ಬೆಳೆವಿಮಾ ನೋಂದಣಿಗೆ 31ರ ಕೊನೆಯ ದಿನ ಬೆಳೆ ನಿರ್ವಹಣೆಗೆ ತುಂತುರ ಮಳೆ ಅಡ್ಡಿ: ಕೃಷಿ ಚಟುವಟಿಕೆ ಸ್ತಬ್ಧ
ಆಳಂದ:ಜು.25: ಕಳೆದ ಮರ‍್ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ತುಂತುರು ಮಳೆ ಅವ್ಯಹತವಾಗಿದ್ದರಿಂದ ಸಂಪೂರ್ಣವಾಗಿ ಕೃಷಿ ಚಟುವಟಿಕೆ ಸ್ತಬ್ಧಗೊಂಡಿದ್ದು, ರೈತರು ಮಳೆ ಬಿಡುವಿಗೆ ಎದುರು ನೋಡುವಂತೆ ಮಾಡಿದೆ.
ಮಳೆಯ ಬಿಡುವು ನಡುವೆ ಗುರುಪೂರ್ಣಿಮೆ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳಲು ರೈತರಿಗೆ ಕೊಂಚ ಬಿಡುವು ಸಿಕ್ಕಂತಾಗಿದು, ಒಂದಡೆಯಾದರೆ ಮತ್ತೊಂದಡೆ ಬಿತ್ತನೆಕೈಗೊಂಡ ಬೆಳೆ ಉತ್ತಮವಾಗಿದ್ದು, ಔಷಧಿ, ಗೊಬ್ಬರ, ನಿರ್ವಹಣೆಗೆ ಸಕಾಲಕ್ಕೆ ಉಪಚಾರ ಕೈಗೊಳ್ಳಲು ಮಳೆ ಬಿಡುವು ನೀಡಿದರೆ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ರೈತರು ಹೇಳಿಕೊಂಡಿದ್ದಾರೆ.
ಉದ್ದು, ಹೆಸರು, ಸೋಯಾ ಬೆಳೆಗೆ ಹೇನಿನ ಬಾಧೆ ಆವರಿಸಿದ್ದು ಬೆಳೆ ಉಳಿಸಿಕೊಳ್ಳಲು ಮತ್ತು ಬೆಳೆಯಲ್ಲಿನ ಕಳೆ ಅಳಿಸಲು ಔಷಧಿ ಸಿಂಪರಣೆಗೆ ಆಗಾಗಾ ಸುರಿಯುತ್ತಿರುವ ತುಂತುರ ಮಳೆ ಅಡ್ಡಿಯಾಗಿದೆ.
ಈ ಮಳೆಯಿಂದಾಗಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಜನ ಜೀವನ ಅಸ್ತವ್ಯವಸ್ಥವಾಗಿದೆ. ವ್ಯಾಪಾರ ವೈಹಿವಾಟು ಮಂಕಾಗಿದ್ದು, ರಸ್ತೆ, ಬೀದಿ ಬದಿಗಳಲ್ಲಿ ಕೆಸರಿನಿಂದಾಗಿ ಓಡಾಟಕ್ಕೆ ಸಂಕಷ್ಟ ಪಡುತ್ತಿದ್ದಾರೆ. ಮನೆ ಹೊರಗೆ ಬರಲು ಮಳೆ ತಪ್ಪಿಸಿಕೊಳ್ಳಲು ಅನಿವಾರ್ಯ ಎಂಬAತೆ ಛತ್ರಿ ಕೈಯಲಿಡಿದು ಓಡಾಡುವ ದೃಶ್ಯ ಸಾಮಾನ್ಯವಾಗಿದೆ.
