6 ಲಕ್ಷ ರೂ ಮೌಲ್ಯದ 152 ಕರ್ಕಶ ಶಬ್ದದ ಸೈಲೆನ್ಸರ್ ನಾಶ
ಕೋಲಾರ,ಜು,೨೫- ಅಪಘಾತಗಳ ನಿಯಂತ್ರಿಸಲು ಸಂಚಾರ ನಿಯಮಗಳನ್ನು ಪಾಲಿಸುವಂತಾಗ ಬೇಕು. ಸಂಚಾರ ನಿಯಮಗಳ ಪಾಲನೆಯಿಂದ ಶೇ ೯೦ ರಷ್ಟು ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅಭಿಪ್ರಾಯ ಪಟ್ಟರು.
ನಗರದಲ್ಲಿ ಕಳೆದ ೪-೫ ದಿನಗಳಿಂದ ಸಂಚಾರ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿ ಕರ್ಕಶವಾದ ಸೈಲೆನ್ಸರ್‌ಗಳನ್ನು ವಾಹನಗಳಿಗೆ ಅಳವಡಿಸಿ ಕೊಂಡು ಶಬ್ದ ಮಾಲಿನ್ಯ ಮಾಡುತ್ತಿದ್ದ ಹಿನ್ನಲೆಯಲ್ಲಿ ಕೋಲಾರ ಜಿಲ್ಲಾ ವ್ಯಾಪ್ತಿಯ ವಿವಿಧ ತಾಲ್ಲೂಕುಗಳ ವಾಹನಗಳಿಗೆ ಅಳವಡಿಸಲಾಗಿದ್ದ ಸುಮಾರು ೬ ಲಕ್ಷ ರೂ ಮೌಲ್ಯದ ಸುಮಾರು ೧೫೨ ಕರ್ಕಶ ಶಬ್ದದ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆದು ಅಮ್ಮವಾರಿ ಪೇಟೆಯ ವೃತ್ತದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ರೋಲರ್ ನಿಂದ ಸೈಲೆನ್ಸರ್‌ಗಳನ್ನು ನಾಶ ಪಡೆಸಲು ಚಾಲನೆ ನೀಡಿದ ಬಳಿಕ ಜಿಲ್ಲಾ ಪೊಲೀಸ್ ಮೀಸಲು ಪಡೆಯ ಕಚೇರಿಯಲ್ಲಿ ಮಾದ್ಯಮದವರೊಂದಿಗೆ ಅವರು ಮಾತನಾಡಿದರು,
ಕರ್ಕಶದ ಶಬ್ದ ಮಾಲಿನ್ಯದಿಂದ ಹಿರಿಯ ನಾಗರೀಕರಿಗೆ, ಮಕ್ಕಳಿಗೆ ಹಾಗೂ ರೋಗಿಗಳಿಗೆ ತೊಂದರೆಯಾಗಲಿದೆ. ಇಂಥಹ ಶಬ್ದ ಮಾಲಿನ್ಯವು ಸಂಚಾರ ನಿಯಮದ ವಿರುದ್ದವಾಗಿದ್ದು ಈ ಸಂಬಂಧವಾಗಿ ಹಲವಾರು ಭಾರಿ ವಾಹನಗಳ ಸವಾರರಿಗೆ ಎಚ್ಚರಿಕೆ ನೀಡಲಾಗಿದ್ದರೂ ಸಹ ಬಹುತೇಕ ಯುವಕರು ಶೋಕಿಗಾಗಿ ಕರ್ಕಶ ಶಬ್ದದ ವಾಹನಗಳಲ್ಲಿ ಸಂಚರಿಸುವ ಮೂಲಕ ತಾನೊಬ್ಬ ಡಾನ್, (ರೌಡಿ) ಎಂದು ಬಿಂಬಲಿಸುವ ಸಲುವಾಗಿ ಕಾನೂನು ಬಾಹಿರವಾಗಿ ಇಂಥಹ ಕರ್ಕಶ ಸೈಲೆನ್ಸರ್‌ಗಳನ್ನು ಆಳವಡಿಸಿ ಕೊಳ್ಳುತ್ತಿರುವುದು ಸಮಂಜಸವಲ್ಲ ಎಂದು ತಿಳಿಸಿದರು,
ಯುವಕರು ಕರ್ಕಶವಾದ ಸೈಲೆನ್ಸರ್ ಅಳವಡಿಸಿ ಕೊಂಡು ಕಾನೂನು ಉಲ್ಲಂಘಿಸುವ ಬದಲು ಆ ಹಣವನ್ನು ಪುಸ್ತಕಗಳಿಗೆ ಹಾಕಿ ಅಧ್ಯಾಯನ ಮಾಡುವ ಮೂಲಕ ಜ್ಞಾನವನ್ನು ಅಭಿವೃದ್ದಿ ಪಡೆಸಿ ಕೊಳ್ಳುವಂತಾಗ ಬೇಕೆಂದು ಕಿವಿ ಮಾತು ಹೇಳಿದರು,
