ವೈದ್ಯಕೀಯ, ವಾಣಿಜ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ರೋಬೋಟ್ ದಾಪುಗಾಲು ಇಡುತ್ತಿದೆ: ಇನ್ಫೋಸಿಸ್ ತಂಡದ ಸಾರಾ ನಿಶ್ಚಿತ
ಸಂಜೆವಾಣಿ ವಾರ್ತೆ
ಹನೂರು ಜು ೨೫ :- ವೈದ್ಯಕೀಯ, ವಾಣಿಜ್ಯ ಹಾಗು ಶೈಕ್ಷಣಿಕ ಕ್ಷೇತ್ರದಲ್ಲಿ ರೋಬೋಟ್ ಗಳು ದಾಪುಗಾಲು ಇಡುತ್ತಿದೆ. ಪ್ರಸ್ತುತ ತಂತ್ರಜ್ಞಾನದಲ್ಲಿ ರೋಬೋಟ್ ಗಳಿಗೆ ಭಾವನೆಗಳು ಮತ್ತು ಚರ್ಮವನ್ನು ಅಳವಡಿಸಲಾಗುತ್ತದೆ. ವಿದ್ಯಾರ್ಥಿಗಳ ಜ್ಞಾನ ವಿಕಾಸದ ಮಜಲುಗಳಲ್ಲಿ ಕುತೂಹಲವು ಒಂದು ಮುಖ್ಯವಾದ ವಿಷಯ ಎಂದು ಇನ್ಫೋಸಿಸ್ ನ ತಂಡದ ಸಾರಾ ನಿಶ್ಚಿತ ಅವರು ತಿಳಿಸಿದರು.
ತಾಲೂಕಿನ ಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಠ್ಯಕ್ರಮದ ಪರಿಚಯಾತ್ಮಕ ಪಾಠದ ಮಾಹಿತಿಯೊಂದಿಗೆ ಪ್ರಾಯೋಗಿಕ ಹಾಗೂ ಅಂತರ್ಜಾಲದ ನಡುವೆ ಪಾಠದ ರಚನಾತ್ಮಕ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳು ಪಠ್ಯಪುಸ್ತಕವನ್ನು ಓದಿ ಕಲಿಕಾ ದೃಢೀಕರಣದೊಂದಿಗೆ ಇದರ ಪ್ರಾಯೋಗಿಕ ಪಾಠಗಳು ಹೆಚ್ಚು ಹೆಚ್ಚು ದೃಢೀಕರಿಸುವುದರ ಮುಖಾಂತರ ಮಕ್ಕಳಲ್ಲಿ ಪರೀಕ್ಷಾ ಭಯ ಮತ್ತು ಆತಂಕಗಳನ್ನು ದೂರವಾಗಿಸಿಕೊಂಡು ಕಲಿಕೆಯನ್ನು ದೃಢೀಕರಿಸಿಕೊಳ್ಳ ಬಹುದು.
ಈ ಲ್ಯಾಬ್ ನಲ್ಲಿ ಸುಮಾರು ೨೦೦೦ ಕ್ಕಿಂತ ಹೆಚ್ಚು ಕೋರ್ಸ್ಗಳು ಲಭ್ಯವಿದ್ದು ಶೈಕ್ಷಣಿಕ ತಂತ್ರಜ್ಞಾನದ ಬಳಕೆಯ ಮೂಲಕ, ಶಿಕ್ಷಣವು ಪ್ರತಿ ವಿದ್ಯಾರ್ಥಿಗಳಲ್ಲಿ ಕಲಿಕಾ ವ್ಯತ್ಯಾಸವನ್ನು ಮೌಲ್ಯಾಂಕನ ಮಾಡಲು ಅವಕಾಶ ನೀಡುತ್ತದೆ ಮತ್ತು ವಿದ್ಯಾರ್ಥಿಗಳು ತಮ್ಮದೇ ವೇಗದಲ್ಲಿ ಪಾಂಡಿತ್ಯಕ್ಕಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು.