ಜುಲೈ 22ರಿಂದ 24ರವರೆಗೆ ಏಳು ಮಳೆಮಾಪನ ಕೇಂದ್ರ ವ್ಯಾಪ್ತಿಯಲ್ಲಿ ಸಾಧಾರಣ ದಿಂದಲೇ ಮಳೆ ಸುರಿದ ಅಂಕಿಅAಶಗಳ ನೀಡಿದೆ. ಎಲ್ಲೂ 25ಕ್ಕಿಂತ ಹೆಚ್ಚಿನ ಎಂಎA ಮಳೆಯಾಗಿಲ್ಲ. ರಬಸದ ಮಳೆಯಿಂದ ನೀರಿನ ಪ್ರವಾಹ ಹರಿದ ಬಗ್ಗೆ ವರದಿಗಳಿಲ್ಲ. ಹಳ್ಳ, ನಾಲಾಗಳಲ್ಲಿ ಮಳೆಗಾಲದ ಸಾಮಾನ್ಯ ನೀರಿನ ಹರಿವು ಮುಂದಿವರೆದಿದೆ. ಹಿಂದಿನ ಜೂನ್ ಹಾಗೂ ಜುಲೈ ಮೊದಲು ವಾರದಲ್ಲಿ ಬಿದ್ದ ಮಳೆ ಅನೇಕ ಕೆರೆಗಳು ಭರ್ತಿಯಾಗಿದ್ದವು. ಅಮರ್ಜಾ ಅಣೆಕಟ್ಟೆಗೆ ಸಣ್ಣ ಪ್ರಮಾಣದ ನೀರಿನ ಒಳಹರಿವು ಇದೆ.
ಬೆಳೆವಿಮೆಗೆ ಜುಲೈ 31ರ ಕೊನೆ ದಿನ:
2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯಡಿಯಲ್ಲಿ ಹೆಸರು ಬೆಳೆಗೆ ಜುಲೈ 15 ಹಾಗೂ ಉದ್ದು ತೊಗರಿ ಮತ್ತು ಇತರೆ ಬೆಳೆಗಳಿಗೆ ವಿಮಾ ನೋಂದಣಿಗೆ ಜುಲೈ 31 ಕೊನೆ ದಿನವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಅವರು ತಿಳಿಸಿದ್ದಾರೆ.
ಪ್ರಸಕ್ತ ಹಂಗಾಮಿನಲ್ಲಿ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಅಥವಾ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘ ಸ್ಫೋಟ ಹಾಗೂ ಗುಡುಗು ಮಿಂಚುಗಳಿAದ ಉಂಟಾಗುವ ಬೆಂಕಿ ಅವಘಡದಿಂದ ಬೆಳೆ ನಷ್ಟವುಂಟಾದರೆ ವಿಮೆ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ವಿಮಾ ಯೋಜನೆಯಡಿ ರೈತರು ತಮ್ಮ ಪಾಲಿನ ಕಂತು ಪ್ರತಿ ಎಕರೆಗೆ ಹೆಸರು ರೂ.293.31 ವಿಮಾ ಕಂತು ಜುಲೈ 15ರೊಳಗೆ ಪಾವತಿಸಬೇಕು, ಉದ್ದು ರೂ.264.11, ತೊಗರಿ ರೂ.388.51, ಸೋಯಾಬಿನ್ ರೂ.1,006.69, ಹತ್ತಿ 1,303 ವಿಮಾ ಕಂತು ಪಾವತಿಗೆ ಜುಲೈ 31 ಕೊನೆ ದಿನವಾಗಿದೆ ಎಂದು ತಿಳಿಸಿದ್ದಾರೆ.
ರೈತರು ಹೆಚ್ಚಿನ ಮಾಹಿತಿಗೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ನೋಂದಣಿಗಾಗಿ ಹತ್ತಿರದ ಬ್ಯಾಂಕ್‌ಗಳಿಗೆ, ನಾಗರಿಕ ಸೇವಾ ಕೇಂದ್ರ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಂಪರ್ಕಿಸಬಹುದು ಎಂದು ಅವರು ಹೇಳಿದ್ದಾರೆ.