ವಸತಿ ಶಾಲೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಲು ಅಲ್ಲಾ ಬಕ್ಷ್ ಕರೆ
ಕಲಬುರಗಿ,ಜು.25-ವಸತಿ ಶಾಲೆಗಳಲ್ಲಿ ಓದುವ ಬಡ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಎಂ.ಎಸ್.ಅಲ್ಲಾಬಕ್ಷ್ ಕರೆ ನೀಡಿದರು.
ಕಲಬುರಗಿ ಜಿಲ್ಲೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನೌಕರರು ಸೋಮವಾರ ಇಲಾಖೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ಶಿಸ್ತು, ಸ್ವಚ್ಛತೆಯೊಂದಿಗೆ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕೆAದು ಕಿವಿಮಾತು ಹೇಳಿದ ಅವರು, ಈ ಹಿಂದಿನAತೆ ಎಲ್ಲರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಸುವುದಾಗಿ ತಿಳಿಸಿದರು.
ಸ್ವಾಗತ ಸಮಾರಂಭದಲ್ಲಿ ಜಿಲ್ಲಾ ಸಮನ್ವಾಧಿಕಾರಿ ಸುರೇಶ್ ಅಲ್ದಾರ್ಥಿ, ಪ್ರಾಂಶುಪಾಲರಾದ ಶಿವಮ್ಮ ಬಡಿಗೇರ, ಶಿವರಾಮ ಚವ್ಹಾಣ, ಮಲ್ಲಿಕಾರ್ಜುನ ಬಿರಾದಾರ, ಶರಣ ಬಸಪ್ಪ ಮಾಗಶೆಟ್ಟಿ, ಡಾ.ರಾಜಶೇಖರ ಮಾಂಗ್, ಡಾ.ಶರಣಪ್ಪ ಕವಡೆ, ಜ್ಯೋತಿ, ಶಿವಲೀಲ, ಶ್ರೀದೇವಿ, ಬಸಮ್ಮ, ಕರುಣಾ ದೇವಿ, ಶರಣಬಪ್ಪ ಪಾಟೀಲ, ಸಂತೋಷ ಪಾಟೀಲ, ಪ್ರಶಾಂತ, ಸಂತೋಷ, ಮಂಜುನಾಥ, ಮಲಕಪ್ಪ, ಮಡಿವಾಳಪ್ಪ ಪಾಸೋಡಿ, ಮಾಹಿತಿ ಸಹಾಯಕರಾದ ಆನಂದ ಕೊಡೆಕಲ್, ಕುಮಾರ ಸ್ವಾಮಿ ಹಿರೇಮಠ, ಡಾ.ನಾಗರಾಜ ಹಳಿಗೋದಿ ಸೇರಿದಂತೆ ಅನೇಕ ಜನ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಕಳೆದ ಎರಡು ವರ್ಷಗಳ ಹಿಂದೆ ಅಲ್ಲಾ ಬಕಾಶ್ ಅವರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾಗಿ ಉತ್ತಮ ಸೇವೆ ಸಲ್ಲಿಸಿ ಅಪರ ನಿರ್ದೇಶಕರಾಗಿ ಬಡ್ತಿ ಹೊಂದಿ ಧಾರವಾಡಕ್ಕೆ ಹೋಗಿದ್ದರು.ಇದೀಗ ಮತ್ತೊಮ್ಮೆ ಅವರು ಆಗಮಿಸಿದ್ದರಿಂದ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳಿಗೆ ವೇಗ ದೊರೆಯಲಿದೆ.