ಬಸವತೀರ್ಥ ವಿದ್ಯಾಪೀಠ ಪದವಿ ಮಹಾವಿದ್ಯಾಲಯಕ್ಕೆ ಚಿನ್ನದ ಪದಕ
ಹುಮನಾಬಾದ:ಜು.25: ತಾಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಬಸವತೀರ್ಥ ವಿದ್ಯಾಪೀಠ ಪದವಿ ಮಹಾವಿದ್ಯಾಲಯದ 2023-24ನೇ ಶೈಕ್ಷಣಿಕ ಸಾಲಿನ ಬಿ.ಎ. ಪದವಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಅರ್ಥಶಾಸ್ತç ವಿಷಯದಲ್ಲಿ ಪ್ರಥಮ ರ‍್ಯಾಂಕ್ ಹಾಗೂ ಚಿನ್ನದ ಪದಕ್ಕೆ ಭಾಜನಳಾದ ಕುಮಾರಿ ಮಾಣಿಕಬಾಯಿ ತಂದೆ ದತ್ತಾತ್ರೆ ಇವಳಿಗೆ ಇಂದು ನಮ್ಮ ಕಾಲೇಜಿನಲ್ಲಿ ಅಭಿನಂದನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಘನಾಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಮಾನ್ಯ ಶ್ರೀ ಕೇಶವರಾವ ತಳಘಟಕರ್, ಮುಖ್ಯಅತಿಥಿಗಳಾಗಿ ಬಸವತೀರ್ಥ ವಿದ್ಯಾಪೀಠ ಸ್ಥಳಿಯ ಸಮಿತಿಯ ಅಧ್ಯಕ್ಷರಾದ ಶ್ರೀ ಸೋಮಯ್ಯಾ ಹಿರೇಮಠ, ಅತಿಥಿಗಳಾಗಿ ಬಸವತೀರ್ಥ ವಿದ್ಯಾಪೀಠ ಹಳ್ಳಿಖೇಡ(ಬಿ)ನ ಆಡಳಿತಾಧಿಕಾರಿಗಳಾದ ಶ್ರೀ ಗುಂಡಯ್ಯಾ ತೀರ್ಥಾ, ಪ್ರಾಂಶುಪಾಲರಾದ ಶ್ರೀ ಮಸ್ತಾನ ಪಟೇಲ್, ಪೌಢಶಾಲೆಯ ಮುಖ್ಯಗುರುಗಳಾದ ಶ್ರೀ ಚಂದ್ರಕಾAತ ಬಿರಾದಾರ, ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶ್ರೀ ಬಸವರಾಜ ದುಬಲಗುಂಡಿಕರ್, ಪ್ರಾಥಮಿಕ ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀ ಪ್ರಭು ದುರ್ಗದ ಹಾಗೂ ಶಾಲಾ/ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.