ಗುರುಪೂರ್ಣಿಮೆ ನಿರಂತರವಾಗಿರಲಿ: ಶಿಕ್ಷಕಿ ಬಿ.ಆರ್.ಸುಜಾತಾ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೬: ಗುರು ಪೂರ್ಣಿಮೆ ಎಂಬುವುದು ಕೇವಲ ಒಂದು ದಿನಕ್ಕೆ ಸೀಮಿತವಾಗದಿರಲಿ. ಪ್ರತಿನಿತ್ಯವೂ ಗುರುಪೂರ್ಣಿಮೆ ಆಗಿರಬೇಕು ಎಂದು ದಾವಣಗೆರೆ ತಾಲ್ಲೂಕಿನ ಅಣಜಿ ಇಂದಿರಾಗಾAಧಿ ವಸತಿ ಶಾಲೆಯ ವಿಜ್ಞಾನ ಶಿಕ್ಷಕಿ ಬಿ.ಆರ್.ಸುಜಾತಾ ಹೇಳಿದರು.ನಗರದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಈಚೆಗೆ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಶ್ರೀ ಗುರು ವ್ಯಾಸರಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.ಶಿಕ್ಷಕರಾಗಲಿ, ತಂದೆ-ತಾಯಿಯಾಗಲಿ, ಹಿರಿಯರಾಗಲಿ ಅವರು ನಮಗೆ ಸಲಹೆ ಮಾರ್ಗದರ್ಶನ ನೀಡಿ ಜೀವನ ಹಾಗೂ ನಮ್ಮ ಬದುಕನ್ನು ಸಾರ್ಥಕತೆಯತ್ತ ಕೊಂಡೊಯ್ಯುವವರು ನಮಗೆ ಗುರುಗಳು ಇದ್ದಂತೆ. ಸದಾ ನಾವು ಅವರನ್ನು ಸ್ಮರಿಸುವ ಜೊತೆಗೆ ಗುರುಗಳ ನಡೆ-ನುಡಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಇದೇ ವೇಳೆ ಪ್ರಾಥಮಿಕ ಮಕ್ಕಳಿಗೆ ಗುರುಪೂರ್ಣಿಮೆ ಹಿನ್ನಲೆ ವೇಷಭೂಷಣ ಸ್ಪರ್ಧೆ ಆಯೋಜಿಸಿದ್ದು, ಪುಟಾಣಿ ಮಕ್ಕಳು ಬಸವಣ್ಣ, ಅಕ್ಕಮಹಾದೇವಿ, ಋಷಿಮುನಿಗಳು, ರಾಘವೇಂದ್ರ ಸ್ವಾಮಿಗಳು, ವಿವೇಕಾನಂದ ಸೇರಿದಂತೆ ಮಹಾನೀಯರ ವೇಷಭೂಷಣದೊಂದಿಗೆ ಆಗಮಿಸಿ ಗುರುಶಿಷ್ಯರ ತತ್ವ ಸಿದ್ದಾಂತ ಸಾರುವ ಮೂಲಕ ಎಲ್ಲರ ಗಮನ ಸೆಳೆದರು.ಶಾಲೆಯ ಶೈಕ್ಷಣಿಕ ನಿರ್ದೇಶಕ ಪಿ.ಪರಮೇಶ್ವರಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಎನ್.ಪ್ರಭಾವತಿ, ಮುಖ್ಯ ಶಿಕ್ಷಕಿ ಗಾಯತ್ರಿ, ತೀರ್ಪುಗಾರರಾಗಿ ಹೀನಾಬಾಯಿ, ಕವಿತಾ, ರಂಜಿತಾ ಮತ್ತು ಪೋಷಕರು, ವಿದ್ಯಾರ್ಥಿಗಳು ಇದ್ದರು.
========