ಸ್ವಾತಂತ್ರ‍್ಯ ಹೋರಾಟಗಾರರು ಆದರ್ಶವಾಗಲಿ
ಬೀದರ್:ಜು.25: ಸ್ವಾತಂತ್ರ‍್ಯ ಹೋರಾಟಗಾರರು ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು ಎಂದು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ್ ಜೋಳದಾಪಕೆ ಹೇಳಿದರು.
ನಗರದ ವಿದ್ಯಾನಗರದ ನವಜೀವನ ವಿಶೇಷ ಚೇತನ ಮಕ್ಕಳ ವಸತಿ ಶಾಲೆಯಲ್ಲಿ ಮಂಗಳವಾರ ನಡೆದ ಚಂದ್ರಶೇಖರ ಆಜಾದ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಂದ್ರಶೇಖರ ಆಜಾದ್ ಅವರು ದೇಶ ಭಕ್ತರಾಗಿದ್ದರು. ತಾಯ್ನಾಡಿನ ಸ್ವಾತಂತ್ರ‍್ಯಕ್ಕಾಗಿ ಕೆಚ್ಚೆದೆಯಿಂದ ಹೋರಾಟ ನಡೆಸಿದ್ದರು ಎಂದು ತಿಳಿಸಿದರು.
ಚಂದ್ರಶೇಖರ ಆಜಾದ್ ಯುವಕ ಸಂಘದ ಅಧ್ಯಕ್ಷ ಚಂದ್ರಶೇಖರ್ ಭಂಡೆ ಅವರು, ಚಂದ್ರಶೇಖರ ಆಜಾದ್ ಅವರ ಜೀವನ ಮತ್ತು ಸಾಧನೆ ಕುರಿತು ಮಾತನಾಡಿದರು
ಮುಖಂಡರಾದ ಎಂ.ಡಿ. ನವಾಜ್ ಖಾನ್, ವಿವೇಕಾನಂದ ಲಕ್ಕಶೆಟ್ಟಿ, ಸುರೇಶ್ ಹೂಗೇರಿ, ರೋಹನ್, ಹರ್ಷವರ್ಧನ್, ಅಜಯ್ ದೀನೆ, ಆಶಿಶ್ ಭಂಡೆ, ಶಾಲೆಯ ಮೇಲ್ವಿಚಾರಕ ನವೀನ್, ವಿಜಯಲಕ್ಷ್ಮಿ ಇದ್ದರು.