ಜಗತ್ತಿನಲ್ಲಿಯೇ ಸಂಸ್ಕಾರ ಹೊಂದಿದ ದೇಶ ಭಾರತ:ಡಾ.ಹರನಾಳ
ತಾಳಿಕೋಟೆ:ಜು.25: ಶರಣರು ಸಂತರು ಸತ್ಪುರುಷರು, ದಾರ್ಶನಿಕರು ಹಾಗೂ ಕವಿಗಳನ್ನು ಹೊಂದಿದAತಹ ಭಾರತ ದೇಶದ ಇತಿಹಾಸವನ್ನು ಅರಿಯಲು ಹಾಗೂ ಅದರ ನಡೆ ನುಡಿಗಳನ್ನು ಕಲಿಯಲು ವಿದೇಶಿಯರು ಹಾತೋರೆಯುತ್ತಿದ್ದಾರೆ ಈ ಭಾರತದ ಭೂಮಿಯನ್ನು ಸ್ಪರ್ಷಮಾಡಿ ನಮಿಸುವ ಕಾರ್ಯ ಮಾಡುತ್ತಾ ಸಾಗಿದ್ದಾರೆಂದು ಮುದ್ದೇಬಿಹಾಳದ ಎಂ.ಜಿ.ಎA.ಕೆ.ಪ.ಪೂ.ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ಕೆ.ಹರನಾಳ ಅವರು ನುಡಿದರು.
ಬುಧವಾರರಂದು ಸ್ಥಳೀಯ ಎಸ್.ಕೆ.ಪಧವಿಪೂರ್ವ ಕಾಲೇಜ್ ಪ್ರೌಢ ಶಾಲಾ ವಿಭಾಗದ ವತಿಯಿಂದ ಶಾಲಾ ಸಂಸತ್ತು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಅತಿಥಿ ಸ್ಥಾನ ಅಲಂಕರಿಸಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು ಭಾರತ ದೇಶದಲ್ಲಿ ಕರ್ನಾಟಕವು ಒಳ್ಳೆಯ ಸಂಸ್ಕಾರಯುತನಾಡೆAದು ಹೆಗ್ಗಳಿಕೆಗೆ ಪಾತ್ರವಾಗಿದೆ ಅಂತಹದರಲ್ಲಿ ವಿಜಯಪುರ ಜಿಲ್ಲೆ ತನ್ನ ಶ್ರೇಯಸ್ಸನ್ನು ಬೆಳೆಸಿಕೊಂಡಿದೆ ಎಂದರು. ಜಿಲ್ಲೆಯ ಸುಮಾರು 11 ತಾಲೂಕುಗಳಲ್ಲಿ ಶರಣ ಸತ್ಪುರುಷರ ದಾರ್ಶನಿಕರಂತೆ ತಾಳಿಕೋಟೆ ತಾಲೂಕಿನಲ್ಲಿಯೂ ಸಹ ಶ್ರೀ ಖಾಸ್ಗತೇಶ್ವರರ ಮಠವು ಹಾಗೂ ಶಾಲೆಯು ಸಹ ಪ್ರಸಿದ್ದತೆ ಪಡೆದಿದೆ ಎಂದರು. ಇಂದು ಶಾಲೆಯಲ್ಲಿ ಜರುಗಿದ ಸಂಸತ್ತಿನಲ್ಲಿ 15 ವಿಭಾಗಗಳನ್ನು ಮಾಡಿದ್ದು ಈ ಶಾಲೆಯಲ್ಲಿ 700 ವಿದ್ಯಾರ್ಥಿ ಒಳಗೊಂಡ ಈ ಶಾಲೆಯಲ್ಲಿ ಮಂತ್ರಿ ಮಂಡಲವನ್ನು ರಚಿಸಲಾಗಿದೆ ಪ್ರಧಾನ ಮಂತ್ರಿ, ಆರೋಗ್ಯ ಮಂತ್ರಿಯ ಕೆಲಸವೇನು ಎಲ್ಲವನ್ನು ಸಹ ಇಂದು ಹುದ್ದೆ ಅಲಂಕರಿಸಿದ ವಿಧ್ಯಾರ್ಥಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ಅರೀತು ಕೆಲಸ ಮಾಡಬೇಕೆಂದರು. ಇಲ್ಲಿಯ ಪಿಯುಸಿ ಕಾಲೇಜ್‌ನಲ್ಲಿ ರ‍್ಯಾಂಕ್ ಬರಬೇಕಾದರೆ ಹಾಗೂ 8, 9, 10 ನೇ ತರಗತಿ ವಿದ್ಯಾರ್ಥಿಗಳೂ ಸಹ ಹೆಚ್ಚಿನ ಅಂಕ ಪಡೆಯಬೇಕಾದರೆ ಇಲ್ಲಿಯ ಮಾರ್ಗದರ್ಶಕರ ಸಲಹೇ ಕಾರಣವಾಗಿದೆ ಎಂದರು. ನಡೆದಾಡುವ ದೇವರೆಂದು ಹೆಸರುವಾಸಿಯಾಗಿದ್ದ ತಾಳಿಕೋಟೆಯ ಶ್ರೀ ಖಾಸ್ಗತರು ಇಡೀ ವಿಜಯಪುರ ಜಿಲ್ಲೆ ಅಷ್ಟೇ ಅಲ್ಲಾ ಇಡೀ ದೇಶವೇ ಪಾವನವಾಗಬೇಕೆಂಬ ಉದ್ದೇಶ ಶ್ರೀ ಖಾಸ್ಗತರದ್ದಾಗಿತ್ತೆಂದರು. ಗುರುವಿನ ಸನ್ಮಾರ್ಗ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸನ್ಮಾರ್ಗವೆಂಬುದು ಇದೆ ಯಾವ ರೀತಿ ಕತ್ತಲೆ ಎಂಬುದನ್ನು ಹೊಡೆದೊಡಿಸಲು ಜ್ಯೋತಿ ಹ್ಯಾಗೆ ತನ್ನ ಕಾರ್ಯ ಮಾಡುತ್ತದೆ ಹಾಗೆ ಅಜ್ಞಾನವನ್ನು ಹೊಡೆದೊಡಿಸಲು ಇಲ್ಲಿ ಇರತಕ್ಕಂತಹ ಶಿಕ್ಷಕ ವರ್ಗದವರಿಂದಲೇ ಸಾದ್ಯವೆಂದರು. ಸೂರ್ಯನ ರೂಪದಂತೆ ಪ್ರಕಾಶಿಸುವ ಈ ಶಿಕ್ಷಕರಲ್ಲಿ ವಿಧಾನಸೌದದಂತೆ ಅವರಲ್ಲಿ ಕಲ್ಪನೆ ಇದೆ ಎಂದರು. ಇಂತಹ ಕಲ್ಪನೆ ಇಟ್ಟುಕೊಂಡು ಪ್ರತಿಯೊಂದು ಶಾಲೆಯಲ್ಲಿ ಸಂಸತ ಭವನ ಉದ್ಘಾಟನೆ ಮಾಡಬೇಕೆಂಬ ಸರ್ಕಾರ ಆದೇಶಿಸಿದಂತೆ ಇಂದು ಈ ಶಾಲೆಯಲ್ಲಿ ಉದ್ಘಾಟಿಸಿರುವದು ಸಂತಸ ತಂದಿದೆ ಎಂದು ಹೇಳಿದ ಡಾ.ಹರನಾಳ ಅವರು ಇಂದಿನ ದಿನಮಾನದಲ್ಲಿ ದಯಾಮಾಡಿ ಮೋಬೈಲ್ ಹಾವಳಿಯನ್ನು ವಿದ್ಯಾರ್ಥಿ ಯಾದವನು ತಪ್ಪಿಸಿಕೊಳ್ಳಿ ವಿದ್ಯಾರ್ಥಿನಿಯಾದವರೂ ಸಹ ದಾರವಾಹಿ ನೋಡುವದರಿಂದ ದಯಮಾಡಿ ಹಿಂದಕ್ಕೆ ಸರಿದು ವಿದ್ಯಾಭ್ಯಾಸದಲ್ಲಿ ತಮ್ಮ ಪ್ರಭುದತೆ ತೋರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತೆಳಿದರು.
ಇನ್ನೋರ್ವ ಕಾರ್ಯಕ್ರಮವನ್ನು ಉದ್ಘಾಟಿಸಿದ ವೀ.ವಿ.ಸಂಘದ ಕಾರ್ಯದರ್ಶಿ ಎಂ.ಎಸ್.ಸರಶೆಟ್ಟಿ ಅವರು ಮಾತನಾಡಿ ಶಾಲಾ ವಿದ್ಯಾರ್ಥಿಗಳಿಗೆ ಪರಿಕಲ್ಪನೆ ನೀಡುವಂತಹ ಇಂದಿನ ಕಾರ್ಯಕ್ರಮದ್ದಾಗಿದೆ ಪರಿಪೂರ್ಣತೆಯಿಂದ ಶ್ರದ್ದೆಯಿಂದ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಮುಂಬರುವ ದಿನಮಾನಗಳಲ್ಲಿ ತಮ್ಮ ಶಿಕ್ಷಣದಲ್ಲಿ ದಾಪುಗಾಲು ಹಾಕುವದರೊಂದಿಗೆ ಪ್ರಗತಿ ಹೆಚ್ಚಿಸಿಕೊಳ್ಳಿ ಎಂದರು.
