ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ: ಓರ್ವನ ಬಂಧನ
ವಿಜಯಪುರ,ಜು.25:ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟದ ವೇಳೆ ಪೊಲೀಸರು ಹಾಗೂ ಆಹಾರ ನಿರೀಕ್ಷಕ ಅಧಿಕಾರಿಗಳು ದಾಳಿ ನಡೆಸಿ ಅಕ್ಕಿ ಜಪ್ತಿ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಕೊಳೂರಗಿ ಗ್ರಾಮದ ಬಳಿ ನಡೆದಿದೆ.
ಅಬೂಬಕರ್ ಲಾಲಸಾಬ್ ಜಮಾದಾರ ಬಂಧಿತ ಆರೋಪಿ.
ಬಂಧಿತ ಆರೋಪಿಯಿಂದ 16,153 ಮೌಲ್ಯದ 500 ಕೆಜಿ 57 ಗ್ರಾಂ ಪಡಿತರ ಅಕ್ಕಿ, 50 ಸಾವಿರ ಮೌಲ್ಯದ ವಾಹನ, ಒಂದು ಮಷಿನ್ ನನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.