ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಸುಧಾರಣೆ, ಧರ್ಮ ಸಂಸ್ಕಾರ
ಸಂಜೆವಾಣಿ ವಾರ್ತೆ
 ಸಿರುಗುಪ್ಪ:ಜು,25- ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿನ ಮಕ್ಕಳಿಗೆ ಧರ್ಮ ಸಂಸ್ಕಾರ ಹಾಗೂ ಗುರು ಹಿರಿಯರ ಬಗ್ಗೆ ಗೌರವವನ್ನು ಸೂಚಿಸುವ ಮತ್ತು ಧಾರ್ಮಿಕ ಅಚರಣೆಗಳ ಮಹತ್ವ ಅಂಶಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು, ಮುಖ್ಯವಾಗಿ ಉತ್ತಮ ಶಿಕ್ಷಣವನ್ನು ಕೊಡಿಸಬೇಕು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮಪಂಡಿತಾರಾಧ್ಯ ಶ್ರೀಗಳು ಸಲಹೆ ನೀಡಿದರು.
   ನಗರದ  ಪಿನಾಕಿ ಆಶ್ರಮದಲ್ಲಿ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮಪಂಡಿತಾರಾಧ್ಯ ಶಿವಾಚಾರ್ಯಶ್ರೀಗಳ ಕಲ್ಯಾಣ ಮಂಟಪದಲ್ಲಿ ತಾಲೂಕಿನ ವೀರಶೈವ ಲಿಂಗಾಯಿತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಜೀವನಾಮೃತ ಸಿದ್ದಾಂತಾಶಿಖಮಾಣಿ ಆಧ್ಯಾತ್ಮಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು , ಸಮಾಜದಲ್ಲಿನ ಎಲ್ಲಾ ಧರ್ಮ ಸಂದೇಶ ಒಂದೇ ಆಗಿದ್ದು,  ಸಮಾಜದಲ್ಲಿ ಶಾಂತಿಹಾಗೂ ಸಹಬಾಳ್ವೆಯ ಜೀವನ ನಡೆಸುವುದು, ಪರಸ್ಪರ ಸಹಕಾರದಿಂದ ಜೀವನ ಮಾಡುವ ಮೂಲಕ ಸಮಾಜದಲ್ಲಿ ಶಾಂತಿಯ ವಾತಾವರಣ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ.
ಆದರೆ ಇತ್ತಿಚಿನ ತಾಂತ್ರಿಕ ಜಗತ್ತಿನಲ್ಲಿ ಮಕ್ಕಳಿಗೆ ಅಧ್ಯಾತ್ಮಿಕ ಸಂಸ್ಕಾರತಿಳಿಯದ ಕಾರಣ ಸಮಾಜದಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಜಗಳ, ವೈಮನಸ್ಸು, ದ್ವೇಷದ ಭಾವನೆ ಮೂಡಿ ಸಮಾಜದಲ್ಲಿ ಅಶಾಂತಿ ಹೆಚ್ಚಾಗಿದೆ, ಕಾರಣ ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ನಿತ್ಯವೂ ಮಠ,ಮನೆಗಳಲ್ಲಿ ನಡೆಯುವ ಪುರಾಣ ಪ್ರವಚನಗಳನ್ನು ಆಲಿಸಬೇಕು, ಮಕ್ಕಳಿಗೆ ನಮ್ಮ ಸಂಸ್ಕೃತಿ, ಧಾರ್ಮಿಕತೆಯ ಬಗ್ಗೆ ತಿಳಿಸಿ ಹೇಳಬೇಕು ಎಂದು ಹೇಳಿದರು.
       ಹಾಲ್ವಿ ಚರಣಗಿರಿ ಸಂಸ್ಥಾನ ಮಠದ ಅಭಿನವ ಮಹಾಂತ ಶ್ರೀಗಳು  ಉತ್ತಮ ಸಮಾಜದ ನಿರ್ಮಾಣದಲ್ಲಿ ಮಠಮಾನ್ಯಗಳು ನಿರ್ವಹಿಸುವ ಕಾರ್ಯದ ಬಗ್ಗೆ ವಿವರವಾಗಿ ಮಾತನಾಡಿದರು. ಬೆಂಗಳೂರಿನ ಹಿರೇಮಠದ ಅನ್ನದಾನೇಶ್ವರ ಶ್ರೀಗಳು ಜೀವನಾದರ್ಶದ ಅಧ್ಯಾತ್ಮಿಕ ಪ್ರವಚನದ ಪೀಠಿಕೆಯ ಸಾರಂಶವನ್ನು ತಿಳಿಸಿದರು. ಪಂಚಾಚಾರ್ಯ ಧ್ವಜರೋಹಣವನ್ನು ತೆಕ್ಕಲಕೋಟೆ ಕಂಬಳಿಮಠದ ವೀರಭದ್ರಶಿವಾಚಾರ್ಯ ಶ್ರೀಗಳು ನೆರವೇರಿಸಿದರು.
 ಸಿರುಗುಪ್ಪ ಗುರುಬಸವ ಮಹಾಮಠದ ಬಸವಭೂಷಣ ಸ್ವಾಮೀಜಿ,  ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯ ಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ, ಮುಖಂಡರಾದ ಎನ್.ಜಿ.ಬಸವರಾಜಪ್ಪ, ಬಿ.ಆರ್.ಚನ್ನಬಸವನಗೌಡ, ಆರ್.ಸಿ.ಪಂಪನಗೌಡ, ಆರ್.ಬಸವಲಿಂಗಪ್ಪ,  ವೆಂಕಟರೆಡ್ಡಿ, ಸಿದ್ದರಾಮಯ್ಯಸ್ವಾಮಿ,  ಚೆನ್ನಪ್ಪ, ಟಿ.ಎಂ.ಶಿವಕುಮಾರಸ್ವಾಮಿ ಇದ್ದರು.