ಜು.27 ರಂದು ಕೃಷಿ ಸಂತ ಡಾ.ಎಸ್.ಎ.ಪಾಟೀಲ ನುಡಿ ನಮನ
ಕಲಬುರಗಿ:ಜು.25: ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ನಾಡಿನ ಖ್ಯಾತ ಬೀಜದ ತಳಿ ಸಂಶೋಧಕರಾದ ಕೃಷಿ ಸಂತ ಡಾ.ಎಸ್.ಎ.ಪಾಟೀಲ್ ಬಿರಾಳ ಅವರ ನುಡಿ ನಮನ ಕಾರ್ಯಕ್ರಮವನ್ನು ಜು.27 ರಂದು ಮಧ್ಯಾಹ್ನ 2-30 ಗಂಟೆಗೆ ನಗರದ ಸಾರ್ವಜನಿಕ ಉದ್ಯಾನದಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.
ಲಿಂ.ಡಾ.ಎಸ್.ಪಾಟೀಲ್ ಅವರ ಅಭಿಮಾನಿಗಳು,ಬಂಧುಗಳು ಹಾಗೂ ಆಪ್ತ ಮಿತ್ರರು, ಹಳೆಯ ವಿದ್ಯಾರ್ಥಿಗಳು ಸೇರಿಕೊಂಡು ಹಮ್ಮಿಕೊಂಡಿರುವ ನುಡಿ ನಮನ ಕಾರ್ಯಕ್ರಮದ ಸನ್ನಿಧಾವನ್ನು ಕನ್ನೇರಿ ಮಠದ ಪೂಜ್ಯ ಅದೃಶ್ಯ ಕಾಡಸಿz್ದೆÃಶ್ವರ ಮಹಾಸ್ವಾಮೀಜಿ, ಸೊನ್ನದ ಡಾ.ಶಿವಾನಂದ ಮಹಾಸ್ವಾಮೀಜಿ, ಮುತ್ಯಾನ ಬಬಲಾದಿನ ಪೂಜ್ಯ ಗುರುಪಾದಲಿಂಗ ಮಹಾಸ್ವಾಮೀಜಿ, ರಾಜೇಶ್ವರ-ತಡೋಳಾದ ಪೂಜ್ಯ ರಾಜಶೇಖರ ಶಿವಾಚಾರ್ಯರು ವಹಿಸುವರು. ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸುವರು.
ಅಧ್ಯಕ್ಷ ಶಾಸಕ ಅಲ್ಲಮಪ್ರಭು ಪಾಟೀಲ್ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಧರ್ಮಸಿಂಗ್, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್, ಶಾಸಕರಾದ ಕನ್ನಿಜ್ ಫಾತೀಮಾ, ಎಂ.ವೈ.ಪಾಟೀಲ್,ಶಶೀಲ್ ನಮೋಶಿ,ಡಾ.ಬಿ.ಜಿ.ಪಾಟೀಲ್,ತಿಪ್ಪಣ್ಣಪ್ಪ ಕಮಕನೂರ,ಜಗದೇವ ಗುತ್ತೇದಾರ,ಬಸವರಾಜ ಮತ್ತಿಮಡು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಪಿ.ಎಲ್.ಪಾಟೀಲ್, ರಾಯಚೂರು ಕೃಷಿ ವಿವಿ ಕುಲಪತಿ ಡಾ.ಎಂ.ಹಣಮAತಪ್ಪ, ಮಾಜಿ ಸಂಸದರಾದ ಬಸವರಾಜ ಪಾಟೀಲ್ ಸೇಡಂ, ಡಾ.ಉಮೇಶ ಜಾಧವ, ಬಸವರಾಜ ಪಾಟೀಲ್ ಅನ್ವರಿ, ವಿಶ್ರಾಂತ ಕುಲಪತಿಗಳಾದ ಡಾ.ಎಸ್.ಬಿ.ದಂಡಿನ, ಡಾ.ಬಿ.ವಿ.ಪಾಟೀಲ್,ಡಾ.ಆರ್.ಆರ್.ಹಂಚಿನಾಳ, ಕೃಷಿ ಇಲಾಖೆ ಅಧಿಕಾರಿಗಳು, ಜಿಲ್ಲೆಯ ಮಾಜಿ ಶಾಸಕರು, ಪ್ರಮುಖ ಪ್ರಗತಿಪರ ರೈತರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಡಾ.ಎಸ್.ಎ.ಪಾಟೀಲ್ ಅಭಿಮಾನಿ ಬಳಗದವರು ತಿಳಿಸಿದ್ದಾರೆ. ರೈತರು, ಅವರ ಹಿತೈಷಿಗಳು ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.