ಕಲೆ, ಸಾಹಿತ್ಯ, ಸಂಸ್ಕೃತಿ ಮಾನವನ ಅವಿಭಾಜ್ಯ ಅಂಗ ಃ ಸಿಪಿಐ ವಿಜಯಕುಮಾರ ಬಾವಗಿ
ಬೀದರ್ :ಸೆ .೨೯ಃ ಕಲೆ, ಸಾಹಿತ್ಯ, ಸಂಸ್ಕೃತಿ ಅನಾದಿ ಕಾಲದಿಂದಲು ಮಾನವರ ಬದುಕಿನ ಏಳಿಗೆಯ ಅವಿಭಾಜ್ಯ ಅಂಗವಾಗಿವೆ ಎಂದು ಬೀದರ ನೂತನ ನಗರ ಪೊಲೀಸ್ ಠಾಣೆಯ ಸಿ.ಪಿ.ಐ. ವಿಜಯಕುಮಾರ ಬಾವಗಿ ಅವರು ಕೀವಿಮಾತು ಹೇಳಿದರು.
ಅವರು ಶುಕ್ರವಾರ ಅಂಬಿಗರ ಚೌಡಯ್ಯ ಯುನ ಸೇನೆ ಬೀದರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ೨೦೨೦-೨೧ನೇ ಸಾಲಿನ ಸಾಮಾನ್ಯ ಧನ ಸಹಾಯ ಯೋಜನೆಯಡಿ ಬೀದರ ನಗರದ ಎಸ್.ಆರ್.ಎಸ್.ಫಂಕ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಬೀದರ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಎಲ್ಲಾದರು ಇರು ಎಂತಾದರು ಇರು ಎಂದೆAದಿಗೂ ನೀನು ಕನ್ನಡಿಗನಾಗಿರು ಎಂಬ ನುಡಿಯಂತೆ ಯುವಕರು ಕನ್ನಡ ಭಾಷೆಯ ಬಗ್ಗೆ ಒಲವು ಬೆಳಸಿಕೊಳ್ಳಬೇಕು ಎಂದರು. ಯುವಕರನ್ನು ಸಾಹಿತ್ಯ ಸೊಗಡಿನತ್ತ ತರುವ ಕಾರ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶಿವಕುಮಾರ ಕಟ್ಟಿ ಅವರು ಮಾತನಾಡಿ, ಪುಸ್ತಕಗಳು ಓದುವುದರಿಂದ ಯುವ ವಿದ್ಯಾರ್ಥಿಗಳಿಗೆ ಸಾಹಿತ್ಯದ ಗೀಳು ಅಂಟಿಕೊಳ್ಳುತ್ತದೆ ಇದರಿಂದ ಯುವ ಜನಾಂಗ ದುಷ್ಟದಾರಿಗೆ ಹೊಗದೆ ಸನ್ಮಾರ್ಗದಲ್ಲಿ ನಡೆಯಲು ಬಯಸುತ್ತಾರೆ ಎಂದು ಹೆಳಿದರು. ಪಾಚಿಮಾತ್ಯ ಸಂಸ್ಕೃತಿಯತ್ತ ಯುವಕರು ವಾಲುತ್ತಿದ್ದು, ಇದು ಖೇದಕರ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜನಪದ ಅಕಾಡೇಮಿ ಸದಸ್ಯರಾದ ವಿಜಯಕುಮಾರ ಸೋನಾರೆ ಅವರು ಮಾತನಾಡುತ್ತಾ, ಗ್ರಾಮೀಣ ಪ್ರದೇಶದಲ್ಲಿ ನಶಿಸಿಹೊಗುತ್ತಿರುವ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿನೂತನ ಯೋಜನೆಗಳು ಜಾರಿಗೆ ತಂದಿದೆ ಇದರ ಸದುಪಯೋಗವನ್ನು ನಗರ ಮತ್ತು ಗ್ರಾಮೀಣ ಭಾಗದ ಜನರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಜಾನಪದ ಹಿರಿಯ ಕಲಾವಿದ ಶಂಭುಲಿAಗ ವಾಲ್ದೊಡ್ಡಿ ಅವರು ಶುಸ್ರಾವ್ಯವಾಗಿ ಹಾಡುವ ಮೂಲಕ ಸಭಿಕರ ಮನ ತಣಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಲಾವಿದರಿಗೆ ಕರೆ ನೀಡಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸುನೀಲ ಭಾವಿಕಟ್ಟಿ, ಎಸ್ಸಿ, ಎಸ್ಟಿ ಪತ್ರಿಕೆಗಳ ರಾಜ್ಯ ಮಟ್ಟದ ಸಲಹಾ ಸಮಿತಿ ಸದಸ್ಯ ಪೃಥ್ವಿರಾಜ್ ಎಸ್, ಅಲಿಯಂಬರ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸಾಯಿ ಚೈತನ್ಯ ಸಂಜೀವಕುಮಾರ, ಶ್ರೀಮಂತ ಸಪಾಟೆ, ಆನಂದ ಗುಪ್ತಾ, ಅನೀಲ ಮಚಕುರೆ ವೇದಿಕೆ ಮೇಲೆ ಇದ್ದರು.
ಈ ಮುನ್ನ ಕು.ತ್ರಿಶಾ ಬಾಲೆಬಾಯಿ ಅವರು ಭರತ ನಾಟ್ಯ ಪ್ರದರ್ಶನ, ಸರಸಿಂಹಲು ಡಪ್ಪುರ್ ಭಕ್ತಿ ಗೀತೆ, ಶಿವಕುಮಾರ ಪಾಂಚಾಳ್ ತಂಡದಿAದ ವಚನ ಗಾಯನ, ದೀಲಿಪ್ ಕಾಡವಾದ ತಂಡದಿAದ ಸುಗಮ ಸಂಗೀತ, ಶಂಕರ ಚೊಂಡಿ ತಂಡದಿAದ ಹಂತಿ ಪದ ಹಾಗೂ ಜನಪದ, ಯೇಸುದಾಸ್ ಅಲಿಯಂಬುರೆ ತಂಡದಿAದ ಗೊಂಬೆ ಕುಣೀತ, ದೇವದಾಸ ಚಿಮಕೋಡ ತಂಡದಿAದ ಗೀಗಿಪದ, ಕಲ್ಲಮ್ಮ ಹಳ್ಳದಕೇರಿ ತಂಡದಿAದ ಜೋಕುಮಾರ ಸ್ವಾಮಿ ಹಾಡುಗಳು ಹಾಡುವ ಮೂಲಕ ಸಭಿಕರ ಗಮನ ಸೆಳೆದರು.
ಅಂಬಿಗರ ಚೌಡಯ್ಯ ಯುವ ಸೇನೆಯ ಜಿಲ್ಲಾ ಅಧ್ಯಕ್ಷ ಚಂದ್ರಕಾAತ ಹಳ್ಳಿಖೇಡಕರ್ ಸ್ವಾಗತಿಸಿ, ನಿರೂಪಿಸಿದರು, ಅಂಬ್ರೀಷ ಮಲ್ಲೇಶಿ ವಂದಿಸಿದರು.