ನಮ್ಮ ಮಕ್ಕಳಲ್ಲಿ ಪ್ರತಿಭೆ ಸೂಕ್ತ ವೇದಿಕೆಗಳಿಲ್ಲ:ಬಿ.ಜಿ. ಶೆಟಕಾರ
ಬೀದರ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಮನ್ಮಥ ಡೋಳೆ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ ಶೈಕ್ಷಣಿಕ ಪ್ರಗತಿಗೆ ಮಾನಸಿಕ ಸದೃಢತೆ ಜೊತೆಗೆ ದೈಹಿಕ ಸದೃಢತೆಯೂ ಅಗತ್ಯ ಅದಕ್ಕೆ ಕ್ರೀಡೆಗಳು ಪೂರಕವಾಗಿದ್ದು ಕ್ರೀಡೆಗಳಲ್ಲಿ ಸೋಲು, ಗೆಲುವು ಸಹಜವಾಗಿದ್ದು, ಅದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕೆಂದು ನುಡಿದರು.
ಮುಖ್ಯ ಅತಿಥಿಗಳಾಗಿ ಕ.ರಾ.ಶಿ. ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ, ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ರಾಜ್ಯ ಪ್ರತಿನಿಧಿ ಡಾ. ಪ್ರಭು, ಉಪಾಧ್ಯಕ್ಷ ಡಾ. ಚಂದ್ರಕಾAತ ಗಂಗಶೆಟ್ಟಿ, ಬೀದರ ಜಿಲ್ಲಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಓಂಕಾAತ ಸೂರ್ಯವಂಶಿ, ಎನ್.ಎಫ್. ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಎಲಿಜಾಬೆತ್ ಸ್ವರೂಪರಾಣಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಸರಕಾರಿ ಪಪೂ ಕಾಲೇಜಿಬ ಪ್ರಾಚಾರ್ಯರಾದ ಲದ್ದೆ ಮಲ್ಲಿಕಾರ್ಜುನ, ವಿಜಯಕುಮಾರ ತೋರಣಕರ, ದೈಹಿಕ ಅಧಿಕಾರ ನಾಗನಾಥ ಬಿರಾದಾರ, ದೈಹಿಕ ನಿರ್ದೇಶಕ ಸಂಜಯ ಜೆಸಿ ಕರ್ನಾಟಕ ಕಾಲೇಜಿನ ಉಪನ್ಯಾಸಕರಾದ ಡಾ. ಮಾದಯ್ಯ ಸ್ವಾಮಿ, ಡಾ. ಸುನೀಲಕುಮಾರ ಮೂಲಗೆ, ನೀಲೇಶ ರತ್ನಾಕರ, ಅನಿಲ ಬಿ, ಮೊದಲಾದವರು ಭಾಗವಹಿಸಿದರು. ನಗರದ ಎನ್.ಎಫ್. ಪದವಿ ಪೂರ್ವ ಕಾಲೇಜು, ಮಂಗಲಪೇಟದಲ್ಲಿ ಜರುಗಿದ ಕ್ರೀಡಾಕೂಟದಲ್ಲಿ ಬೀದರ ಜಿಲ್ಲೆಯ ತಾಲ್ಲೂಕು ಮಟ್ಟದಲ್ಲಿ ವಿಜೇತರಾದ ಸುಮಾರು ೩೦ ಕ್ಕೂ ಹೆಚ್ಚು ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಜಗನ್ನಾಥ ಕಮಲಾಪುರೆ ನಿರೂಪಿಸಿದರೆ, ಬಸವರಾಜ ಬಲ್ಲೂರ ಸ್ವಾಗತಿಸಿದರು. ಡಾ. ಮಂಗಲಾ ರೆಡ್ಡಿ ವಂದಿಸಿದರು.