ಸ್ನೇಹಿತರ ಓಲೈಕೆ ಬಜೆಟ್
ಲಕ್ಷೆ÷್ಮÃಶ್ವರ,ಜು೨೫: ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ಟಿನಲ್ಲಿ ೨೦೪೭ ವಿಕಸಿತ ಭಾರತದ ಅಡಿಪಾಯ ಕಾಣದಂತಾಗಿದ್ದು ಕೇವಲ ಆಂಧ್ರ ಮತ್ತು ಬಿಹಾರದ ಸ್ನೇಹಿತರನ್ನು ಓಲೈಸುವ ಬಜೆಟ್ ಆಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಟಿ. ಈಶ್ವರ್ ಟೀಕಿಸಿದ್ದಾರೆ.
ಅವರು ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕವನ್ನೇ ಪ್ರತಿನಿಧಿಸುವ ಕೇಂದ್ರದಲ್ಲಿ ಹಣಕಾಸು ಸಚಿವರಾಗಿರುವ ಸೀತಾರಾಮನ್ ಅವರು ಕರ್ನಾಟಕಕ್ಕಾಗಿ ಯಾವುದೇ ವಿಶೇಷ ಪ್ಯಾಕೇಜ್ ಆಗಲಿ ಕೊಡುಗೆಗಳನ್ನಾಗಿ ನೀಡಲು ವಿಫಲರಾಗಿದ್ದಾರೆ, ಅದೇ ರೀತಿ ಕೇಂದ್ರದಲ್ಲಿ ಕೈಗಾರಿಕಾ ಸಚಿವರಾಗಿರುವ ಕುಮಾರಸ್ವಾಮಿ ಅವರಾಗಲಿ ರೈಲ್ವೆ ಸಚಿವರಾಗಿರುವ ವಿ. ಸೋಮಣ್ಣ ಅವರಾಗಲಿ ಕೇಂದ್ರದಲ್ಲಿ ತಮ್ಮ ಯಾವುದೇ ಪ್ರಭಾವವನ್ನು ತೋರಿಸಿಲ್ಲ, ರಾಜ್ಯದವರೆಯಾಗಿರುವ ರೈಲ್ವೆ ಸಚಿವ ವಿ. ಸೋಮಣ್ಣ ಅವರು ರಾಜ್ಯದ ಗದಗ ಯಲುವಿಗೆ ಸೇರಿದಂತೆ ಅನೇಕ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು ಯಾವುದೇ ಕೊಡುಗೆ ಕರ್ನಾಟಕಕ್ಕೆ ಬಜೆಟ್ಟಿನಲ್ಲಿ ಸೇರ್ಪಡೆಯಾಗಿಲ್ಲ, ಅದೇ ರೀತಿ ಎಂಎಸ್‌ಎಂಇ ಸಚಿವೆ ಶೋಭಾ ಕರಂದ್ಲಾಜೆ ಅವರಾಗಲಿ, ಯಾರೋ ಒಬ್ಬರು ಕೇಂದ್ರದ ಮೇಲೆ ತಮ್ಮ ಇಲಾಖೆಗಳ ಯೋಜನೆಗಳನ್ನು ಕರ್ನಾಟಕಕ್ಕೆ ಸೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟಿ. ಈಶ್ವರ್ ಹೇಳಿದ್ದಾರೆ.