ಫಾದರ್ ರೋಷನ್, ಮುಖ್ಯ ಶಿಕ್ಷಕಿ ಸಿಸ್ಟರ್ ಗೀತಾ ರುಫೀನಾ, ದೈಹಿಕ ಶಿಕ್ಷಣ ಶಿಕ್ಷಕ ರಾಯಪ್ಪ, ಶಿಕ್ಷಕರಾದ ವಿಕ್ಕಿ, ಪ್ರಭು, ಲತಾ ಪುಷ್ಪ, ಸೆಲ್ವ ಹಾಗೂ ಮಹದೇವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.