ಗುರುವಿಗೆ ದೊಡ್ಡ ಸ್ಥಾನವಿದೆ
ಮುನವಳ್ಳಿ,ಜು೨೫: ಕಟಕೋಳದ ಎಸ್.ಜಿ.ಕೆ ಪ್ರೌಢ ಶಾಲೆಯ ಸನ್ ೧೯೮೯-೧೯೯೦ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ ಎಸ್.ಜಿ.ಟಿ. ಪಿ.ಯು ಕಾಲೇಜಿನ ಸಭಾ ಭವನದಲ್ಲಿ ಜರುಗಿತು.
ಸಾನಿದ್ಯ ವಹಿಸಿ ಆಶೀರ್ವಚನ ನೀಡಿದ ವೀರಕ್ತಮಠದ ಶ್ರೀ ಸಚ್ಛಿದಾನಂದ ಶ್ರೀಗಳು ಭಾರತೀಯ ಪರಂಪರೆಯಲ್ಲಿ ಶಿಷ್ಯ ಮತ್ತು ಗುರುವಿಗೆ ಮಹತ್ತರ ಸಂಬಂಧವಿದೆ ವ್ಯಕ್ತಿಯು ಭಗವಂತನ ಕಡೆ ಹೋಗಲು ಆಧ್ಯಾತ್ಮಿಕ ಶಕ್ತಿ, ಧ್ಯಾನ, ದೀಕ್ಷೆ ಹಾಗೂ ಮಂತ್ರವನ್ನು ಹೇಳಿಕೊಟ್ಟು ಮಾರ್ಗದರ್ಶನ ಮಾಡುವುದು ಗುರುವಿನ ಕೆಲಸ. ಹಿಂದಿನಿಂದಲೂ ಗುರುವಿಗೆ ಅತ್ಯುನ್ನತ ಸ್ಥಾನ ನೀಡಲಾಗಿದ್ದು ಕಲಿಯುವವನಿಗೆ ಸತ್ಯದರ್ಶನ ಮಾಡಿಸುವ ಸನ್ಮಾರ್ಗವನ್ನು ತೋರಿಸುವ ಪೂಜ್ಯ ಸ್ಥಾನದಲ್ಲಿರುವ ವೈಕ್ತಿಯೇ ಗುರು ಅವರ ಮಾರ್ಗದರ್ಶನದಲ್ಲಿ ನಡೆದು ನಮ್ಮ ಬಾಳನ್ನು ಹಸನ ಮಾಡಿಕೊಳ್ಳಬೇಕು. ಗುರುಕೃಪೆಗೆ ಪಾತ್ರವಾದರವರಿಗೆ ಜಗತ್ತಿನ ಯಾವ ಕೃಪೆಗು ಸಮಾನವಲ್ಲ ಜಗತ್ತಿನಲ್ಲಿ ಯಾವುದೆ ವಿಷಯವನ್ನು ಕಲಿಯಬೇಕಂದರೆ ಗುರುವಿನ ಸಾನಿಧ್ಯ ಬೇಕು ಎಂದರು.
ಎನ್.ಡಿ.ಪಾಟೀಲ ಆಗಮಿಸಿ ಮಕ್ಕಳಿಗೆ ಮೊದಲು ತಂದೆ ತಾಯಿ ಗುರು ನಂತರ ಅಕ್ಷರ ಕೊಡುವ ಶಿಕ್ಷಕ ಗುರು ಎಂದು ಉಪನ್ಯಾಸ ನೀಡಿದರು. ಪ್ರಾಸ್ಥಾವಿಕ ವಾಗಿ ನವಿನ ನಲವಡೆ ಮಾತನಾಡಿದರು.
ಅಧ್ಯಕ್ಷತೆ ಮುಖ್ಯ ಶಿಕ್ಷಕ ಎಸ್.ಟಿ.ಹುಣಶಿಕಟ್ಟಿ, ಮುಖ್ಯ ಅತಿಥಿಗಳಾಗಿ ಸಂಘದ ಅದ್ಯಕ್ಷ ಎ.ಸಿ.ಸುರಗ, ಉಪಾಧ್ಯಕ್ಷ ಎನ್.ಬಿ.ತೋಡಕರ, ಕಾರ್ಯದರ್ಶಿ ಸಿ.ಬಿ.ಕಳಸಪ್ಪನವರ, ಎಮ್.ಎಮ್.ಆತಾರ, ಟಿ.ಎನ್.ಮುರಂಕರ, ಶಿಕ್ಷಕರುಗಳಾದ ಬಿ.ಜಿ.ಕಡಬಿ, ಆರ್.ಎಸ್.ದೊಡವಾಡ, ಎಸ್.ಎ.ಮುಚ್ಚಂಡಿ, ಎ.ಎಚ್.ಬೊಂಗಾಳೆ, ಎಚ್.ಎಸ್.ಅಂಡಿ, ಶ್ರೀಮತಿ ಸಿ.ಬಿ.ಡಂಬಳ, ಶ್ರೀಮತಿ ಬ್ಯಾಳಿ, ಶ್ರೀಮತಿ ಅಡ್ಡುನಗಿ, ಸಿ.ಬಿ.ಅಸೂಟಿ, ಯು.ಡಿ.ದಂಡಿನ, ಆರ.ಡಿ.ಗೊರವರ, ಬಿ,ಜಿ.ನಾಯಕ, ಟಿ.ಎಸ್.ಪಾಟಿಲ, ಬಿ.ಎಲ್.ಕಳಗೇರಿ, ಬಿ.ಆರ್.ದ್ಯಾಮನಗೌಡರ, ಎಸ್.ಎಮ್.ಸೂರಟಿ, ಎಂ.ಎಸ್.ಶೀಲವಂತಮಠ ಬೋಧಕೇತರ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿರುವರು.
ಇದೆ ಸಂದರ್ಬದಲ್ಲಿ ಅಗಲಿದ ಶಿಕ್ಷಕರಿಗೆ ಶೃದ್ದಾಂಜಲಿ ಸಲ್ಲಿಸಿದರು
ಪ್ರಾಥಮಿಕ ಹಾಗೂ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಿಗೆ ಗೌರವ ಸನ್ಮಾನ ಜರುಗಿತು. ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಗಳನ್ನು ವೈಕ್ತಪಡಿಸಿದರು.
ಸ್ವಾಗತ ಮಹಾದೇವ ಪಟ್ಟಣಶೆಟ್ಟಿ, ಕಾರ್ಯಕ್ರಮ ನಿರೂಪನೆ ಅನ್ನಪೂರ್ಣಾ ದೆವಾಂಗಮಠ, ವಂದನಾರ್ಪಣೆ ಮಹಾದೇವ ರಂಕನಕೊಪ್ಪ ನೆರವೇರಿಸಿದರು.