ಮಹಾಸಭೆಯಲ್ಲಿ ಮುಂದುವರೆದ ಗೊಂದಲ: ಬಸವರಾಜ ದೇಶಮುಖ ನೇತೃತ್ವದಲ್ಲಿ ಸಭೆ
ಕಲಬುರಗಿ,ಜು.25-ಅಖಿಲ ಭಾರತ ವೀರಶೈವ ಮಹಾಸಭೆಯಲ್ಲಿ ಮುಂದುವರೆದಿರುವ ಗೊಂದಲ ಸರಿ ಪಡಿಸಲು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ದೇಶಮುಖ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಅಖಿಲ ಭಾರತ ವೀರಶೈವ ಮಾಹಾಸಭಾದ ಜಿಲ್ಲಾ ಅಧ್ಯಕ್ಷರ ಚುನಾವಣೆ ಮಠಾಧಿಶರು, ಸಚಿವರು, ಶಾಸಕರು, ಮಾಜಿ ಶಾಸಕರು ಮತ್ತು ಮುಖಂಡರ ಮಧ್ಯಸ್ಥಿಕೆಯಲ್ಲಿ ಸರಳವಾಗಿ ನಡೆದು ಎಲ್ಲವು ಬಗೆಹರಿಯಿತು ಎನ್ನವಸ್ಟರಲ್ಲಿ ಕಾರ್ಯಕಾರಿಣಿ ಸದಸ್ಯರ ಪಟ್ಟಿ ಬಿಡುಗಡೆಯಾಗುತ್ತಲೆ ಅಸಮಧಾನ ಬುಗಿಲೆದ್ದಿದೆ. ಈ ಹಿನ್ನೆಲೆಲ್ಲಿ ಶಶಿಕಾಂತ ಪಾಟೀಲ ಸೇರಿ ಪೇನಲ್ ಸದಸ್ಯರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ದೇಶಮುಖ ಅವರನ್ನು ಭೇಟಿ ಮಾಡಿ ತಮ್ಮ ಮತ್ತು ಮಠಾಧೀಶರು, ಸಚಿವರು, ಶಾಸಕರು, ಮಾಜಿ ಶಾಸಕರು ಮತ್ತು ಇನ್ನಿತರ ಮುಖಂಡರ ಮಾತಿಗೆ ಗೌರವ ಕೊಟ್ಟು ತುಟಿ ಪಿಟಕೆನ್ನದೆ ಸುಮ್ಮನಾಗಿದ್ದೇವೆ. ಆದರೆ ನನ್ನ ಪೇನಲ್ ಕಡೆಯಿಂದ ಹದಿನೈದು ಮಂದಿ ಲಿಸ್ಟ್ ಮೋದಿಯವರಿಗೆ ಕೋಡಿ. ಅವರೆಲ್ಲರನ್ನು ಕಾರ್ಯಕಾರಿಣಿಯಲ್ಲಿ ಸೇರಿಸಿಕೊಳ್ಳಲು ಹೇಳುತ್ತೆವೆ ಮತ್ತು ಜಿಲ್ಲಾಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿರುವುದರಿಂದ ಕಲಬುರಗಿ ತಾಲೂಕಾ ಅಧ್ಯಕ್ಷ ನೀವು ಶಿಫಾರಸ್ಸು ಮಾಡಿದವರಿಗೆ ಬಿಟ್ಟು ಕೊಡಲು ಸೂಚಿಸಿದ್ದೆವೆ ಎಂದು ಹೇಳಿದಿರಿ ಅದರಂತೆ ನಾವು ಲಿಸ್ಟ್ ನೀಡಿ ತಾಲೂಕಾ ಅಧ್ಯಕ್ಷ ಸ್ಥಾನಕ್ಕೆ ಪ್ರಶಾಂತ ಗುಡ್ಡಾ ಅವರ ಹೆಸರು ಶಿಫಾರಸ್ಸು ಮಾಡಿದ್ದೆವು. ಆದರೆ, ಮೋದಿಯವರು ಕಾರ್ಯಕಾರಿಣಿಯಲ್ಲಿ ಆಗಲಿ, ತಾಲೂಕಾ ವಿಷಯದಲ್ಲಿ ಆಗಲಿ ಯಾರ ಮಾತಿಗೂ ಗೌರವ ನೀಡುತ್ತಿಲ್ಲ. ಇದು ಸಮಾಜಕ್ಕೆ ಮಾಡಿದ ಅವಮಾನವಾಗಿದ್ದು, ಇದಕ್ಕೆ ಅವಕಾಶ ನೀಡದೆ ಮತ್ತೊಮ್ಮೆ ಮಠಾಧೀಶರು, ಸಚಿವರು, ಶಾಸಕರು, ಮಾಜಿ ಶಾಸಕರು, ಮುಖಂಡರ ಸಭೆ ಕರೆದು ಈ ಎಲ್ಲಾ ಬೆಳವಣಿಗೆಗಳನ್ನು ಎಲ್ಲರ ಗಮನಕ್ಕೆ ತಂದು ಯಾರಿಗೂ ಅನ್ಯಾಯವಾಗದಂತೆ ನೂತನ ಪಟ್ಟಿಮಾಡಿ ಬೀಡುಗಡೆ ಮಾಡಬೇಕು ಇಲ್ಲದಿದ್ದರೆ ತಾಲೂಕಾ ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸಿದ ಪ್ರಶಾಂತ ಗುಡ್ಡಾ ಅವರು ನಾಮಪತ್ರ ಹಿಂಪಡೆಯದೆ ಇರುವುದರಿಂದ ಅವಿರೋಧ ಆಯ್ಕೆ ಮಾಡಲಿಕ್ಕೂ ಬರುವುದಿಲ್ಲ. ಅಲ್ಲದೆ ನಾಮಪತ್ರ ತಿರಸ್ಕತಗೊಂಡವರನ್ನು ಪಧಾರಿಕಾರಿ ಪಟ್ಟಿಯಲ್ಲಿ ಸೇರಿಸಿದ್ದು ಸೇರಿದಂತೆ ಹಲವಾರು ದೋಷಗಳಿವೆ. ಚುನಾವಣೆ ಪಾರದರ್ಶಕವಾಗಿ ನಡೆಯದೆ ಅಕ್ರಮವಾಗಿ ನಡೆದಿದೆ ಎಂದು ನಾವು ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎನು ಮಾಡಬೇಕು ನೀವು ದಾರಿ ತೋರಿಸಿ ಎಂದಾಗ ಬಸವರಾಜ ದೇಶಮುಖ ಅವರು ಯಾರೂ ತಾಳ್ಮೆಯನ್ನು ಕಳೆದುಕೊಳ್ಳಬೇಡಿ ಅಧಿವೇಶನ ನಡೆದಿರುವುದರಿಂದ ಶಾಸಕರು ಬೆಂಗಳೂರಿನಲ್ಲಿದ್ದಾರೆ. ಮಠಾಧೀಶರು, ಸಚಿವರು ಶಾಸಕರು, ಮಾಜಿ ಶಾಸಕರು ಮುಖಂಡರನ್ನು ಸಂಪರ್ಕಿಸಿ ಎರಡು ದಿನದಲ್ಲಿ ಸಭೆ ಸೇರಿಸಿ ಎಲ್ಲರ ಅಭಿಪ್ರಾಯ ತೆಗೆದುಕೊಂಡು ಎಲ್ಲವನ್ನು ಬಗೆಹರಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಶಶಿಕಾಂತ ಪಾಟೀಲ, ಎಂ.ಎಸ್. ಪಾಟೀಲ ನರಿಬೋಳ, ಶರಣು ಪಪ್ಪಾ, ಪ್ರಶಾಂತ ಗುಡ್ಡಾ, ಮೃತ್ಯುಂಜಯ ಪಲ್ಲಾಪೂರಮಠ, ಗೌಡಪ್ಪಗೌಡ, ಚಿದಾನಂದ ಗುಡ್ಡಾ, ಮಂಜುನಾಥ ಕಾಳೆ, ಸಂತೋಷ ಪೋಲಿಸ್ ಪಾಟೀಲ ನರಿಬೋಳ, ಮಹಾಂತೆಶ್ ಪಾಟೀಲ, ಪ್ರಸಾದ ಪಟ್ಟಣಕರ್, ರಾಜಕುಮಾರ ಅವಂಟಗಿ, ಮಲ್ಲಿಕಾರ್ಜುನ್ ಪಾಟೀಲ, ಗಿರಿರಾಜ್ ಜೀವಣಗಿ ಇನ್ನಿತರರಿದ್ದರು.