ಪಿಯುಸಿ ಅನುದಾನಕ್ಕೆ ಒಳಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು:ಬೆಳಗುಂದಿ
ಸೈದಾಪುರ;ಜು.೨೫:ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ನಿಧನಕ್ಕೆ ವಿದ್ಯಾ ವರ್ಧಕ ಸಂಸ್ಥೆಯ ವತಿಯಿಂದ ಸಂತಾಪ ಸೂಚಿಸಿ ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಮಾತನಾಡಿದರು.
ವೈಯಕ್ತಿವಾಗಿ ನನಗೆ ಆಪ್ತರಾಗಿದ್ದ ಡಾ.ವೀರಬಸವಂತರೆಡ್ಡಿಯವರು ನಾನು ಸಂಘದ ಅಧ್ಯಕ್ಷನಾಗಿ ಆಯ್ಕೆಯಾದ ಸುದ್ದಿ ತಿಳಿದು ಸಂಸ್ಥೆಗೆ ಭೇಟಿ ನೀಡಿ ಸನ್ಮಾನಿಸಿ ಶುಭಕೋರಿದ್ದರು. ಅವರಲ್ಲಿನ ಈ ಸರಳತೆ ನಮಗೆ ಮಾರ್ಗದರ್ಶನವಾಗಿದೆ. ಶಿಕ್ಷಣ ಪ್ರೇಮಿಗಳಾಗಿದ್ದ ಅವರು ಶಾಸಕರಾಗಿದ್ದಾಗ ನಮ್ಮ ಸಂಸ್ಥೆಯ ಪಿಯುಸಿ ಕಲಾ ವಿಭಾಗವನ್ನು ಸರಕಾರದ ಅನುದಾನಕ್ಕೆ ಒಳಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಅನುಕೂಲವಾಗಿದ್ದೂ ಶೈಕ್ಷಣಿಕ ಅಭಿವೃದ್ದಿಗೆ ನೆರವು ನೀಡದಂತಾಗಿದೆ. ಅವರ ಈ ಸೇವಾ ಮನೋಭಾವನೆ ನಮಗೆ ಮಾದರಿಯಾಗಿದೆ. ಅವರ ಅಗಲುವಿಕೆಯಿಂದ ಉತ್ತಮ ಮಾರ್ಗದರ್ಶಕರನ್ನು ಹಾಗೂ ಅತ್ಮೀಯ ವ್ಯಕ್ತಿಯನ್ನು ಕಳೆದುಕೊಂಡತ್ತಾಗಿದೆ.
ಮೃತರ ಕುಟಂಬ ವರ್ಗಕ್ಕೆ ದುಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಸಂಸ್ಥೆಯ ವತಿಯಿಂದ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಸೇರಿದಂತೆ ಉಪಾಧ್ಯಕ್ಷ ಲಕ್ಷಿö್ಮÃಕಾಂತರೆಡ್ಡಿ ಪಲ್ಲಾ, ಕಾರ್ಯದರ್ಶಿ ಬಸವರಾಜ ಪಾಟೀಲ ಕ್ಯಾತನಾಳ, ಸಹ ಕಾರ್ಯದರ್ಶಿ ಕೆ.ಬಿ.ಗೋವರ್ಧನ, ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಬೂದೆಪ್ಪಗೌಡ ಪಾಟೀಲ, ಚಂದ್ರಾಯಗೌಡ ಐರಡ್ಡಿ, ಸಂಗರೆಡ್ಡಿಗೌಡ ಪೋ.ಪಾ.ಮಲ್ಹಾರ, ಶರಣಪ್ಪಗೌಡ ಕೌಳೂರ, ಸಿದ್ರಾಮಪ್ಪಗೌಡ ಗೊಂದೆಡಗಿ, ಚೆನ್ನಾರಡ್ಡಿ ಹುಣಸೇಮರ, ಸೂರ್ಯಪ್ರಕಾಶ ಆನಂಪಲ್ಲಿ, ಪ್ರಭುಲಿಂಗ ವಾರದ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ, ಜಿ.ಎಂ.ಗುರುಪ್ರಸಾದ, ಕರಸಬಸಯ್ಯ ದಂಡಿಗಿಮಠ, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಪ್ರಾರ್ಥಸಿದ್ದಾರೆ.