ಉದ್ಯಮಿಗಳ ಧೋರಣೆ ಖಂಡಿಸಿ ಕರವೇ ಪ್ರತಿಭಟನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೨೫:ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳ ಉದ್ಯೋಗ ಮೀಸಲಾತಿ ನೀಡುವ ವಿಧೇಯಕವನ್ನು ವಿರೋಧಿಸುತ್ತಿರುವ ನಾಡ ವಿರೋಧಿ ಉದ್ಯಮಿಗಳ ಧೋರಣೆ ಖಂಡಿಸಿ ಹಾಗೂ ಉಷ್ಣ ವಿದ್ಯುತ್ ಉತ್ಪಾದನೆಗಾಗಿ ಕೂಡಗಿ ಎನ್.ಟಿ.ಪಿ.ಸಿಗೆ ಭೂಮಿ ಕಳೆದುಕೊಂಡ ಉದ್ಯೋಗಕ್ಕೆ ತೆಗೆದುಕೊಳ್ಳದೆ ಇರುವುದನ್ನು ಖಂಡಿಸಿ ಕರ್ನಾಟಕರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ)ದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಸವರಾಜ ತಾಳಿಕೋಟಿ ಮಾತನಾಡಿ, ಖಾಸಗಿ ವಲಯದ ಸಂಸ್ಥೆಗಳ ಉದ್ಯಮಿಗಳು ಸರ್ಕಾರವನ್ನು ಬ್ಲಾಕ್‌ಮೇಲ್ ಮಾಡುವ ಮೂಲಕ ವಿಧೇಯಕವನ್ನು ವಾಪಸ್ ಪಡೆಯುವಂತೆ ಮಾಡಿವೆ. ಸರ್ಕಾರ ಅಧಿವೇಶನದಲ್ಲಿ ಮಂಡನೆ ಮಾಡಿರುವ ಈ ವಿಧೇಯಕವನ್ನು ಮುಂದುವರಿಸಬೇಕು. ಕರ್ನಾಟಕದಲ್ಲಿ ಲಕ್ಷಾಂತರ ಜನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೂರ್ಣಗೊಳಿಸಿ ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ಪ್ರಮುಖ ಕಾರಣ ಬೇರೆ ರಾಜ್ಯದ ಜನರು ಹೆಚ್ಚಿನ ಪ್ರಮಾಣದಲ್ಲಿ ಆ ಕೆಲಸಗಳ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಅರ್ಹತೆ ಇದ್ದರೂ ಸಹ ನಮ್ಮ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಆದರಿಂದ ಸರ್ಕಾರ ಹೊರಡಿಸಿರುವ ಈಗಿನ ವಿಧೇಯಕದ ಜೊತೆ ಖಾಸಗಿ ಕಂಪನಿಗಳಲ್ಲಿ ಕಡ್ಡಾಯವಾಗಿ ಶೇ.೮೦ರಷ್ಟು ಆಡಳಿತಾತ್ಮಕ ಹುದ್ದೆಗಳಲ್ಲಿ ಮೀಸಲಾತಿಯನ್ನು ಕಡ್ಡಾಯಗೊಳಿಸಬೇಕು. ಈ ಮೀಸಲಾತಿಗೆ ವಿರೋಧ ಮಾಡುತ್ತಿರುವ ಕಂಪನಿಗಳನ್ನು ರಾಜ್ಯ ಬಿಟ್ಟು ಹೊರ ಹಾಕಬೇಕು. ಕೂಡಗಿ ಎನ್.ಟಿ.ಪಿ.ಸಿ ಉಷ್ಣ ವಿದ್ಯುತ್ ಉತ್ಪಾದನೆಗೆ ಸಾವಿರಾರು ಎಕರೆ ಭೂಮಿಯನ್ನು ಕೊಟ್ಟಂತಹ ಸುತ್ತಮುತ್ತಲಿನ ಗ್ರಾಮದ ರೈತರಿಗೆ ಉದ್ಯೋಗ ಕೊಡದೆ ಹೋದರೆ ನಮ್ಮ ಸಂಘಟನೆಯಿAದ ಉಗ್ರÀ ಹೋರಾಟ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಬಾಳು ಗಣೊರೆ, ಬಸವರಾಜ ಮೊರಖಬಾವಿ, ಮಹಾಂತೇಶ ಹಿರೇಮಠ, ತಾಲಾಧ್ಯಕ್ಷ Àಆನಂದ ಹಡಗಲಿ, ಶಿವು ಮಸಳಿ, ಶಿವು ಬಗಲಿ, ಶ್ರೀಕಾಂತ ರಾಠೋಡ, ಶರಣು ಯಾತದ, ಆನಂದ ಪವಾರ, ಮಂಜು ತೇಲಿ, ಮಹೇಶ ಹಾರಿವಾಲ, ರೋಹಿತ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.