ಪ್ರವೀಣ ಸಿಂದಗಿಗೆ ಡಾಕ್ಟರೇಟ್
ತಾಳಿಕೋಟೆ:ಜು.೨೫: ರಾಯಚೂರಿನ ಸರ್ಕಾರಿ ಇಂಜನಿಯರಿAಗ್ ಕಾಲೇಜ್ ಸಂಸ್ಥೆಯ ಪ್ರಾಧ್ಯಾಪಕರು ಹಾಗೂ ಹಾಸನ ಸಂಸ್ಥೆಯ ರಾಜೀವ ಇನ್ಸಟಿಟ್ಯೂಟ್ ಆಫ್ ಟೆಕ್ನಾಲಜಿ (ಆರ್‌ಐಟಿ) ವಿದ್ಯಾರ್ಥಿಯಾಗಿರುವ ಪ್ರವೀಣ ಸಿಂದಗಿ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಪ್ರಧಾನ ಮಾಡಿದೆ.
ಪ್ರವೀಣ ಸಿಂದಗಿ ಅವರು ಹಾಸನದ ಆರ್‌ಐಟಿ ಕಾಲೇಜ್ ಪ್ರಾಂಶುಪಾಲರಾದ ಡಾ.ಮಹೇಶ ಪಿ.ಕೆ. ಅವರ ಮಾರ್ಗದರ್ಶನದಲ್ಲಿ ಟು ಕಂಟ್ರೋಲ್ ಹೈಪೋಗ್ಲಿಸೆಮಿಯಾ ಆಂಡ್ ಹೈಪರ್ ಟೆನ್ಸನ್ ಯುಜಿಂಗ್ ಬ್ರೇನ್ ಆಸ್ ಎ ಬಯೋಸೆನ್ಸ್ರ(ಊಥಿಠಿogಟಥಿಛಿemiಚಿ ಚಿಟಿಜ ಊಥಿಠಿeಡಿಣeಟಿsioಟಿ Usiಟಿg ಃಡಿಚಿiಟಿ ಂs ಂ ಃioseಟಿsoಡಿ) ಎಂಬ ವಿಷಯದ ಮೇಲೆ ಮಹಾ ಪ್ರಬಂಧ ಮಂಡಿಸಿದ್ದರು. ದಿ.೧೮ ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳು ಹಾಗೂ ಕುಲಸಚಿವರ ಸಮ್ಮುಖದಲ್ಲಿ ಪ್ರವೀಣ ಸಿಂದಗಿ ಅವರಿಗೆ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಲಾಗಿದೆ.