ಶುದ್ಧ ನೀರಿನ ಘಟಕ ಸಮರ್ಪಣೆ
ಸಂಜೆವಾಣಿ ನ್ಯೂಸ್
ಮೈಸೂರು:ಜು.೨೬:- ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಮತ್ತು ಪ್ರವಾಸಿಗರ ಅನೂಕಲಕ್ಕಾಗಿ ಅನ್ನ ದಾಸೋಹ ಭವನದಲ್ಲಿ ವಿ-ಗಾರ್ಡ್ ಕಂಪನಿ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉಚಿತವಾಗಿ ಸ್ಥಾಪಿಸಿ ಗುರುವಾರ ಹಸ್ತಾಂತರಿಸಲಾಯಿತು.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ.ದೇವೆಗೌಡ ಚಾಮುಂಡಿ ಬೆಟ್ಟಕ್ಕೆ ಮೂಲಭೂತ ಸೌಲಭ್ಯಗಳನ್ನು ಶಾಶ್ವತವಾಗಿ ಒದಗಿಸಲು ಸಿಎಸ್‌ಆರ್ ವಲಯ ಖಾಸಗಿ ಕಂಪನಿಗಳಿಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ವಿ-ಗಾರ್ಡ್ ಕಂಪನಿ ಚಾಮುಂಡಿಬೆಟ್ಟಕ್ಕೆ ಪ್ರತಿನಿತ್ಯ ಆಗಮಿಸುವ ಭಕ್ತಾಧಿಗಳಿಗೆ ಪ್ರತಿದಿನ ೫೦ ಸಾವಿರ ಮಂದಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸಾಮರ್ಥ್ಯವುಳ್ಳ ವಿ-ಗಾರ್ಡ್ ಶುದ್ಧ ಕುಡಿಯುವ ನೀರಿನ ಘಟಕವನ್ನು ಕಂಪನಿಯ ಉಪಾಧ್ಯಕ್ಷ ಸೂರ್ಯಪ್ರಸಾದ್ ವಿಜೆ, ಶಾಖಾ ವ್ಯವಸ್ಥಾಪಕ ಹರ್ಷೇಂದ್ರ ಪ್ರಸಾದ್ ಹಸ್ತಾಂತರಿಸಿದರು.
ಈ ವೇಳೆ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಶಶಿಶೇಖರ ದೀಕ್ಷತ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ ,ತನ್ವಿ ಟ್ರೇಡಿಂಗ್ ಕಾರ್ಪೋ ದೀಪಕ್ ಹೆಬ್ಬಾಳ್, ಚಮನ್, ಪುರುಷೋತ್ತಮ್, ಅರುಣ್ ಇದ್ದರು.