ಗೋಪಾಳ ಕಾಲಾದೊಂದಿಗೆ ಆಷಾಢ ಸಮಾರೋಪ
ಆಳಂದ:ಜು.25: ಪಟ್ಟಣದ ಏಕನಾಥ ಮಹಾರಾಜ ಹಾಗೂ ಶ್ರೀ ವಿಠ್ಠಲ, ರುಕ್ಮೀಣಿ ಮಂದಿರದಲ್ಲಿ ಗುರುಪೂರ್ಣಿಮೆಯಂದು ನೂರಾರು ಭಕ್ತರು ಸೇರಿ ಪ್ರತಿವರ್ಷದಂತೆ ಗೋಪಾಳ ಕಾಲೋತ್ಸದೊಂದಿಗೆ ಆಷಾಡ ಮಾಸಾಚರಣೆ ಸಂಪನ್ನಗೊಳಿಸಿದರು.
ದೇವಸ್ಥಾನದಿಂದ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಗೋಪಾಳಕಾಲ ಹರಿಭಜನೆ, ವಾದ್ಯ ವೈಭವದೊಂದಿಗೆ ಮೊಸರು ಗಡಿಗೆ ಮೆರವಣಿಗೆ ಹೊರಟು ಬಳಿಕ ದೇವಸ್ಥಾನಕ್ಕೆ ತಲುಪಿದ ಬಳಿಕ ಆರತಿ ಮಹಾಮಂಗಳ ಭಜನೆಯೊಂದಿಗೆ ಡಾ. ಅಮರನಾಥ ಚನ್ನಬಸವ ಪಾಟೀಲರಿಂದ ಭಕ್ತರ ಜಯಘೋಷದೊಂದಿಗೆ ದಯಂಡಿ ಒಡೆಯಲಾಯಿತು.
ಉತ್ಸವದಲ್ಲಿ ತಾಲೂಕಿನ ತೆಲಾಕುಣಿ ಹನುಮಾನ ಭಜನೆ, ತೀರ್ಥ, ಮಟಕಿ ಗ್ರಾಮದ ಹರಿಭಜನೆಗಳ ಭಾಗವಹಿಸಿದ್ದವು. ಮಟಕಿ ಗ್ರಾಮದ ಹರಿಭಜನೆ ತಂಡದಿAದ ಭಜನೆ ಮತ್ತು ಬಾರೂಢ ಪ್ರಸ್ತುತ ಪಡಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ, ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಚನ್ನಬಸವ ಕೆ. ಪಾಟೀಲ, ನ್ಯಾಯವಾದಿ, ಟ್ರಸ್ಟ್ ಉಪಾಧ್ಯಕ್ಷ ಬಾಬಾಸಾಬ ವಿ. ಪಾಟೀಲ, ಮಹೇಶ ಸೂರೆ, ರಾಜೇಂದ್ರ ಮಿಸ್ಕಿನ್, ಲಕ್ಷö್ಮಣ ಇಂಗಳೆ, ಗೋವಿಂದ ಮಿಸ್ಕಿನ್, ಮುರುಲೀಧರ ಘನಾತೆ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು. ಆಗಮಿಸಿದ್ದ ಭಕ್ತಾದಿಗಳು ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.