ಬೌತ ಕಣಗಳ ಬಗ್ಗೆ ಹಂಸ ಮತ್ತು ಬಸವರಾಜ ಪಾಟೀಲ್ ತಿಳಿಸುತ್ತಾ ಮಕ್ಕಳು ಆತಂಕಗಳನ್ನು ದೂರವಾಗಿಸುತ್ತಾ ಹೊಸದೊಂದು ಸಂಶೋಧನೆಯ ನೆಲೆಯನ್ನು ಹುಡುಕುತ್ತಾ ಕಲಿಕೆಗೆ ಹೆಚ್ಚು ಹೊತ್ತು ನೀಡಬಹುದಾಗಿದೆ ಬೋಧನೆಯೊಂದಿಗೆ ಪ್ರಾಯೋಗಿಕತೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವ ಕಾರಣ ಈ ಲ್ಯಾಬ್ ನಲ್ಲಿ ಬ್ಯಾಟರಿ ಕೆಲಸ ಕಾರ್ಯಗಳು ವಿದ್ಯುತ್ ಶಕ್ತಿಯ ಹೊರ ಮತ್ತು ಒಳಬರುವ ಶಕ್ತಿಯ ಪ್ರಮಾಣ ಸರ್ಕ್ಯೂಟ್ ಸೆನ್ಸಾರ್ ಗಳು ಹೇಗೆ ಕೆಲಸ ಮಾಡುತ್ತದೆ ಸೋಲಾರ್ ಹೇಗೆ ಕೆಲಸ ನಿರ್ವಹಣೆ ಮಾಡುತ್ತದೆ. ಈ ಒಂದು ಲ್ಯಾಬಿನ ಮುಖಾಂತರ ಕೋರ್ಸ್ ಮಾಡಿ ಸರ್ಟಿಫಿಕೇಟ್ ಲಭ್ಯತೆಯೊಂದಿಗೆ ನಿಗದಿತ ವಿದ್ಯಾರ್ಹತೆ ಹೊಂದಿದ್ದರೆ ಇನ್ಫೋಸಿಸಿನಲ್ಲಿ ಕೆಲಸಕ್ಕೇ ಸೇರಬಹುದು ಎಂದು ತಿಳಿಸಿದರು.
ಪ್ರಭಾರ ಮುಖ್ಯ ಶಿಕ್ಷಕ ಶಂಭಯ ಮಾತನಾಡಿ ಸೂಕ್ತ ತಾಂತ್ರಿಕ ಪ್ರಕ್ರಿಯೆ ಮತ್ತು ಸಂಪನ್ಮೂಲಗಳನ್ನು ರಚಿಸಿ ಅದನ್ನು ಬಳಸಿಕೊಂಡು ನಿರ್ವಹಿಸುವ ಮೂಲಕ ಕಲಿಕಾ ಕಾರ್ಯಕ್ಷಮತೆಯನ್ನು ಹಿಗ್ಗಿಸಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸುತ್ತಾ, ಶಿಕ್ಷಣದಲ್ಲಿ ತಂತ್ರಜ್ಞಾನವು ಒಂದು ಸಕಾರಾತ್ಮಕ ರೀತಿಯಲ್ಲಿ ಸಂಯೋಜಿಸುವ ಪ್ರಕ್ರಿಯೆಯಾಗಿದೆ ಪರಿಕಲ್ಪನೆಗಳನ್ನು ಮೂಡಿಸುವುದರೊಂದಿಗೆ ಮಕ್ಕಳಲ್ಲಿ ಕಲಿಕೆಯನ್ನುಂಟು ಮಾಡಬಹುದು ಎಂದು ತಿಳಿಸಿದರು.
ಸಂವಾದ ಕಾರ್ಯಗಾರದಲ್ಲಿ ಪ್ರಿಯದರ್ಶಿನಿ, ಪೂರ್ವಿ, ಜೀವನ್, ಪ್ರಮೋದ್, ದುರ್ಗೆಶ್, ಮಿಥುನ್, ಕುಮಾರ್ ಸೇರಿದಂತೆ ೮,೯,೧೦ ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಿ ಇ- ಲರ್ನಿಂಗ್ ಸರ್ಟಿಫಿಕೇಟ್ ತೆಗೆದುಕೊಂಡರು. ಈ ಕಾರ್ಯಕ್ರಮದಲ್ಲಿ ಬಿ.ಇ.ಒ ಮಹೇಶ್, ಸಂಪನ್ಮೂಲ ವ್ಯಕ್ತಿಗಳಾದ ಹಂಸ, ನವೀನ್, ಇಸಿಒ ಕಿರಣ್, ಚಿನ್ನಪ್ಪಯ್ಯ, ಶಿಕ್ಷಕರಾದ ಮಹಾದೇವ್, ಪ್ರಭುರಾಜ್, ಕಾವ್ಯ, ಸತೀಶ್, ಸೂರ್ಯಕಾಂತ್ ಮತ್ತು ವೆಂಕಟೇಶ್ ಇದ್ದರು.