ಸಂಗೀತೋತ್ಸವ-ಸ್ವಯಂಸೇವಕರಿಗೆ ಸನ್ಮಾನ
ಕೋಲಾರ,ಜು೨೫:ಕಳೆದ ಮೂರು ದಿನಗಳಿಂದ ಶ್ರೀಕ್ಷೇತ್ರ ಕೈವಾರದ ಯೋಗಿನಾರೇಯಣ ಮಠದಲ್ಲಿ ನಡೆದ ೭೨ ಗಂಟೆಗಳ ಗುರುಪೂಜಾ ಸಂಗೀತೋತ್ಸವದಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸಿದ್ದ ಸ್ಕೌಟ್ಸ್ ಮತ್ತು ಗೈಡ್ಸ್‌ನ ಐವತ್ತಕ್ಕೂ ಹೆಚ್ಚು ಸ್ವಯಂ ಸೇವಕರನ್ನು ಶ್ರೀಯೋಗಿನಾರೇಯಣ ಮಠದಿಂದ ಗೌರವಿಸಿ ಸನ್ಮಾನಿಸಿ ಪ್ರಶಸ್ತಿಪತ್ರಗಳನ್ನು ನೀಡಲಾಯಿತು.
ಗುರುಪೂಜಾ ಸಂಗೀತೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸಂಗೀತದ ರಸದೌತಣವನ್ನು ಸವಿದರು. ದೇವಾಲಯದ ಸರದಿಸಾಲು ನಿರ್ವಹಣೆಯಲ್ಲಿ, ದಾಸೋಹ ಭವನದ ಭೋಜನ ವ್ಯವಸ್ಥೆಯಲ್ಲಿ, ಮುಖ್ಯ ಸಭಾಂಗಣದಲ್ಲಿ ಸ್ವಯಂ ಸೇವಕರಾಗಿ ಅವಿರತವಾಗಿ ಸೇವೆಯನ್ನು ಸಲ್ಲಿಸಿದ್ದರು.
ಸನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸಕ ಯರಮರೆಡ್ಡಿಹಳ್ಳಿ ವೆಂಕಟರಮಣಪ್ಪ, ಸ್ಕೌಟ್ಸ್ ಮತ್ತು ಗೈಡ್ಸ್‌ನ ಪ್ರಮುಖರು, ಮಠದ ಎಸ್.ಎನ್.ಜಗದೀಶ್ ಕುಮಾರ್, ಗಂಗರಾಜು, ಮನೋಜ್ ಕುಮಾರ್, ರವೀಂದ್ರನಾಯ್ಡು ಮುಂತಾದವರು ಉಪಸ್ಥಿತರಿದ್ದರು. ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯಿಂದ ಸ್ವಯಂ ಸೇವಕರು ಬಂದಿದ್ದರು.