ಅಹೋರಾತ್ರಿಧರಣಿಯಲ್ಲಿ ಚಲನಚಿತ್ರಗೀತೆ ಹಾಡಿ ಸದಸ್ಯರಿಗೆಉತ್ಸಾಹತುಂಬಿದ ಶಶೀಲ್ ನಮೋಶಿ
ಕಲಬುರಗಿ:ಜು.೨೫:ಮೈಸೂರು ಮುಡಾ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರುತಮ್ಮ ಸ್ಥಾನಕ್ಕೆ ಕೂಡಲೇರಾಜೀನಾಮೆ ನೀಡಲು ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ವಿಧಾನ ಸಭಾ ಹಾಗೂ ವಿಧಾನ ಪರಿಷತ್ ನಲ್ಲಿ ಸದಸ್ಯರೆಲ್ಲ ಸೇರಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಕೇಳ ಮನೆಯಲ್ಲಿರಾಜ್ಯಾಧ್ಯಕ್ಷ ಶ್ರೀ ವಿಜಯೇಂದ್ರ ನೇತೃತ್ವದಲ್ಲಿ ವಿಧಾನ ಸಭಾ ಸದಸ್ಯರು ತಾಳ ತಂಬೂರಿ ಹಿಡಿದು ಭಜನೆ ಮುಖಾಂತರ ವಿನೂತನವಾಗಿ ಪ್ರತಿಭಟಿಸಿದರು.
ವಿಧಾನ ಪರಿಷತ್ ಸದಸ್ಯರಜೋತೆ ಭಾಗವಹಿಸಿರುವ ನಮ್ಮ ಭಾಗದ ವಿಧಾನ ಪರಿಷತ್ ಸದಸ್ಯ ಶ್ರೀ ಶಶೀಲ್ ಜಿ ನಮೋಶಿ. ಚಲನಚಿತ್ರ ಗೀತೆಗಳು ಹಾಡುವುದರ ಮುಖಾಂತರ ಪರಿಷತ್ ಸದಸ್ಯರಿಗೆಉತ್ಸಾಹತುಂಬಿ ಪ್ರತಿಭಟನೆ ನಡೆಸಿದರು.