ಜೈಕಾರದ ಮಧ್ಯೆ ಮದಗುಣಕಿ ಗ್ರಾಮಸ್ಥರ ನವಬಂಡಿ ಉತ್ಸವ
ಆಳಂದ: ಜು.25:ತಾಲೂಕಿನ ಮದಗುಣಕಿ ಗ್ರಾಮದಲ್ಲಿನ ಮಾದನಹಿಪ್ಪರಗಾ ಶ್ರೀ ಶಿವಲಿಂಗೇಶ್ವರ ಶಾಖಾ ಮಠದ ಆಶ್ರಯದಲ್ಲಿ ಗ್ರಾಮದ ಭಕ್ತಾದಿಗಳು ಗುರುಪೂರ್ಣಿ ಹಾಗೂ ನವಬಂಡಿ ಉತ್ಸವ ಸಡಗರ ಸಂಭ್ರಮದಿAದ ನೆರವೇರಿಸಿದರು.
ಪೀಠಾಧಿಪತಿ ಶ್ರೀ ಅಭಿನವ ಶಿವಲಿಂಗ ಮಹಾಸ್ವಮಿಗಳನ್ನು ಭಕ್ತಾದಿಗಳು ಗುರುವಂದನೆ ಸಲ್ಲಿಸಿ ಭಕ್ತ್ತಿ ಭಾವದ ಮಧ್ಯ ಪ್ರಮುಖ ರಸ್ತೆಗಳಲ್ಲಿ ನವಬಂಡಿ ಉತ್ಸವ ಹಾಗೂ ಸಸಿನೆಡುವ ಕಾರ್ಯಕ್ರಮ ಕೈಗೊಂಡರು.
ಗುರುವಂದನ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಧರ್ಮಗುರು ಭಕ್ತರು ಬಾಳು ಬೆಳಗಲು ಶ್ರಮಿಸಿದರೆ ಪ್ರತಿಯಾಗಿ ಭಕ್ತರು ತಮ್ಮ ಬಾಳು ಬೆಳಗಿದ ಗುರುವಿಗೆ ಕೃತಜ್ಞಾತೆ ಪ್ರತೀಕವಾಗಿ ಗುರುಪೂಜೆ ವಂದನೆ ಸಲ್ಲಿಸುವ ಪರಂಪರೆಯ ನಡೆದುಬಂದಿದೆ. ಮದಗುಣಕಿಯಲ್ಲಿ ಇಂಥವೊAದು ಧಾರ್ಮಿಕ ಕಾರ್ಯಕ್ರಮವೂ ಸರ್ವರನ್ನು ಪ್ರೇರಪಿಸಿ ಮುನ್ನೆಡೆಸುವಂತ್ತಾಗಿದೆ, ಸರ್ವರು ಸಮಾಜೋ ಧಾರ್ಮಿಕ ಕಾರ್ಯಗಳ ಮೂಲಕ ಪರಸ್ಪರ ಕೂಡಿ ಬಾಳ್ವೆ ಜೊತೆಗೆ ಸಾಮಾಜಿಕ, ಶೈಕ್ಷಣಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಈ ಸಂದರ್ಭಧಲ್ಲಿ ವಿಶೇಷ ಸನ್ಮಾನಿತರಾಗಿ ಪಾರ್ವತಿ ಪಿ. ಸಣ್ಣಮನಿ, ಸಿದ್ಧಲಿಂಗ ಪಿ. ಮಾಲಿಪಾಟೀಲ, ಬಸವರಾಜ ಕರೆಪಗೊಳ ವಿಶೇಷ ಸನ್ಮಾನ ನೀಡಿ ಗೌರವಿಸಲಾಯಿತು. ಪ್ರವಚನಕಾರ ಸಂಗಮೇಶ ಶಾಸ್ತಿç ಪ್ರವನ ಕೈಗೊಂಡರು. ಪಿಎಸ್‌ಐ ದಿನೇಶ, ಗ್ರಾಪಂ ಸದಸ್ಯ ಅಪ್ಪಾಸಾಬ ಮಾಳಗೆ, ಶಿವಶಾಂತ ಕುಲಕರ್ಣಿ, ಪ್ರಮುಖ ಚನ್ನಯ್ಯಾ ಸ್ವಾಮಿ, ಸಿದ್ಧರಾಮ ಅರಳಿಮರ್, ಶ್ರೀಶೈಲ ಘಂಟೆ, ಝಳಕಿ ವಿರೇಶ ಪಾಟೀಲ, ಮಹಾರಾಜ್ ಕಿಣಗಿ, ಬಾಬುರಾವ್ ಪಾಟೀಲ, ಕುಮಾರ ಸ್ವಾಮಿ, ಚನ್ನಯ್ಯಾ ಸ್ವಾಮಿ, ಬಸಣ್ಣ ಮಡ್ಡೆ, ಹಣಮಂತ ಜಮಾದಾರ, ಶಿವಪ್ಪ ಫುಲಾರ, ಹಣಮಂತ ಸಣ್ಣಮನಿ, ರುಕ್ಕಪ್ಪ ಮಡಿವಾಳ, ಹಣಮಂತ ಸುತಾರ, ಹಣಮಂತ ಪಡಶೆಟ್ಟಿ ದತ್ತು ಹಡಪದ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಮುನ್ನದಿನ ನಡೆದ ಪ್ರವಚನ ಮಹಾಮಂಗಲ ಕಾರ್ಯಕ್ರಮದಲ್ಲಿ ಮಾಡಿಯಾಳ ಒಪ್ಪತ್ತೇಶ್ವರ ಮಠದ ಶ್ರೀ ಮರುಳಸಿದ್ಧ ಮಹಾಸ್ವಾಮಿಗಳು ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಮಾದನಹಿಪ್ಪರಗಾ ಶಿವಯೋಗಾಶ್ರಮದ ಶಿವದೇವಿ ಮಾತಾಜಿ ಪಾಲ್ಗೊಂಡು ಧಾರ್ಮಿಕ ಆಚರಣೆಯ ಸನ್ಮಾರ್ಗದ ಕುರಿತು ವಿವರಿಸಿದರು. ಮಹಾಂತೇಶ ಸಣ್ಣಮನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪ್ರಮುಖ ಬೀದಿಯಲ್ಲಿ ನಡೆದ ನವಬಂಡಿ ಉತ್ಸವಕ್ಕೆ ಶ್ರೀ ಅಭಿನವ ಶಿವಲಿಂಗ ಶ್ರೀಗಳು ಚಾಲನೆ ನೀಡಿದ ಬಳಿಕ ಯಶಸ್ವಿಯಾಗಿ ಉತ್ಸವ ನಡೆದು ಸಂಪನ್ನಗೊಳಿಸಲಾಯಿತು.