ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ ಉಪ ಮಹಾಪೌರ ದಿನೇಶ ಹಳ್ಳಿ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೨೫: ನಗರದ ವಾರ್ಡ್ ನಂ ೧೮ರ, ಮಹಾನಗರ ಪಾಲಿಕೆ ಸದಸ್ಯ, ಉಪ ಮಹಾಪೌರ ದೀನೇಶ ಹಳ್ಳಿ ಅವರÀ ನೇತೃತ್ವದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಡೆಂಘೀ ಮಹಾಮಾರಿಯನ್ನು ಓಡಿಸಲು ಸ್ವತಃ ಉಪಮಹಾಪೌರ ದಿನೇಶ ಹಳ್ಳಿಯವರೆ ವಾರ್ಡಿನಲ್ಲಿ “ಂquಚಿ ಏ-ಔಣhಡಿiಟಿe” ಬಿ ಲಾರ್ವಾ ಕ್ರಿಮಿನಾಶಕ ಸಿಂಪಡಿಸುವ ಮೂಲಕ ವಾರ್ಡಿನ ಸ್ವಚ್ಚತೆ ಬಗ್ಗೆ ಹಾಗೂ ಡೆಂಘೀ ಮಹಾಮಾರಿ ನಿಯಂತ್ರಣ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿಗಳು ಆರೋಗ್ಯ ಮೇಲ್ವಿಚಾರಕ ದಯಾನಂದ ಅಲ್ಲಿಬಾದಿ, ಚಿದಾನಂದ ತಳಕೇರಿ, ಸೈಯದ್ ಜಾಗಿರದಾರ, ಪುನೀತ್ ಮರಾಠೆ ಕ್ರಿಮಿನಾಶಕ ಸಿಂಪಡಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.