ರಾಷ್ಟ್ರೀಯ ಲೋಕ ಅದಾಲತ್ ರಾಜಿ ಮೂಲಕ ಪ್ರಕರಣಗಳ ಇತ್ಯರ್ಥ
ಜೇವರ್ಗಿ: ಜು.25:ಈ ಬಾರಿ ಬೃಹತ್ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಜೇವರ್ಗಿ ನ್ಯಾಯಾಲಯದ ಆವರಣದಲ್ಲಿ ಬೃಹತ್ ಸಂಖ್ಯೆಯ ಪ್ರಕರಣಗಳು ಇತ್ಯರ್ಥಗೊಂಡಿದ್ದು, ಅನಗತ್ಯ ಸಮಯ ವಿಳಂಬ ಹಾಗೂ ಪಕ್ಷಕರರ ಅಲೆದಾಟ ಶ್ರಮ ಹಾಗೂ ಹಣದ ಅಪವ್ಯಯವು ಉಳಿತಾಯವಾಗಿದೆ.
ಇಲ್ಲಿನ ಕಿರಿಯ ಶ್ರೇಣಿಯ ನ್ಯಾಯಾಲಯದ ಪ್ರಕರಣಗಳು ಅಲ್ಲದೆ ಹಿರಿಯಶ್ರೇಣಿಯ ನ್ಯಾಯಾಲಯದ ಆವರಣದಲ್ಲಿ ಸುಮಾರು ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ಸುಖಾಂತ್ಯವಾಗಿ ಅಂತ್ಯಗೊAಡಿವೆ .
ಇಲ್ಲಿನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ಎದುರು ಬಂದAತಹ ಪ್ರಕರಣ ಒಂದರಲ್ಲಿ ಕೌಟುಂಬಿಕ ಸಾಮರಸ್ಯವನ್ನು ಉಳಿಸುವ ಜೊತೆಯಲ್ಲಿ ಪರಸ್ಪರ ಸೌಹಾರ್ದತೆಯಿಂದ ಸಮಸ್ಯೆ ಬಗೆಹರಿಸಿಕೊಂಡು ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಪ್ರಕರಣ ಒಂದರಲ್ಲಿ ಗಂಡ ಹೆಂಡತಿಯರು ಸುಮಾರು ಹತ್ತು ವರ್ಷಗಳಿಂದ ದೂರವಾಗಿದ್ದು ಮತ್ತೆ ಒಂದಾಗಿದ್ದಾರೆ.
ಇಲ್ಲಿನ ಹಿರಿಯ ಶ್ರೇಣಿಯ ನ್ಯಾಯಾಲಯದ ನ್ಯಾಯಾಧೀಶರಾದ ಸಂದೀಪ್ ಅಪ್ಪಾಸಾಬ ನಾಯಕ್ ಹಾಗೂ ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶರಾದ ಗೌರವಾನ್ವಿತ ಕಾಶಿನಾಥ್ ಉಪ್ಪಾರ್ ಇವರ ನೇತೃತ್ವದಲ್ಲಿ ಹಾಗೂ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ನೇತೃತ್ವದಲ್ಲಿ ಪ್ರಕರಣಗಳು ಇತ್ಯಾದಿ ಗೊಂಡಿದ್ದು ತಾಲೂಕು ವಕೀಲ ಸಂಘದ ಅಧ್ಯಕ್ಷರಾದ ಎಂ ಐ ಸೂಗೂರು ಹಾಗೂ ಕಾರ್ಯದರ್ಶಿಗಳಾದ ಬಿಎನ್ ಕೊಂಬಿನ್ ಸೇರಿದಂತೆ ಇತರ ವಕೀಲರು ಈ ಲೋಕ ಅದಾಲತ್ನಲ್ಲಿ ಭಾಗವಹಿಸಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರವನ್ನು ನೀಡಿದ್ದಾರೆ.