ಅಪಘಾತ ತಡೆಯಲು ವೇಗಮಿತಿಯ ಬೋರ್ಡ ,ಸಂಚಾರಿ ಚಿಹ್ನೆಗಳ ಅಳವಡಿಕೆಗೆ ಜಿಲ್ಲಾಧಿಕಾರಿಗಳ ಸೂಚನೆ
ಕಲಬುರಗಿ: ಜು.೨೫:ಅಪಫಾತಗಳನ್ನು ತಡೆಯಲು ವೇಗಮಿತಿಯ ಬೋರ್ಡ ಅಳವಡಿಕೆ ಸಂಚಾರಿ ಚಿಹ್ನೆಗಳು/ ಹಂಪ್ಸ್ಗಳನ್ನು ಅಳವಡಿಕೆ ಸೇರಿದಂತೆ ಇನ್ನಿತರ ಸೂಕ್ತಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದರು.
ಬುಧುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಬುರಗಿ ವ್ಯಾಪ್ತಿಯಲ್ಲಿ ಅಪಘಾತ ವಲಯಗಳನ್ನು ತಡೆಗಟ್ಟಲು ಪಿಡಬ್ಲೂಡಿ, ಆರ್.ಟಿ.ಓ. ಪೋಲಿಸ್ .ಎನ್.ಹೆಚ್‌ಎಐ ಇವರು ಜಂಟಿಯಾಗಿ ತಪಾಸಣೆ ಮಾಡಿ ಇದರಲ್ಲಿ ಅಪಘಾತ ವಲಯಗಳನ್ನು ಅವುಗಳ ತೀವ್ರತೆಗೆ ಅನುಗುಣವಾಗಿ ಎ.ಬಿ,ಸಿ, ಮತ್ತು ಡಿ ಎಂದು ವರ್ಗಿಕರಿಸಿ ಅಪಘಾತ ವಲಯಗಳನ್ನು ಕಡಿಮೆ ಮಾಡಲು ಬೇಕಾದ ಕ್ರಮಗಳ ಬಗ್ಗೆ ಒಂದು ತಿಂಗಳ ಒಳಗೆ ಅನುಪಾಲನೆ ವರದಿ ನೀಡಲು ಎಲ್ಲಾ ಎಜೆನ್ಸಿಗಳಿಂದ ಮಾಹಿತಿ ಪಡೆದುಕೊಂಡು ಪಿಪಿಟಿ ಸಿದ್ದಪಡಿಸಲು ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಧಿಕಾರಿಗಳು ತಮಗೆ ನೀಡಿರುವ ಕೆಲಸಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಯಾವುದೇ ತೊಂದರೆ ಕಂಡುಬAದರೆ ಅಧಿಕಾರಿಗಳು ಚರ್ಚಿಸಿ ಕ್ರಮಕೈಗೊಳ್ಳಬೇಕು. ಜಿಲ್ಲೆಯಾದಂತ ಎಲ್ಲಿ ಬ್ಲಾಕ್ ಸ್ಪಟ್‌ಗಳು ಇನ್ನೂ ಬಾಕಿ ಇದ್ದು, ಅವುಗಳ ವರದಿ ತರಿಸಿಕೊಂಡು ಆಗಸ್ಟ್ ೧೫ ರೊಳಗೆ ಮುಗಿಸಲು ಸೂಚನೆ ನೀಡಿದರು.
ರಾಷ್ಟಿçÃಯ ಹೆದ್ದಾರಿಗಳಲ್ಲಿ ಅವಶ್ಯವಿರುವ ಸ್ಥಳಗಳಲ್ಲಿ ಸೂಕ್ತ ಸಂಚಾರಿ ಚಿಹ್ನೆಗಳನ್ನು ಅಳವಡಿಸಿ ಜಿಪಿಎಸ್. ಆಧಾರಿತ ಫೋಟೋದೊಂದಿಗೆ ಅನುಸರಣಾ ವರದಿ ಸಲ್ಲಿಸುವಂತೆ ಅಲ್ಪಾವಧಿ ಮತ್ತು ದೀರ್ಫಾವಧಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ೧೫ ದಿನಗಳ ವರದಿ ನೀಡುವಂತೆ ಎನ್.ಹೆಚ್‌ಐ ಇವರಿಗೆ ತಿಳಿಸಿದರು.
