ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲು ಗುರು ಅಗತ್ಯ
ಸಂಜೆವಾಣಿ ವಾರ್ತೆ
ಬಳ್ಳಾರಿ. ಜು,25- ಗುರು ಎಂದರೆ ಅಜ್ಞಾನವೆಂಬ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮಹಾನ್ ಬೆಳಕು”. ಹರಿ ಮುನಿದರೂ ಗುರು ಕಾಪಾಡುವನು,  ಮಾತನ್ನು ನಾನು ಹೇಳಿಕೆ ಇಷ್ಟಪಡುತ್ತೇನೆ ಎಂದು  ಮಾತೃ ಮಹಿಳಾ ಮಂಡಳಿಯ ಅಧ್ಯಕ್ಷರು ಕೆ ಪುಷ್ಪ ಚಂದ್ರಶೇಖರ್ ಹೇಳಿದರು. ನಗರದ ಹೊರವಲಯದ  ಅಲ್ಲಿಪುರದ ಅನಾಥಾಶ್ರಮದಲ್ಲಿ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ  ಅಲ್ಲಿರೋ ಮಕ್ಕಳಿಗೆ  ಗುರುಪೌರ್ಣಮಿಯ ವಿಶೇಷತೆಯನ್ನು ತಿಳಿಸುತ್ತಾ ಮಹಾಭಾರತ ಬರೆದಂತಹ ವ್ಯಾಸರಾಯನ ಜನ್ಮದಿನವನ್ನು ಗುರು ಪೂರ್ಣಿಮಾ ಹಾಗೂ ವೇದ ಪೌರ್ಣಮಿ ಅಂದೇನೂ ಕರೆಯುತ್ತೇವೆ. ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಎಂದು ಹಿರಿಯರು ಹೇಳುತ್ತಾರೆ. “ಪ್ರತಿಯೊಬ್ಬರ ಬದುಕಿನಲ್ಲಿ ಗುರು ಇಲ್ಲದೆ ಏನು ಸಾಧ್ಯವಿಲ್ಲ ಎಂದರು.
 ಸದಸ್ಯರಾದ ಕೆ ಸುಗುಣ ಅವರು ಪಾಠ ಹೇಳಿಕೊಡುವವರಷ್ಟೇ ಗುರುವಲ್ಲ ಜೀವನದಲ್ಲಿ ನಮಗೆ ಹೇಗಿರಬೇಕು ಎಂದು,ಆಮೇಲೆ ನಮಗೆ ನೋಡಿಕೊಳ್ಳುವವರು ಎಲ್ಲರೂ ಗುರುಗಳ ಸ್ಥಾನದಲ್ಲಿದ್ದು ನಮಗೆ ಒಳ್ಳೆ ಮಾರ್ಗವನ್ನು ಹೇಳುವವರು ಎಲ್ಲರೂ ಗುರು ಸ್ಥಾನದಲ್ಲಿ ಇದ್ದಂತೆ ಎಂದು ಹೇಳಿದರು.
 ಸದಸ್ಯರು ಕೋಮಾಲಿಕ ಹಾಗೂ ಶಾರದಾ ಅವರು ಉಪಸ್ಥಿತರಿದ್ದರು.
 ಮಕ್ಕಳಿಗೆ ಎಸ್ ಆರ್ ಎಂ ಮಧು ಅವರು ಸಹಕಾರದೊಂದಿಗೆ  ಕುಡಿಯಲು  ವಾಟರ್ ಬಾಟಲ್ ಗಳನ್ನು ವಿತರಿಸಲಾಯಿತು.