ಸಂಭ್ರಮದ ವಸ್ತು ಪ್ರದರ್ಶನ
ಹುಬ್ಬಳ್ಳಿ,ಜು೨೫: ನಗರದ ಇನ್ನರ್ ವೀಲ್ ಕ್ಲಬ್ ಆಫ್ ಹುಬ್ಬಳ್ಳಿ ಪಶ್ವಿಮ ವತಿಯಿಂದ ಜು.೨೭ ಹಾಗೂ ೨೮ ರಂದು ಇಲ್ಲಿನ ಲಿಂಗರಾಜ ನಗರದ ಸಮೂದಾಯ ಭವನದಲ್ಲಿ ಸಂಭ್ರಮ ವಸ್ತು ಪ್ರದರ್ಶನ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷೆ ಶೃತಿ ಬೂಸನೂರಮಠ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. ೨೭ ಹಾಗೂ ೨೮ ರಂದು ನಡೆಯುವ ವಸ್ತು ಪ್ರದರ್ಶನದಿಂದ ಬಂದ ಹಣವನ್ನು ಕ್ಯಾನ್ಸರ್ ರೋಗಿಗಳಿಗೆ ಹಾಗೂ ಬಡಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೂಪಾ ಎಸ್, ರಮ್ಯಾ ಶೆಟ್ಟಿ, ಶುಭಾ ಅಡಗಂಟಿ, ಸ್ಮೀತಾ ಮಹೇಶ, ವಿಜಯಲಕ್ಷಿ÷್ಮ ಗದ್ವಾಲ್ ಇದ್ದರು.