ಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಸ್ಮರಣೆ
ಸಂಜೆವಾಣಿ ವಾರ್ತೆ
ಹನೂರು ಜು ೨೬ :- ತಾಲೂಕಿನ ಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಕಾರ್ಗಿಲ್ ಸೈನಿಕರನ್ನು ಸ್ಮರಿಸಿ ಭಾರತದ ಭೂಪಟ ರಚನೆ ಮಾಡಿ ಸೈನಿಕರ ರೈಪಲ್ ನ ಚಿತ್ರದೊಂದಿಗೆ, ಶಾಲಾ ಮಕ್ಕಳು ದೀಪ ಬೆಳಗಿಸಿ ಗೌರವ ನಮನವನ್ನು ಸಲ್ಲಿಸಿದರು.
ಇದೇ ವೇಳೆ ಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಮಾತನಾಡಿ ಕಾರ್ಗಿಲ್ ಯುದ್ಧ ಭಾರತೀಯ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತಹ ದಿನವಾಗಿದ್ದು, ಶೌರ್ಯ ಪೀಪರಾಕ್ರಮವನ್ನು ಪ್ರದರ್ಶಿಸಿದ ದಿನವಾಗಿದೆ. ಭಾರತೀಯರಲ್ಲಿ ದೇಶ ಪ್ರೇಮವನ್ನು ಮತ್ತು ಭಕ್ತಿಯನ್ನು ಅರ್ಪಿಸುವ ದಿನವಾಗಿದೆ.
ಭಾರತೀಯರು ಅಪರೇಶನ್ ವಿಜಯ್ ಮೂಲಕ ಕಾರ್ಗಿಲ್-ದ್ರಾಸ್ ವಲಯದಲ್ಲಿ ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ ಈ ದಿನ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಸೈನಿಕರ ಗೌರವಾರ್ಥವಾಗಿ ಜುಲೈ ೨೬ ರಂದು ಕಾರ್ಗಿಲ್ ವಿಜಯ್ ದಿವಸ್ ದಿನವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಸೈನಿಕರಿಗೆ ಗೌರವ ಸಲ್ಲಿಸುತ್ತಾರೆ.
ಕಾರ್ಗಿಲ್‌ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ವೀರ ಯೋಧರು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನವಾಗಿದೆ. ೧೯೯೯ ರ ಮೇ ಇಂದ ಜುಲೈ ಚಳಿಗಾಲದಲ್ಲಿ ಮೈನಸ್ ಡಿಗ್ರಿ ಸೆಲ್ಸಿಯಸ್ ಇಳಿಯುತ್ತದೆ. ಈ ಸಂದರ್ಭ ಇಲ್ಲಿ ಗಡಿ ಕಾಯುವುದೇ ಅತ್ಯಂತ ಸವಾಲಿನ ಕೆಲಸವಾಗಿದೆ.
ಪಾಕ್‌ನ ಸೇನೆ, ಭಾರತದ ಒಳಗೆ ನುಸುಳಿದ್ದನ್ನು ನೋಡಿದ ಕುರಿಗಾಹಿಗಳ ಖಚಿತ ಮಾಹಿತಿಯೊಂದಿಗೆ ಮತ್ತು ಭಾರತದ ಯೋದರನ್ನು ಚಿತ್ರಹಿಂಸೆ ನೀಡಿ ಕೊಂದದ್ದನ್ನು. ಗಂಭೀರವಾಗಿ ಪರಿಗಣಿಸಿದ ಭಾರತ, ತಕ್ಷಣವೇ ಸೈನಿಕರನ್ನ ಸಜ್ಜುಗೊಳಿಸಿ ಆಪರೇಷನ್ ವಿಜಯದ ಹೆಸರಿನಲ್ಲಿ ಕಾರ್ಯಚರಣೆ ಮಾಡಿತು.
ಶತ್ರುಗಳನ್ನು ಬಗ್ಗು ಬಡಿದ ಭಾರತೀಯ ಸೈನಿಕರು, ಪಾಕಿಗಳನ್ನು ಹಿಮ್ಮೆಟ್ಟಿಸಿ ಭಾರತವು ಯುದ್ಧ ಗೆದ್ದಿತು. ಇದಾದ ಬಳಿಕ ಪ್ರತೀ ವರ್ಷ ಜುಲೈ ೨೬ ರಂದು ಕಾರ್ಗಿಲ್ ವಿಜಯ ದಿವಸ್ ಅನ್ನು ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹುತಾತ್ಮರಾದ ಮನೋಜ್ ಕುಮಾರ್, ವಿಕ್ರಂ ಬಾತ್ರ, ಸಂಜಯ್ ಕುಮಾರ್, ಅನುಜ್ ಮತ್ತು ಯೋಗೇಂದ್ರ ಸಿಂಗ್ ವೀರ ಸೈನಿಕರನ್ನು ಸ್ಮರಿಸಿ ಭಾರತದ ಭೂಪಟ ರಚನೆ ಮಾಡಿ ಸೈನಿಕರ ರೈಪಲ್ ನ ಚಿತ್ರದೊಂದಿಗೆ, ಶಾಲಾ ಮಕ್ಕಳು ದೀಪ ಬೆಳಗಿಸಿ ಗೌರವ ನಮನವನ್ನು ಸಲ್ಲಿಸಿದರು.
ಇದಲ್ಲದೇ ೧೯೬೨ ರ ರೈಫಲ್ ಮಾನ್ ಜಸ್ವಂತ್ ಸಿಂಗ್ ರಾವತ್ ಮತ್ತು ೧೯೬೫ ರ ಆಶಾ ರಾಮ್ ತ್ಯಾಗಿ ಅಂತಹ ಮಹಾನ್ ಸೈನಿಕರನ್ನು ಸ್ಮರಿಸಿ ಹೂವುಗಳನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಮಹೇಶ.ಆರ್, ಶಂಭಯ್ಯ, ಮಹಾದೇವ, ಕಾವ್ಯ, ಪ್ರಭುರಾಜ್, ವೆಂಕಟೇಶ್, ಸತೀಶ್, ಮಹದೇವಸ್ವಾಮಿ, ಸೂರ್ಯಕಾಂತ್ ಶಾಲೆಯ ವಿದ್ಯಾರ್ಥಿಗಳು ಇದ್ದರು.