ಸರ್ಕಾರಿ ಅಧಿಕಾರಿಗಳು ಜನಸ್ನೇಹಿಗಳಾಗಿ ಕೆಲಸ ಮಾಡುವಂತೆ ಡಿ.ಸಿ.ತಾಕಿತು
ಕಾಳಗಿ.ಜು.25 : ಸದಾ ನಿಮ್ಮ ಸೇವೆಗಾಗಿ ದುಡಿಯುತ್ತಿರುವ ಸರಕಾರಿ ಅಧಿಕಾರಿಗಳಿಗೆ ಸಾರ್ವಜನಿಕರು, ಸಂಪೂರ್ಣ ಸಹಕಾರ ನೀಡಿದ್ದೇಯಾದರೆ, ನಿಮ್ಮ ನಿರೀಕ್ಷೆ ಮೀರಿ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಫೌಜಿಯಾ ಬಿ.ತರನ್ನುಮ್ ಸಾರ್ವಜನಿಕರನ್ನುದ್ದೇಶಿಸಿ, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಪಟ್ಟಣದ ಶ್ರೀನೀಲಕಂಠ ಕಾಳೇಶ್ವರ ಮಂಗಲ ಮಂಟಪದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜನಸ್ಪಂದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಸಭೇಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.
ಕಾಳಗಿ ತಾಲೂಕಿನ ಹಲವಾರು ಹಳ್ಳಿಗಳ ನೂರಾರು ಜನರ ಸಮಸ್ಯೆಗಳನ್ನು ಸಮಚಿತ್ತದಿಂದ ಆಲಿಸಿದ ಅವರು, ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿಗಳೂ ಕೂಡ ತಮ್ಮ ಮನವಿಯನ್ನು ಮುಂದಿಟ್ಟರು.
ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ಪಕ್ಷ-ಪಾತ ಮಾಡದೇ, ಸರ್ಕಾರಿ ಅಧಿಕಾರಿಗಳಿಗೆ ಒತ್ತಡ ಹೆರದೆ ಸ್ಪಂದನೆ ಮಾಡಿದ್ದೇಯಾದರೇ ಮುಂದಿನ ಮೂರೇ ಮೂರು ತಿಂಗಳಲ್ಲಿ ನಿವು ನೀಡಿದ ಮನವಿಗಳಿಗೆ ತಕ್ಕ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ ಎಂದರು.
ಅಭಿವೃದ್ಧಿಗಾಗಿ ತಾವು ಸಂಪೂರ್ಣ ಸಹಕಾರ ನೀಡಬಹುದೇ ಎಂದು ಸಾರ್ವಜನಿಕರು, ಕೈ ಎತ್ತಿ ಬೆಂಬಲಿಸುವAತೆ ಕೇಳಿದರು.
ಸರಕಾರಿ ಅಧಿಕಾರಿಗಳು ಸಾರ್ವಜನಿಕರನ್ನು ಗೌರವ ಭಾವನೆಯಿಂದ ಕಂಡು ಕೆಲಸ ಮಾಡಿಕೊಡುವಂತೆ ತಾಕಿತು ಮಾಡಿದರು.
ಎಸ್.ಪಿ.ಅಡ್ಡೂರು ಶ್ರೀನೀವಾಸುಲೂ ಮಾತನಾಡಿ,
ಸಮಾಜ ಘಾತುಕ ಕೃತ್ಯ, ಅಕ್ರಮ ಗಣಿಗಾರಿಕೆ, ಗಾಂಜಾ ಮಾರಾಟ, ಮಟ್ಕಾ, ಜೂಜಾಟ, ಮಹಿಳೆಯರ ಮೇಲಿನ ಅತ್ಯಾಚಾರ, ಮಧ್ಯ ಸಾಗಾಟ, ಕಳ್ಳತನ, ಕಿರುಕುಳ, ಆಸ್ತಿ -ಪಾಸ್ತಿಗಳ ಹಾನಿ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೆ ತಕ್ಷಣವೇ ನಮ್ಮ ಇಲಾಖೆಗೆ
ಸಂದೇಶ ನೀಡಿ ದುಷ್ಟರನ್ನು ಸದೆಬಡೆಯುತ್ತೇವೆ ಎಂದು ಜನ ಸಾಮಾನ್ಯರಿಗೆ ಪೋಲಿಸ್ ಇಲಾಖೆಯ ಸೇವೆಗಳ ಬಗ್ಗೆ ಜನತೆಗೆ ತಿಳಿಹೇಳಿದರು.