ಮುಂದಿನ ದಿನಗಳಲ್ಲಿ ಇದರ ಮುಂದುವರೆದ ಭಾಗವಾಗಿ ಎಲ್.ಇ.ಡಿ ಬಲ್ಪ್‌ಗಳನ್ನು( ಹೈ ಭೀಮ್ ) ವಾಹನಗಳಿಗೆ ಅಳವಡಿಸಿರುವ ವಾಹನಗಳ ವಿರುದ್ದ ಕ್ರಮ ಜರುಗಿಸಲಾಗುವುದು. ಎಲ್.ಇ.ಡಿ. ಬಲ್ಟ್‌ಗಳ ಅತಿಹೆಚ್ಚು ಪ್ರಕಾಶಮಾನವಾದ ಬೆಳಕಿನಿಂದ ಎದುರಿಗೆ ಬರಲಿನ ವಾಹನ ಸವಾರರಿಗೆ ತೊಂದರೆಯಾಗಿ ಅಪಘಾತಗಳಿಗೆ ಎಡೆ ಮಾಡಕೊಡಲಿದೆ. ಇಂಥಹ ಬಲ್ಪ್‌ಗಳನ್ನು ವಾಹನಗಳಿಗೆ ಅಳವಡಿಸುವುದನ್ನು ನಿಷೇಧಿಸಲಾಗಿದೆ.ಅದರೂ ಸಹ ಕೆಲವರು ವಾಹನಗಳಿಗೆ ಅಳವಡಿಸಿ ಕೊಂಡು ಕಾನೂನು ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು.
ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವಿಕೆ ವಿರುದ್ದ ಕಾರ್ಯಚರಣೆ ನಡೆಸಲಾಗುವುದು, ವಾಹನಗಳನ್ನು ಜಪ್ತಿ ಮಾಡಿ ಕೊಂಡು ಪ್ರಕರಣ ದಾಖಲು ಮಾಡಿ ಚಾಲಕರಿಗೆ ಒಂದು ದಿನ ಕಸ್ಟಡಿಗೆ ಒಳಪಡೆಸಲು ಚಿಂತಿಸಿದೆ. ಇದೇ ರೀತಿ ಹೈ ಸ್ಪೀಡ್ ( ಅತಿ ವೇಗ) ವಾಹನ ಚಲಾಯಿಸುವುದು ಅಪರಾಧ ಅಗಿದೆ. ಹೈ ಸ್ಪೀಡ್ ಅಳೆಯುವ ಮಾಪನವನ್ನು ತರಿಸಲಾಗಿದೆ ಅದರಿಂದ ವಾಹನಗಳ ವೇಗವನ್ನು ಅಳೆಯ ಬಹುದಾಗಿದೆ ಇಂಥವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು,
ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಅದು ಎಂಥಹ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು, ಈಗಾಗಲೇ ನಮ್ಮ ಪೊಲೀಸರಿಗೊ ಸಹ ದಂಡ ವಿಧಿಸಿ ಎಚ್ಚರಿಕೆ ನೋಟಿಸ್ ಜಾರಿ ಮಾಡಲಾಗಿದೆ. ಮೊದಲು ನಾವು ಪಾಲನೆ ಮಾಡಿದರೆ ಮಾತ್ರ ಬೇರೆಯವರಿಗೆ ಹೇಳುವುದಕ್ಕೆ ಆರ್ಹರಾಗಿರುತ್ತೇವೆ ಎಂದರು.
ರಸ್ತೆಗಳಲ್ಲಿ ವಿಲೀಂಗ್ ಮಾಡುವವರ ವಿರುದ್ದ ಕ್ರಮ ಕೈಗೊಂಡಿದೆ. ಸಾರ್ವಜನಿಕರು ವಿಲೀಂಗ್ ಮಾಡುವುದನ್ನು ವಿಡೀಯೋ ಮಾಡಿ ಕಳುಹಿಸಿದರೆ ಕ್ರಮ ಜರುಗಿಸುತ್ತೇವೆ. ಅದೇ ರೀತಿ ವಾಯು ಮಾಲಿನ್ಯ ಮಾಡುವಂತ ವಾಹನಗಳ ವಿರುದ್ದವು ಕ್ರಮ ಕೈಗೊಳ್ಳುತ್ತೇವೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೋಢಿಸಬೇಕಾಗಿದೆ ಎಂದು ಹೇಳಿದರು,
ಈ ಸಂದರ್ಭದಲ್ಲಿ ಎ.ಎಸ್.ಪಿ. ರವಿ ಶಂಕರ್, ಡಿ.ವೈ.ಎಸ್.ಪಿ. ನಾಗ್ತೆ ಉಪಸ್ಥಿತರಿದ್ದರು.