ಕಲಬುರಗಿ ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿ: ಬಿಎಲ್‌ಡಿಇ ಆಯುರ್ವೇದ ಕಾಲೇಜಿಗೆ ತೃತೀಯ ಸ್ಥಾನ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ. ೨೯: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ಪುರುಷರ ಮತ್ತು ಮಹಿಳೆಯರ ತಂಡಗಳು ಆಳಂದದಲ್ಲಿ ಬುಧವಾರ ನಡೆದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಲಬುರ್ಗಿಯ ವಲಯ ಮಟ್ಟದ ವಾಲಿಬಾಲ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದಿವೆ.
ಈ ಪಂದ್ಯಗಳ ಪುರುಷರ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಮಾಂತೇಶ, ಮಹಾದೇವ, ವಿರುಪಾಕ್ಷ, ಅಮರ, ವೀರೇಶ, ನಿತಿನ, ಶುಭಂ, ಅಭಿಷೇಕ, ಅಖಿಲೇಶ, ಶರಣಗೌಡ, ವಿನಯಕುಮಾರ, ತುಷಾರ ಅವರನ್ನೊಳಗೊಂಡ ತಂಡ ತೃತೀಯ ಸ್ಥಾನ ಗಳಸಿದೆ.
ಮಹಿಳೆಯರ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ ಜೆಜಮ್ಮ, ರಶ್ಮಿ, ಸೌಮ್ಯ, ಕೃತಿಕಾ, ಪೂಜಾ, ಚನ್ನಮ್ಮ ಮೋದಿ, ಚನ್ನಮ್ಮ ಜೆ, ಸಹನಾ ಅವರನ್ನೊಳಗೊಂಡ ತಂಡ ತೃತೀಯ ಸ್ಥಾನ ಗಳಿಸಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಆಡಳಿತ ಮಂಡಳಿ, ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ, ದೈಹಿಕ ನಿರ್ದೇಶಕ ಹನಮಂತ ಪವಾರ, ಬೋಧಕ ಹಾಗೂ ಬೋಧಕೇತÀರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.