ಕಾಲ-ಕಾಲಕ್ಕೆ ನಮ್ಮ ಪೋಲಿಸರು, ಸಮಯಕ್ಕೆ ಸರಿಯಾಗಿ ಗಸ್ತನ್ನು ಪಾಲಿಸಬೇಕು ಜನರ ಕುಂದು-ಕೊರತೆಗಳನ್ನು ನೀಗಿಸುವ ಜನಸ್ನೇಹಿ ಪೋಲಿಸ್ ಗಿರಿ ತಮ್ಮದಾಗಬೇಕೆಂದು ಇಲಾಖಾ ವರ್ಗದವರಿಗೆ ತಿಳಿಸಿದರು.
ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಸವಳು ಸಾಗಣೆ, ರೈತಾಪಿ ವರ್ಗ, ನೀರಾವರಿ, ಕುಡಿಯುವ ನೀರು, ನೆನೆಗುದಿಗೆ ಬಿದ್ದಿರುವ ರಸ್ತೆಗಳ ನಿರ್ಮಾಣ, ರೈತರ ಹೊಲಗಳ ಟಿಪ್ಪಣಿಗಳು, ರೈತರ ಹೊಲಗಳಿಗೆ ಹೊಗುವ ಹಣಾದಿ ರಸ್ತೆಗಳು, ಕಾಳಗಿ ತಹಸೀಲ್ದಾರ ಕಾರ್ಯಾಲಯದಲ್ಲಿ ನೆನೆಗುದಿಗೆ ಬಿದ್ದಿರುವ ರೈತರ ಸಮಸ್ಯೆಗಳು, ಆರೋಗ್ಯ, ಶಿಕ್ಷಣ, ಬ್ಯಾಂಕ್ ವಹಿವಾಟುಗಳು, ಒಳಚರಂಡಿ, ಶೌಚಾಲಯ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಮುಂದಿಟ್ಟುಕೊAಡು ಕನ್ನಡಪರ ಸಂಘಟನೆಗಳು, ಹಿಂದೂ ಸಂಘಟನೆಗಳು, ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು, ಮೈನಾರಿಟಿ ಸಂಘಟನೆಗಳು ಹಾಗೂ ತಾಲೂಕಿನ ನೂರಾರು ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಸಮಸ್ಯೆಗಳಿಗೆ ಸಂಬAಧಪಟ್ಟ ಅಧಿಕಾರಿಗಳನ್ನು ಸ್ಥಳದಲ್ಲಿಯೇ ಕರೆಯಿಸಿ ಸಮಸ್ಯೆಗಳಿಗೆ ತಕ್ಕ ಪರಿಹಾರಗಳನ್ನು ಕಂಡುಕೊಳ್ಳಲು ಜಿಲ್ಲಾಧಿಕಾರಿಗಳು ಆದೇಶಿಸಿದರು.
ಕೆಲವರಿಗೆ ಸ್ಥಳದಲ್ಲಿಯೇ ಪಿಂಚಣಿ, ರೇಶನ್ ಕಾರ್ಡ್, ಆಯುಸ್ಮಾನ ಭಾರತ, ಭಾಗ್ಯಲಕ್ಷ್ಮೀ ಬಾಂಡ್, ಪೌರ ಕಾರ್ಮಿಕರಿಗೆ ರೈನಕೋಟ್, ರೈತರಿಗೆ ಮೇವಿನ ಬೀಜ, ಸಸಿಗಳನ್ನು ನೀಡಿದರು.
ತೊಗರಿ, ಹೆಸರು, ಉದ್ದು ವಿವಿಧ ಬೆಳೆಗಳ ಮೇಲೆ ವಿಮೆ ಮಾಡಿಸಿಕೊಳ್ಳುವಂತೆ ತಿಳಿಸಿದರು.
ಬೆಳೆ ಸಂರಕ್ಷಣೆಗಾಗಿ ಹೊಲಗಳಲ್ಲಿ ಆದಷ್ಟು ನೀರು ನಿಲ್ಲದಂತೆ ನೋಡಿಕೊಳ್ಳುವುದು ಸೇರಿ ಕೃಷಿ ಅಧಿಕಾರಿ ಜಂಟಿಯಾಗಿ ರೈತರಿಗೆ ಸಲಹೆ ನೀಡಿದರು.
