ಶ್ರೀ ಜಯತೀರ್ಥ ಶ್ರೀಪಾದರ ಆರಾಧನಾ ಆಚರಣೆ
ಹುಬ್ಬಳ್ಳಿ,ಜು.೨೫: ಆಚಾರ್ಯ ಮಧ್ವರ ಪರಂಪರೆ ಯಲ್ಲಿ ಐದನೇ ಯತಿ ಶ್ರೇಷ್ಠ ರಾದ ಮಳಖೇಡ ನಿವಾಸಿ ಶ್ರೀ ಜಯತೀರ್ಥ ಶ್ರೀಪಾದಂಗಳವರ ಆರಾಧನೆಯನ್ನು ಹುಬ್ಬಳ್ಳಿ ಶಾಂತಿ ಕಾಲನಿ ಯಲ್ಲಿ ರುವ ಶ್ರೀ ರಾಘವೇಂದ್ರಸ್ವಾಮಿಗಳ ವೃಂದಾವನ ಸನ್ನಿದಿಯಲ್ಲಿ ಶ್ರದ್ದೆ, ಭಕ್ತಿಯಿಂದ ಆಚರಿಸಲಾಯಿತು. ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಸೇವಾ ಸಮಿತಿ ಯಿಂದ ರಾಯರ ಅಷ್ಟೋತ್ತರ ದ ಜೊತೆಗೆ ವಿಷ್ಣುಸಹಸ್ರನಾಮ, ವೆಂಕಟೇಶ ಸ್ತೋತ್ರ, ರಮಾ ಸ್ತೋತ್ರ, ಶ್ರೀ ಹರಿ ವಾಯುಸ್ತುತಿ, ಯಂತ್ರೋದ್ದಾರಕ ಸ್ತೋತ್ರ, ಅಪ್ಪಣ್ಣಾಚಾರ್ಯರು ವಿರಚಿತ ಗುರು ಸ್ತೋತ್ರ, ಕನಕದಾಸರು ರಚಿಸಿದ ಕೇಶವನಾಮ ಹಾಗೂ ವ್ಯಾಸವಿಟ್ಟಲರು ರಚಿಸಿದ ವಿಜಯ ಕವಚ ಪಾರಾಯಣ ವೈಭವದಿಂದ ನಡೆಯುತು. ನಂತರ ಸಮಿತಿ ಅಧ್ಯಕ್ಷ ಹಾಗೂ ಹರಿದಾಸ ಚಿಂತಕರಾದ ವಿಷ್ಣುತೀರ್ಥ ಕಲ್ಲೂರಕರ ಪ್ರಾಸ್ತಾವಿಕವಾಗಿ ಮಾತನಾಡುತ್ತ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸವನ್ನು ಸಾಮಾಜಿಕ ಹಾಗೂ ಧಾರ್ಮಿಕ ಲೇಪನ ದೊಂದಿಗೆ ಮಾಡಿದ್ದಾರೆ. ಅವರು ರಚಿಸಿದ ಇಪ್ಪತ್ತು ಗ್ರಂಥಗಳಲ್ಲಿ ಸುಧಾ ಗ್ರಂಥ ಇಂದಿಗೂ ಪಂಡಿತ ರಗಳ ಮೇಲೆ ಅಗಾಧವಾದ ಪ್ರಭಾವವನ್ನು ಬೀರಿದೆ. ಅವರು ಕೇವಲ ೨೩ ವರುಷ ಪಿಠದಲ್ಲಿ ಇದ್ದು ಅಮೋಘ ಸಾಧನೆಯನ್ನು ಮಾಡಿದ ಮಹಾನುಭಾವರು ಎಂದು ತಿಳಿಸಿದರು. ಕಾರ್ಯಕ್ರಮ ದಲ್ಲಿ ಮೋಹನ ಜಕಾತಿ, ಆನಂದ ಜೋಶಿ, ಅನಂತ ಗಿಣಗೇರ, ವೆಂಕಟೇಶ ಘಾಟಿಕಾರ, ಅರ್ಚಕ ಕೇಶವ ಜೋಶಿ, ಸುಧೀಂದ್ರ, ರಾಘವೇಂದ್ರ ಕುಲಕರ್ಣಿ, ಶಿವಚಿದಂಬರ ಪಾಟೀಲ, ದೀರೇಂದ್ರ ಬಾಗಲಕೋಟ, ಆನಂದ ಕಲಘಟಗಿ, ತಾಸಗಾವ್ಕರ,ಅರುಣ ಉರಣಕರ, ವಿಷ್ಣುತೀರ್ಥ ಕಲ್ಲೂರಕರ, ವಾದಿರಾಜ ಕೊಯಿಮತ್ತೂರ್, ಪರಿಮಳಚಾರ್ಯ, ಶ್ರೀಮತಿ ದೇಸಾಯಿ, ಶ್ರೀಮತಿ ನಿರ್ಮಲಾ, ಶ್ರೀಮತಿ ಸುನಂದಾ, ಮುಂತಾದ ಭಕ್ತ ವೃಂದ ಪಾಲ್ಗೊಂಡಿದ್ದರು. ನಂತರ ನೈವೇದ್ಯ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.