ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಮನವಿ
ಲಕ್ಷೆ÷್ಮÃಶ್ವರ,ಜು.೨೫:ಲಕ್ಷೆ÷್ಮÃಶ್ವರನಗರಕ್ಕೆ ಮುಂಡರಗಿ ತಾಲೂಕಿನ ಹಮ್ಮಿಗಿ ಡ್ಯಾಮಿನ ಹಿನ್ನೀರಿನ ಗ್ರಾಮವಾದ ಗುಮ್ಮಗೋಳದಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆಯ ಜಿಲ್ಲಾ ಹಾಗೂ ತಾಲೂಕ ಘಟಕದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಮನವಿ ಪತ್ರವನ್ನು ಮುಖ್ಯ ಅಧಿಕಾರಿಗಳ ಮುಖಾಂತರ ಕಾರ್ಯಕರ್ತರು ಸಲ್ಲಿಸಿದರು.
ಮನವಿ ಪತ್ರದಲ್ಲಿ ಗದಗ ಜಿಲ್ಲೆಯಲ್ಲಿ ಗದಗ ನಂತರ ಅತ್ಯಂತ ಎರಡನೆಯ ದೊಡ್ಡ ನಗರವಾಗಿದ್ದು ವ್ಯಾಪಾರ ವಾಣಿಜ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತೀವ್ರ ವತಿಯಿಂದ ಬೆಳವಣಿಗೆ ಹೊಂದುತ್ತಿರ ವ ನಗರವಾಗಿದ್ದು ಐತಿಹಾಸಿಕ ಪರಂಪರೆಯನ್ನು ಹೊಂದಿದೆ.
ಈಗ ಹಾವೇರಿ ಜಿಲ್ಲೆಯ ಮೇವುಂಡಿ ಗ್ರಾಮದಿಂದ ತುಂಗಭದ್ರಾ ನದಿಯಿಂದ ಜಾಕ್ ವೆಲ್ ಮೂಲಕ ನೀರು ಸರಬರಾಜು ಆಗುತ್ತಿದ್ದು ಸುಮಾರು ೨೫ ವರ್ಷಗಳ ಹಿಂದೆ ಈ ಯೋಜನೆ ಜಾರಿಯಾಗಿದ್ದು ಪೈಪುಗಳು ತುಕ್ಕು ಹಿಡಿದು ಎಲ್ಲಿ ಬೇಕಾದಲ್ಲಿ ಸೋರುತ್ತಿರುವುದರಿಂದ ನೀರು ಸರಬರಾಜಿಗೆ ತೊಂದರೆಯಾಗುತ್ತಿದ್ದು ಬೇಸಿಗೆ ಕಾಲದಲ್ಲಿ ಮೇವುಂಡಿ ಜಾಕೊಲ್ವರೆಗೂ ತುಂಗಭದ್ರಾ ನದಿಯ ಹಮ್ಮಿಗಿ ಡ್ಯಾಮಿನ ಹಿನ್ನಿರು ಮೇವುಂಡಿ ಜಾಕವೆಲ್ ವರೆಗೂ ನದಿ ನೀರು ಖಾಲಿಯಾಗಿ ನಗರದ ಜನತೆ ಪರದಾಡಬೇಕಾಗುತ್ತದೆ.
ಆದ್ದರಿಂದ ಸರ್ಕಾರ ಹಮ್ಮಿಗಿ ಡ್ಯಾಮಿನ ಹಿನ್ನೀರಿನ ಗ್ರಾಮವಾದ ಗುಮ್ಮಗೋಳದಿಂದ ಶಾಶ್ವತ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಸರ್ಕಾರಕ್ಕೆ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಶರಣು ಗೂಡಿ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಆಡೂರ ನಗರ ನಗರ ಘಟಕದ ಅಧ್ಯಕ್ಷ ಪ್ರವೀಣ್ ಆಚಾರಿ ಲಕ್ಷಿ÷್ಮÃಶ ತಾಲೂಕ ಅಧ್ಯಕ್ಷ ನಾಗೇಶ ಅಮರಾಪುರ ಮಹಮ್ಮದ್ ಅಲಿ ಶಿಗ್ಗಾವ್ ಮೈನುದ್ದೀನ ಮನಿ ಯಾರ ವಿನಾಯಕ್ ಚಿತ್ರಭಾವಿ ಎಲ್ಲಪ್ಪ ಹಂಚಿಗೆ ನಾಗರಾಜ್ ಅಣ್ಣಿಗೇರಿ ಎಲ್ಲಪ್ಪ ಗೌಡ ಮಾದ್ನೂರ ಅಭಿಷೇಕ್ ಸಾತಪೂತೆ ವಿನಾಯಕ್ ಸಂಶಿ ಆಸ್ಪಾಕ್ ಬಾಗೋಡಿ ಚಂದ್ರಕಾಂತ ರೊಟ್ಟಿದವಾಡ ವಸಂತಗೌಡ ಪಾಟೀಲ್ ಶಂಕರ್ ಬೂದಿಹಾಳ್ ಸಂತೋಷ ರಾಟೋಡ್ ಅರಷದ್ ಬೆಟಗೇರಿ ನಾಗರಾಜ್ ಬನ್ನಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.
ಕಂದಾಯ ಅಧಿಕಾರಿ ಶಿವಾನಂದ ಅಜ್ಜಣ್ಣನವರ ಮತ್ತು ವ್ಯವಸ್ಥಾಪಕಿ ಮಂಜುಳಾ ಹೂಗಾರ್ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸುವುದಾಗಿ ಹೇಳಿದರು.