ಮಾನವ ಬಂಧುತ್ವ ವೇದಿಕೆ ಪ್ರತಿ ಹಳ್ಳಿಯಲ್ಲಿ ೧೦ ಜನರ ಸಮಿತಿ ರಚನೆ ಕುರಿತು ಅ.೨ ರಂದು ಪೂರ್ವಭಾವಿ ಸಭೆ
ಬೀದರ: ಸೆ.೨೯:ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರು ಲೋಕೋಪಯೋಗಿ ಇಲಾಖೆಯ ಸಚಿವರು ಆದ ಸತೀಶ್ ಅಣ್ಣಾ ಜಾರಕಿಹೊಳಿರವರ ಆದೇಶದ ಮೇರೆಗೆ ಬೀದರ ಜಿಲ್ಲಾದಾದ್ಯಂತ ಬುಧ್ದ ಬಸವ ಅಂಬೇಡ್ಕರ್ ರವರ ತತ್ವ ಪ್ರಚಾರ ಸಂವಿಧಾನ ಅರಿವು ಮೂಡನಂಬಿಕೆ ವಿರುದ್ಧ ಜಾಗೃತಿ ಹಾಗೂ ಶಿಕ್ಷಣ, ಸ್ವಯಂ ಉದ್ಯೋಗ ಸರ್ಕಾರದ ಯೋಜನೆಗಳ ಮಾಹಿತಿ ಗ್ರಾಮದ ಕಟ್ಟಕಡೆಯ ವ್ಯಕ್ತಿಯ ಮನೆ ಬಾಗಿಲಿಗೆ ಮುಟ್ಟಿಸಲು ಬೀದರ ಜಿಲ್ಲಾಯಾದ್ಯಂತ ಪ್ರತಿ ಗ್ರಾಮದಲ್ಲಿ ೧೦ ಜನರ ಸಮಿತಿಯನ್ನು ರಚಿಸುವ ಕುರಿತು ದಿನಾಂಕ ೨ ಅಕ್ಟೋಬರ್ ೨೦೨೪ ರಂದು ಬೀದರ ಡಾ.ಅಂಬೇಡ್ಕರ್ ವೃತ್ತದ ಹತ್ತಿರ ಇರುವ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಕಛೇರಿಯಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಪ್ರಯುಕ್ತ ಜಿಲ್ಲಾ ಪದಾಧಿಕಾರಿಗಳು ತಾಲೂಕು ಸಂಚಾಲಕರು ಬುಧ್ದ ಬಸವ ಅಂಬೇಡ್ಕರ್ ರವರ ಅನುಯಾಯಿಗಳು ಹಾಗೂ ಸಂವಿಧಾನ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವೇದಿಕೆಯ ಜಿಲ್ಲಾ ಸಂಚಾಲಕ ಮಹೇಶ ಗೋರನಾಳಕರ್ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