ಇನ್ನೋರ್ವ ಎಸ್.ಕೆ.ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ವೇ.ಮುರುಘೇಶ ವಿರಕ್ತಮಠ ಅವರು ಮಾತನಾಡಿ ತಾಳಿಕೋಟೆಯ ಶ್ರೀ ಖಾಸ್ಗತ ಅಜ್ಜನ ಶಕ್ತಿಯನ್ನು ಅರೀತ ಸುತ್ತಮುತ್ತಲಿನ ಗ್ರಾಮದವರೂ ಹಾಗೂ ಎಲ್ಲ ಭಕ್ತಸಮೂಹವೂ ಕೂಡಾ ತಲೆಭಾಗಿಸಿ ತಮ್ಮ ಬೇಕು ಬೇಡಿಕೆಗಳನ್ನು ಇಡೇರಿಸಿಕೊಳ್ಳುತ್ತಾರೆ ಅಂತಹ ಕಾರ್ಯಕ್ಕೆ ವಿದ್ಯಾರ್ಥಿಗಳು ಮುಂದಾಗಿ ದಿನನಿತ್ಯ ಅಜ್ಜನನ್ನು ನಮಿಸಿ ಕಷ್ಟಪಟ್ಟು ಓದುವ ಹವ್ಯಾಸ ಬೆಳೆಸಿಕೊಂಡರೆ ಇಂತಹ ಮಹತ್ವದ ಪರಿಶ್ರಮಕ್ಕೆ ಶ್ರೀಗಳು ಒಲಿಯುತ್ತಾರೆಂದು ಹೇಳಿದ ಅವರು ಮಾತಾಪಿತರಿಗೆ ಕಲಿಸಿದ ಗುರುಗಳನ್ನು ಹಾಗೂ ಶಾಲೆಯ ಹಾಗೂ ಸಂಸ್ಥೆಯ ಹೆಸರು ತರುವಂತಹ ಕಾರ್ಯ ಮಾಡಿ ಎಂದು ವಿದ್ಯಾರ್ಥಿಗಳಿಗೆ ಹಿತ ನುಡಿ ಹೇಳಿದರು.
ಇದೇ ಸಮಯದಲ್ಲಿ ನಿವೃತ್ತ ಹೊಂದಿದ ಶಿಕ್ಷಕರಾದ ಎಂ.ಎ.ಬಾಗೇವಾಡಿ ಹಾಗೂ ನಿವೃತ್ತ ಹೊಂದಲಿರುವ ಶಿಕ್ಷಕ ಆರ್.ಬಿ.ದಾನಿ ಅವರಿಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಇಸೇ ಸಮಯದಲ್ಲಿ ಸನ್ಮಾನ ಸ್ವಿಕರಿಸಿದ ನಿವೃತ್ತಿ ಹೊಂದಿದ ಶಿಕ್ಷಕ ಎಂ.ಎ.ಬಾಗೇವಾಡಿ, ನಿವೃತ್ತ ಹೊಂದಲಿರುವ ಆರ್.ಬಿ.ದಾನಿ ಅವರು ಸಂಸ್ಥೆಯ ಕುರಿತು ಗುಣಗಾನ ಮಾಡಿದರು.
ವಿದ್ಯಾರ್ಥಿನಿ ಮೇಘಾ ಬಿರಾದಾರ, ಲಕ್ಷಿö್ಮÃ ಫೀರಾಪೂರ, ವಾಯುಪುತ್ರ ಯಡಹಳ್ಳಿ ಈ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ಎಸ್.ಕೆ.ಪ.ಪೂ.ಕಾಲೇಜ್ ಪ್ರೌಢ ಶಾಲಾ ವಿಭಾಗದ ಉಪ ಪ್ರಾಚಾರ್ಯ ಜೆ.ಎಸ್.ಕಟ್ಟಿಮನಿ ಮಾತನಾಡಿದರು.
ಈ ಸಮಯದಲ್ಲಿ ವೀ.ವಿ.ಸಂಘದ ಸಹ ಕಾರ್ಯದರ್ಶಿ ಕೆ.ಎಸ್.ಮುರಾಳ, ಎಸ್.ಕೆ.ಪ.ಪೂ.ಕಾಲೇಜ್ ಅಧ್ಯಕ್ಷ ಎಂ.ಆರ್.ಕತ್ತಿ, ಪ್ರೌಢಶಾಲಾ ವಿಭಾಗದ ಅಧ್ಯಕ್ಷ ಎಂ.ಜಿ.ಕತ್ತಿ, ಮಾರ್ಗದರ್ಶಕ ಶಿಕ್ಷಕರಾದ ಎಸ್.ವ್ಹಿ.ಬೆನಕಟ್ಟಿ, ಎ.ಎಸ್.ಹೂಗಾರ, ಎ.ಬಿ.ಇರಾಜ, ಆರ್.ಎಸ್.ಬೂದಿಹಾಳ, ಎಸ್.ಎಂ.ಪಾಟೀಲ, ಎಂ.ಸಿ.ಕೂಡಗಿ, ಶೃತಿ ಮೂಕೀಹಾಳ, ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಬಿ.ಟಿ.ಸಜ್ಜನ ಸ್ವಾಗತಿಸಿ ಪರಿಚಯಿಸಿದರು. ಆರ್.ಜಿ.ರಾಠೋಡ ನಿರೂಪಿಸಿದರು. ಶ್ರೀಮತಿ ಜೆ.ಸಿ.ಮಸೂತಿಮಠ ವಂದಿಸಿದರು.