ಜಿಪಂ.ಯೋಜನಾ ನಿರ್ದೇಶಕ ಜಗದೇವಪ್ಪ, ಸಹಾಯ ಆಯುಕ್ತೆ ರೂಪಿಂದರ್ ಕೌರ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ಗ್ರೇಡ್ -1 ತಹಸೀಲ್ದಾರ್ ಘಮವತಿ ರಾಠೋಡ, ಗ್ರೇಡ್ -2 ತಹಸೀಲ್ದಾರ್ ರಾಜೇಶ್ವರಿ, ತಾಪಂ.ಇಓ ವಿಲಾಸ, ಪಪಂ.ಮುಖ್ಯಾಧಿಕಾರಿ ಪಂಕಜಾ, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್‌ಐ ವಿಶ್ವನಾಥ ಬಾಕಳೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಜನಸ್ಪಂದನ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದ ತಹಸೀಲ್ದಾರ್
ಡಿಸಿ ಅಧ್ಯಕ್ಷತೆಯಲ್ಲಿ ಮಂಗಳವಾರ ಪಟ್ಟಣದ ಶ್ರೀನೀಲಕಂಠ ಕಾಳೇಶ್ವರ ಮಂಗಲ ಮಂಟಪದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ಮಾಹಿತಿಯನ್ನು ನೀಡದಿರುವ ತಹಸೀಲ್ದಾರ್ ವಿರುದ್ಧ ತಾಲೂಕಿನ ಜನತೆ ಹರಿಹಾಯ್ದಿದ್ದಾರೆ.
ತಾಲೂಕಿನ ಕನ್ನಡ ಪರ ಸಂಘಟನೆಗಳು ಕೂಡ ತಹಸೀಲ್ದಾರ್ ಕ್ರಮವನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೂ ಮನವರಿಕೆ ಮಾಡಿದ್ದೇವೆ.
-ದತ್ತುಗುತ್ತೇದಾರ
ತಾಲೂಕು ಅಧ್ಯಕ್ಷರು, ಯುವ ಕರ್ನಾಟಕ ರಕ್ಷಣಾ ಸೇನೆ ಕಾಳಗಿ
ಮೂರು ತಾಸು ತಡವಾಗಿ ಬಂದ ಡಿಸಿ:
ಕಾಳಗಿಯಲ್ಲಿ ಮಂಗಳವಾರ ಏರ್ಮಪಡಿಸಲಾಗಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ ಮದ್ಯಾಹ್ನ 2ಗಂಟೆಗೆ ಬರಬೇಕಾದ ಡಿಸಿ ಮೂರು ತಾಸು ತಡವಾಗಿ ಬಂದ ಕಾರಣ ಅಧಿಕಾರಿಗಳು, ಸಾರ್ವಜನಿಕರು ಕಾದು ಸುಸ್ತಾಗಿ ಹೋಗಿದ್ದರು.
ಮೇಲಾಧಿಕಾರಿಗಳಿಗೆ ಸಮಯ ಪ್ರಜ್ಞೆ ಮೆರೆತರೆ ಜನ ಸಾಮಾನ್ಯರ ಗತಿಯೇನು?
-ವೀರಣ್ಣ ಗಂಗಾಣಿ
ಕಾಳಗಿ ತಾಲೂಕು ರೈತ ನಾಯಕ
ಇಲ್ಲಿಯ ಗ್ರೇಡ್-1 ತಹಸೀಲ್ದಾರ್ ಘಮವತಿ ರಾಠೋಡ ಅವರ ಕುಮ್ಮಕ್ಕಿನಿಂದ ತಾಲೂಕಿನಾದ್ಯಂತ ನಡೆದಿರುವ ಅಕ್ರಮ ಸವಳು ಸಾಗಾಟಕ್ಕೆ ಕಡಿವಾಣ ಹಾಕಿದರೆ ಮಾತ್ರ ಜನಸ್ಪಂದನ ಕಾರ್ಯಕ್ರಮ ಸಾರ್ಥಕವಾಗುತ್ತದೆ.
ಸವಳು ಸಾಗಣೆ ನಿಲ್ಲಿಸಿ, ನಮ್ಮ ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆಯುವ ಕಳ್ಳರನ್ನು ಕಾನೂನು ಕ್ರಮ ಕೈಗೊಳ್ಳುತ್ತಾರೆಂಬ ನಂಬಿಕೆ ಡಿಸಿ ಫೌಜಿಯಾ ತೇರನ್ನುಮ್ ಅವರ ಮೇಲಿದೆ.
-ಶಂಕರ ಚೋಕಾ ತಾಲೂಕು ಅಧ್ಯಕ್ಷರು, ಹಿಂದೂ ಜಾಗೃತಿ ಸೇನೆ ಕಾಳಗಿ