ಮುಖ್ಯಮಂತ್ರಿ, ಸಚಿವರ ಭೇಟಿ ಮಾಡಿದ ರೈತರು, ಕಬ್ಬು ಬೆಳೆಗಾರರ ನಿಯೋಗ
ಕಲಬುರಗಿ,ಜು.25-ರೈತರು ಮತ್ತು ಕಬ್ಬು ಬೆಳೆಗಾರರು ಬುಧವಾರ ಬೆಳಿಗ್ಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾಗಿ ಕಬ್ಬಿನ ಬಾಕಿ ಹಣದ ಬಗ್ಗೆ ಚರ್ಚಿಸಿದರು. ನಂತರ ಸಚಿವರು ಕಬ್ಬಿನ ಬಾಕಿ ಹಣ ಪಾವತಿಸಲು ತಕ್ಷಣವೇ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಮಧ್ಯಾಹ್ನ ಉಟದ ನಂತರ 5 ನಿಮಿಷಗಳ ಕಾಲ ಸಮಯದಲ್ಲಿ ಅಧಿವೇಶನದಲ್ಲಿ ಒಳಗಡೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗಿದ್ದು, ಅವರು ಸಹ ಬಾಕಿ ಪಾವತಿಗಾಗಿ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ತದನಂತರ ಶುಗರ್ ಕೇನ್ ನಿರ್ದೇಶಕರಿಗೆ ಭೆಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು. ನಂತರ ಕಲಬುರಗಿ ಕಬ್ಬು ಬೆಳೆಗಾರರ ಜೊತೆಗೆ ಸುದೀರ್ಘವಾದ ಸಭೆ ನಡೆಸಿದ ಅವರು ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸಲು ಆದೇಶ ಹೊರಡಿಸಿದರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಎನ್.ಎಲ್.ಭರತರಾಜ್, ಕರ್ನಾಟಕ ಪ್ರಾಂತ ರೈತ ಸಂಘದ ಕಲಬುರಗಿ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಸಿದ್ದರಾಮ ಧನ್ನೂರು, ಅಶೋಕ ಹೂಗಾರ, ಸಿದ್ದಪ್ಪಾ ಗುಡೆದ, ಶಾಂತು ಅಂಬಾಣಿ, ರಾಯಪ್ಪಾ ಪೂಜಾರಿ, ಅರ್ಜುನ್ ಕುಂಬಾರ, ಮಹಾಲಿಂಗ ಮಾಲಿಂಗಪೂರ ಸೇರಿದಂತೆ 79 ಜನ ರೈತರು ಇದ್ದರು.