ದೇಶದ ಪ್ರಗತಿಗೆ ಪೂರಕ ಬಜೆಟ್: ಅಮೀನರೆಡ್ಡಿ ಯಾಳಗಿ
ಕೆಂಭಾವಿ:ಜು.25:ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅಭ್ಯದಯದ ಮುಂದಾಲೋಚನೆ ಹೊಂದಿರುವ ಐತಿಹಾಸಿಕ ಬಜೆಟ್ ನ್ನು ವಿತ್ತ ಸಚಿವೆ ನಿರ್ಮಲಾ ಸಿತಾರಾಮನ್ ಮಂಡಿಸಿದ್ದಾರೆ, ಎಂದು ಬಿಜೆಪಿ ಜಿಲ್ಲಧ್ಯಕ್ಷ ಅಮೀನರೆಡ್ಡಿ ಯಾಳಗಿ ಹೇಳಿದರು.
ಮೊನ್ನೆ ನಡೆದ ಕೇಂದ್ರ ಬಜೆಟ್ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ,ಬಜೆಟ್ ನಲ್ಲಿರುವ ಎಲ್ಲ ಅಂಶಗಳು ದೇಶದ ಸಮಗ್ರ ಪ್ರಗತಿಗೆ ಮುಖ್ಯಪಾತ್ರವಹಿಸುತ್ತವೆ.ಯುವಕರ ಉದ್ಯೋಗ ಮತ್ತು ಕೌಶಲ್ಯದ ಯೋಜನೆಗೆ ಎರಡು ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದ್ದಾರೆ.ಬಜೆಟ್ ನಲ್ಲಿ ರೈತರು ಮಹಿಳೆಯರು. ಯುವಕರು.ವಿದ್ಯಾರ್ಥಿಗಳಿಗೆ ಒತ್ತು ನೀಡಲಾಗಿದೆ .ವಿಶೇಷವಾಗಿ ಹಣ ಮೀಸಲಿಟ್ಟು ನಾರಿ ಶಕ್ತಿಗೆ ಬಲ ತುಂಬಲಾಗಿದೆ.ಸ್ತ್ರೀ ಸಬಲೀಕರಣದ ನಿಟ್ಟಿನಲ್ಲಿ ಆಶಾದಾಯಕ ಬಜೆಟ್ ಇದಾಗಿದೆ.ಒಟ್ಟಿನಲ್ಲಿ ಜನಪರ ಮತ್ತು ಅಭಿವೃದ್ಧಿ ಪರ ಬಜೆಟ್ ಇದಾಗಿದೆ ಎಂದು ತಿಳಿಸಿದ್ದಾರೆ.