ದೇವಿಂದ್ರಪ್ಪ ಗಣಮುಖಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಕಲಬುರಗಿ,ಜು.25-ಮಾಜಿ ಶಿಕ್ಷಣ ಸಚಿವ ಅಣ್ಣಾರಾವ ಗಣಮುಖಿ ಅವರ ಮೊಮ್ಮಗ, ಝಾಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ದೇವಿಂದ್ರಪ್ಪ ಗಣಮುಖಿ ಅವರಿಗೆ ಬೆಂಗಳೂರಿನ ರಾಜ್ಯ ಮತ್ತು ರಾಷ್ಟç ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಕೇಂದ್ರ ಸಂಘ 2023-24ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.
ಬೆಂಗಳೂರಿನ ಅರಮನೆ ಮೈದಾನ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಭವನದ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕಚೇರಿ ಆಚರಣದಲ್ಲಿ ಜು.23 ರಂದು ನಡೆದ ಸಮಾರಂಭದಲ್ಲಿ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಮಾಜಿ ಸಚಿವರಾದ ಪಿ.ಜಿ.ಆರ್.ಸಿಂಧ್ಯಾ, ಹೆಚ್.ಎಂ.ರೇವಣ್ಣ, ಸಂಘದ ಅಧ್ಯಕ್ಷ ಕೆ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಡಾ.ವಿ.ಪಿ.ಕುಮಾರಸ್ವಾಮಿ, ಗೌರವಾಧ್ಯಕ್ಷ ಡಾ.ಎನ್.ಗಂಗಾಧರಪ್ಪ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ, ಸಂಘದ ಕಲಬುರಗಿ ಜಿಲ್ಲಾ ಅಧ್ಯಕ್ಷ ರಾಜು ಲೇಂಗಟಿ, ಶಿಕ್ಷಕರಾದ ಮಲ್ಲಯ್ಯ ಗುತ್ತೇದಾರ, ಮಹೇಶ ಹೂಗಾರ, ಪರಮೇಶ್ವರ ದೇಸಾಯಿ, ನೀಲಕಂಠಯ್ಯ ಹಿರೇಮಠ, ಶರಣಬಸಪ್ಪ ನರೋಣಿ, ದೇವಿಂದ್ರಪ್ಪ ಬಡಿಗೇರ, ಬಸಯ್ಯ ಹೊದಲೂರ ಉಪಸ್ಥಿತರಿದ್ದರು.