ಖರ್ಗೆ ಸರ್ಕಲ್‌ನಿಂದ ಹುಮನಾಬಾದ ರಿಂಗ್‌ರೋಡ ತನಕ ಸಾರ್ವಜನಿಕರಿಗೆ ಸರ್ವಿಸ್ ರಸ್ತೆ ಇಲ್ಲದಿರುವ ಬಗ್ಗೆ ಚರ್ಚೆಯಾಗಿದೆ ಎನ್‌ಹೆಚ್‌ಎಐ ಇವರು ೧೨ ಕಿಮೀ ಸರ್ವಿಸ್ ರಸ್ತೆ ಇನ್ನೂ ಬಾಕಿ ಇದ್ದು ಇದಕ್ಕೆ ೩ ರಿಂದ ೩.೫ ಕೋಟಿ ವೆಚ್ಚ್ ತಗಲುತ್ತದೆ ಈಗಾಗಲೇ ಅನುದಾನ ಬಂದಿದ್ದು ಮಳೆ ಇರುವುದರಿಂದ ಕೆಲಸ ಪ್ರಾರಂಭ ಮಾಡಿರುವುದಿಲ್ಲ ಎಂದು ಸಭೆಯ ಅಧಿಕಾರಿಗಳು ಗಮನಕ್ಕೆ ತಂದರು.
ಜಿಲ್ಲಾಧಿಕಾರಿ ಮಾತನಾಡಿ, ಡ್ರೆöÊನೇಜ್ ಪೈಪ್‌ಲೈನ್ ಮತ್ತು ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಸೂಚಿಸಿದರು.
ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಜನತಾ ಸ್ಪಂಧನ ಕಾರ್ಯಕ್ರಮಕ್ಕೆ ಬರುವ ಮುಂಚೆ ತಮ್ಮ ತಮ್ಮ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಲು ಸಂಬAಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿಮಾನ ನಿಲ್ಲಾಣದ ಪಕ್ಕದಲ್ಲಿ ರಸ್ತೆಗಳು ಸರಿಯಾಗಿ ಇರುವುದಿಲ್ಲ ಅಲ್ಲಿನ ತಂಗು ಗುಂಡಿಗಳನ್ನು ದುರಸ್ತಿಮಾಡಿಸಬೇಕು ರಸ್ತೆಯ ಸುರಕ್ಷತೆ ಪಾಲನೆ ಮಾಡಬೇಕು ಯಾವುದೇ ಕೆಲಸಗಳನ್ನು ಆಗಸ್ಟ್ ೧೫ ದಿನದೊಳಗೆ ಮುಗಿಸಲು ಸೂಚಿಸಿದರು.
ಮರಣಾಂತಿಕ ಅಪಘಾತಗಳು ಸಂಭವಿಸುತ್ತಿರುವ ಕಾರಣ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸುವಂತೆ ಡಿಸಿಪಿ ಪೋಲಿಸ ಇಲಾಖೆ ಕಲಬುರಗಿ ಇವರು ಸೂಚನೆ ನೀಡಿದರು.
ಎನ್‌ಹೆಚ್‌ಎಐ ಮತ್ತು ಕೆಅರ್‌ಡಿಸಿಎಲ್ ಇವರು ಹೆಚ್ಚಾರಿಗಳನ್ನು ಸೂಕ್ತವಾಗಿ ನಿರ್ವಹಿಸಿ ಮುಂದಿನ ೩ ವಾರಗಳ ಒಳಗೆ ವರದಿ ನೀಡಲು ಸೂಚಿಸಿದರು.ನಗರದಲ್ಲಿ ಸಿಟಿಬಸ್‌ಗಳು ಹಾಗೂ ಕಲಬುರಗಿ ಜಿಲ್ಲಾ ವ್ಯಾಪ್ತಿಯಲ್ಲಿ ಶಾಲಾ ಕಾಲೇಜು ಪ್ರಾರಂಭ ಬಿಡುವ ವೇಳೆಯಲ್ಲಿ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು.
ರಸ್ತೆಗಳ ಆಗಲೀಕರಣ, ರಸ್ತೆಯ ಬದಿಯಲ್ಲಿ ಇರುವ ವಿದ್ಯುತ್ ಕಂಬಗಳನ್ನು ತೆಗೆಯುವುದು ರಸ್ತೆಗಳಲ್ಲಿ ಲೇನ್ ಶಿಸ್ತನ್ನ ಜಾರಿಗೊಳಿಸುವುದು ಎಲ್ಲೆಕ್ಟಾçನಿಕ್ ಮಾನಿಟರಿಂಗ್ ಸ್ಪೀಡ್ ಲಿಮಿಟ್ ಸೈನ್ ಬೋರ್ಡ್ಗಳು ಅಪಘಾತವಲಯಗಳÀ ಸೈನ್ ಬೋರ್ಡ್ಗಳ ಅಳವಡಿಕೆ ಕುರಿತಂತೆ ಇನ್ನಿತರ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಚರ್ಚಿಸಿದರು.
ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಯ ಆಯುಕ್ತ ಭುವನೇಶ ದೇವಿದಾಸ ಪಾಟೀಲ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್.ಪಿ. ಶ್ರೀನಿಧಿ. ಡಿ.ಎಸ್.ಪಿ. ಬಿಂದುರಾಣಿ ಸೇರಿದಂತೆ ಲೋಕಪಯೋಗಿ ಇಲಾಖೆ ಇ.ಇ. ಸುಭಾಷ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.